ಕರ್ನಾಟಕ

karnataka

By

Published : Feb 17, 2021, 11:15 AM IST

Updated : Feb 17, 2021, 12:38 PM IST

ETV Bharat / bharat

ಟೂಲ್​ಕಿಟ್​ ಪ್ರಕರಣ: ನಿಕಿತಾ ಜಾಕೋಬ್​ಗೆ 3 ವಾರಗಳ ನಿರೀಕ್ಷಣಾ ಜಾಮೀನು

ಬಂಧನ ಭೀತಿ ಎದುರಿಸುತ್ತಿರುವ ವಕೀಲೆ ನಿಕಿತಾ ಜಾಕೋಬ್​ಗೆ 3 ವಾರಗಳ ನಿರೀಕ್ಷಣಾ ಜಾಮೀನು ನೀಡಿ ಬಾಂಬೆ ಹೈಕೋರ್ಟ್​ ಆದೇಶ ಹೊರಡಿಸಿದೆ.

Bombay HC to pass order on activist Nikita Jacob transit bail today
ಇಂದು ನಿಕಿತಾ ಜಾಕೋಬ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ

ಮುಂಬೈ: ಟೂಲ್‌ಕಿಟ್ ಪ್ರಕರಣದ ಸಂಬಂಧ ಬಂಧನ ಭೀತಿ ಎದುರಿಸುತ್ತಿರುವ ವಕೀಲೆ ನಿಕಿತಾ ಜಾಕೋಬ್​ಗೆ 3 ವಾರಗಳ ನಿರೀಕ್ಷಣಾ ಜಾಮೀನು ನೀಡಿ ಬಾಂಬೆ ಹೈಕೋರ್ಟ್​ ಆದೇಶ ಹೊರಡಿಸಿದೆ.

ದೆಹಲಿಯಲ್ಲಿ ಗಣರಾಜ್ಯೋತ್ಸವ ಗಲಭೆಗೆ ಟೂಲ್​​ಕಿಟ್​ ಬಳಸಿದ ಆರೋಪದ ಮೇಲೆ ವಕೀಲೆ ನಿಕಿತಾ ಜಾಕೋಬ್ ಮತ್ತು ಸಾಮಾಜಿಕ ಹೋರಾಟಗಾರ ಶಾಂತನು ಮುಲುಕ್ ವಿರುದ್ಧ ದೆಹಲಿ ಪೊಲೀಸರು ಅರೆಸ್ಟ್​ ವಾರೆಂಟ್​ ಹೊರಡಿಸಿದ್ದರು. ಈ ಹಿನ್ನೆಲೆ ಇಬ್ಬರೂ ನಿರೀಕ್ಷಣಾ ಜಾಮೀನು ಕೋರಿ ಬಾಂಬೆ ಹೈಕೋರ್ಟ್​ನಲ್ಲಿ ಮನವಿ ಸಲ್ಲಿಸಿದ್ದರು.

ನಿನ್ನೆ ಈ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್​ ಸಾಮಾಜಿಕ ಹೋರಾಟಗಾರ ಶಾಂತನು​ಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ನಿಕಿತಾ ಜಾಕೋಬ್​ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್​ ಮುಂದೂಡಿತ್ತು.

ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ನಿಕಿತಾ ಜಾಕೋಬ್​ಗೆ 3 ವಾರಗಳ ನಿರೀಕ್ಷಣಾ ಜಾಮೀನು ನೀಡಿದೆ.

ಇದನ್ನೂ ಓದಿ:ದೆಹಲಿ ಹಿಂಸಾಚಾರ ಪ್ರಕರಣದ ಮೋಸ್ಟ್ ವಾಂಟೆಡ್ ಆರೋಪಿ ಅರೆಸ್ಟ್​: ಈತನಿಗೆ ಪ್ರಚೋದಿಸಿತ್ತು ‘ಆ’ ವಿಡಿಯೋ!

ರೈತರ ಪ್ರತಿಭಟನೆಗೆ ಸಂಬಂಧಿಸಿದ 'ಟೂಲ್​ಕಿಟ್' ಹರಡಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ವಕೀಲೆ ನಿಕಿತಾ ಜಾಕೋಬ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದ ನಂತರ, ಅವರು ಸೋಮವಾರ ಪೊಲೀಸ್ ಕ್ರಮದ ವಿರುದ್ಧ ರಕ್ಷಣೆಗಾಗಿ ಬಾಂಬೆ ಹೈಕೋರ್ಟ್‌ ಮೊರೆಹೋಗಿದ್ದರು.

Last Updated : Feb 17, 2021, 12:38 PM IST

ABOUT THE AUTHOR

...view details