ಆಂಧ್ರಪ್ರದೇಶ:ಕಾರ್ಖಾನೆ ಪರಿಶೀಲನಾ ಕಚೇರಿಯಲ್ಲಿ ಹಿರಿಯ ಸಹಾಯಕಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ. ಕುಸುಮಾ ಕುಮಾರಿ ಎಂಬುವರು ವ್ಯಕ್ತಿಯೊಬ್ಬರಿಂದ ಲಂಚ ತೆಗೆದುಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ನಡೆದಿದೆ.
ಬಿ. ಕುಸುಮಾ ಕುಮಾರಿ ಅವರು ಸುಮಾರು 18 ವರ್ಷದಿಂದ ಕಚೇರಿಯಲ್ಲಿ ಹಿರಿಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಈ ಸಿಸಿಟಿವಿ ದೃಶ್ಯವನ್ನು ನೋಡಿರುವ ಜನರು ಈಕೆ ಕೆಲಸದ ಬಗ್ಗೆ ಎಷ್ಟು ಬೇಜವಾಬ್ದಾರಿ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.