ಕರ್ನಾಟಕ

karnataka

By

Published : Jan 16, 2023, 10:39 PM IST

ETV Bharat / bharat

ಕಲ್ಲಿನ ಕ್ವಾರಿಯಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹ ಪತ್ತೆ.. ಸಾವಿನ ಹಿಂದೆ ದುಷ್ಕೃತ್ಯ ಶಂಕಿಸಿದ ಪೊಲೀಸರು

ಕಲ್ಲಿನ ಕ್ವಾರಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವಗಳು ಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿ ನಡೆದಿದೆ.

ಕಲ್ಲಿನ ಕ್ವಾರಿ
ಕಲ್ಲಿನ ಕ್ವಾರಿ

ಅಸನ್ಸೋಲ್ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿ ಭಾನುವಾರ ರಾತ್ರಿ ಕ್ವಾರಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವಗಳು ಪತ್ತೆಯಾಗಿವೆ. ಮೃತರು ಜನವರಿ 10 ರಿಂದ ನಾಪತ್ತೆಯಾಗಿದ್ದರು. ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ ನಂತರ ಇದು ಆತ್ಮಹತ್ಯೆ ಎಂದು ತಿಳಿಸಿದ್ದಾರೆ. ಆದರೆ, ಸಂಬಂಧಿಕರು ಸಾವಿನ ಹಿಂದೆ ದುಷ್ಕೃತ್ಯ ನಡೆದಿರುವುದಾಗಿ ಶಂಕಿಸಿದ್ದಾರೆ.

ನಾಲ್ವರ ಮೃತ ದೇಹಗಳನ್ನು ಬಿಜೋಯ್ ರಾವುತ್ (41), ಅವರ ಪತ್ನಿ ಮಿಥು ರಾವುತ್ (35) ಮತ್ತು ಅವರ ಇಬ್ಬರು ಮಕ್ಕಳಾದ ಲಾಡೋ (2) ಮತ್ತು ಕೃಷ್ಣ (11) ಎಂದು ಗುರುತಿಸಲಾಗಿದ್ದು, ಕಲ್ಲು ತೆಗೆಯಲು ಅಗೆದಿದ್ದ ಕ್ವಾರಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡುಬರುತ್ತದೆ. ಆದರೆ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ವರದಿ ಬಂದ ನಂತರ ನಾವು ಸಾವಿಗೆ ನಿಖರವಾದ ಕಾರಣವನ್ನು ತಿಳಿಯಲು ಸಾಧ್ಯವಾಗುತ್ತದೆ. ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿತ್ತು. ಇದು ಆತ್ಮಹತ್ಯೆಗೆ ಕಾರಣವಾಗಿರಬಹುದು' ಎಂದು ಹಿರಿಯ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

’’ವಿಜಯ್ ಅಸನ್ಸೋಲ್ ವಿದ್ಯುತ್ ಇಲಾಖೆಯ ತಾತ್ಕಾಲಿಕ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದರು. ಆದರೆ, ಅವನ ಮಗಳು ಅಸನ್ಸೋಲ್‌ ಅತ್ಯಂತ ದುಬಾರಿ ಇಂಗ್ಲೀಷ್​ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದರು. ಅವರು ಕುಟುಂಬವನ್ನು ನಡೆಸುವುದು ಕಷ್ಟಕರವೆಂದು ತೋರುತ್ತಿದೆ. ಒಂದಷ್ಟು ಸಾಲವನ್ನೂ ಪಡೆದಿದ್ದಾರೆ. ಈ ಎಲ್ಲಾ ಅಂಶಗಳು ಅವರ ಆತ್ಮಹತ್ಯೆಗೆ ಕಾರಣವಾಗಿರಬಹುದು. ನಾವು ಪ್ರಕರಣದ ಎಲ್ಲ ಅಂಶಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರ ವಾದ ಒಪ್ಪಲು ಸಿದ್ಧರಿಲ್ಲದ ಕುಟುಂಬ:'ಕುಟುಂಬವು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಹೇಳಿದ್ದರೂ ಕುಟುಂಬದ ಸದಸ್ಯರು ಪೊಲೀಸರ ವಾದವನ್ನು ಒಪ್ಪಲು ಸಿದ್ಧರಿಲ್ಲ. ನನ್ನ ತಾಯಿಯ ಚಿಕ್ಕಪ್ಪನಿಗೆ ಯಾವುದೇ ಶತ್ರುಗಳಿರಲಿಲ್ಲ. ಅವರು ಶಾಂತಿ ಪ್ರಿಯ ಜನರಾಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ನಾವು ಸಂಪೂರ್ಣ ತನಿಖೆಯನ್ನು ಬಯಸುತ್ತೇವೆ' ಎಂದು ವಿಜಯ್ ಅವರ ಸೋದರಳಿಯ ಪಿಂಟು ಹೇಳಿದ್ದಾರೆ.

ಜನವರಿ 10 ರಂದು ರಾತ್ರಿ 9.30 ರ ಸುಮಾರಿಗೆ ಅವರು ತಮ್ಮ ಮನೆಯಿಂದ ಹೊರ ಬರುವುದನ್ನು ನಾನು ಕಂಡುಕೊಂಡೆ. ನಾನು ಅವರನ್ನು ಕೇಳಿದಾಗ, ಅವರು ತಮ್ಮ ಸಂಬಂಧಿಕರೊಬ್ಬರನ್ನು ಠಾಣೆಯಿಂದ ಕರೆದುಕೊಂಡು ಹೋಗುವುದಾಗಿ ಹೇಳಿದರು. ಅವರು ಬಹಳ ಸಮಯದವರೆಗೆ ಮನೆಗೆ ತಲುಪದಿದ್ದಾಗ, ನಾನು ಅವರಿಗೆ ಕರೆ ಮಾಡಲು ಪ್ರಯತ್ನಿಸಿದೆ. ಆದರೆ, ಅವರ ಫೋನ್ ಸ್ವಿಚ್ಡ್​​ ಆಫ್ ಆಗಿತ್ತು. ಇಂದು ಅವರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದು ತಿಳಿದು ಬಂದಿದೆ ಎಂದು ಬಿಜೋಯ್ ಬಾಡಿಗೆಗೆ ವಾಸವಿದ್ದ ಮನೆಯ ಮಾಲೀಕರು ತಿಳಿಸಿದ್ದಾರೆ. ಅವರದು ಬಹಳ ಒಳ್ಳೆಯ ಕುಟುಂಬ. ಅವರು ಜಗಳವಾಡುವುದನ್ನು ನಾನು ಎಂದಿಗೂ ನೋಡಿಲ್ಲ ಎಂದು ಅವರು ಹೇಳಿದ್ದಾರೆ.

ಓದಿ:ಕೌಟುಂಬಿಕ ಕಲಹ: ಐದು ಅಡಿ ರಾಡ್​ನಿಂದ ಪತ್ನಿಗೆ ಚುಚ್ಚಿದ ಪತಿ

ABOUT THE AUTHOR

...view details