ಸೂರ್ಯಪೇಟೆ (ತೆಲಂಗಾಣ): ಪಟಾಕಿ ಖರೀದಿಸಲು ಹೋಗಿದ್ದ ವೇಳೆ ಐದು ವರ್ಷದ ಹುಡುಗ ನಾಪತ್ತೆಯಾಗಿರುವ ಘಟನೆ ತೆಲಂಗಾಣದ ಸೂರ್ಯಪೇಟೆಯಲ್ಲಿ ನಡೆದಿದೆ.
ಗೌತಮ್ ಎಂಬ ಬಾಲಕ ಸ್ಥಳೀಯ ಅಂಗಡಿಯಲ್ಲಿ ಪಟಾಕಿ ತರಲು ಹೋಗಿದ್ದ. ಆದರೆ, ಸಂಜೆಯಾದರೂ ಮನೆಗೆ ಬಾರದಿದ್ದಾಗ ಪೋಷಕರು ಗಾಬರಿಗೊಂಡು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆಗಾಗಿ ಮೂವರು ಎಸ್ಐಗಳ ನೇತೃತ್ವದಲ್ಲಿ ತಂಡ ರಚಿಸಿದ್ದಾರೆ. ಅಂಗಡಿಯ ಸಿಸಿ ಟಿವಿ ದೃಶ್ಯ ಪರಿಶೀಲಿಸಿ ತನಿಖೆ ಮುಂದುವರಿಸಿದ್ದು, ಬಾಲಕ ಅಪಹರಣವಾಗಿರುವ ಶಂಕೆ ಮೇರೆಗೆ ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಾಲಕನ ತಂದೆ ಮಹೇಶ್ ಲಾರಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಯಾವುದೇ ಶತ್ರುಗಳಿಲ್ಲ, ಯಾರೋ ಹಣದ ಆಸೆಗೆ ಅಪಹರಿಸಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.