ಕರ್ನಾಟಕ

karnataka

ETV Bharat / bharat

ಗಂಗಾ ನದಿಯಲ್ಲಿ ಮುಳುಗಿದ ಐವರು ಎಂಬಿಬಿಎಸ್​​ ವಿದ್ಯಾರ್ಥಿಗಳು: ಇಬ್ಬರ ರಕ್ಷಣೆ, ಮೂವರ ಶವಗಳು ಪತ್ತೆ

ಉತ್ತರ ಪ್ರದೇಶದ ಬುದೌನ್ ​​ಜಿಲ್ಲೆಯಲ್ಲಿ ಶಿವರಾತ್ರಿ ನಿಮಿತ್ತ ಗಂಗಾ ನದಿಯಲ್ಲಿ ಸ್ನಾನಕ್ಕೆಂದು ಇಳಿದ ಐವರು ಎಂಬಿಬಿಎಸ್ ವಿದ್ಯಾರ್ಥಿಗಳ ಪೈಕಿ ಮೂವರು ಸಾವಿಗೀಡಾಗಿದ್ದಾರೆ.

bodies-of-3-mbbs-students-fished-out-from-ganga-in-ups-budaun
ಗಂಗಾ ನದಿಯಲ್ಲಿ ಮುಳುಗಿದ ಐವರು ಎಂಬಿಬಿಎಸ್​​ ವಿದ್ಯಾರ್ಥಿಗಳು: ಇಬ್ಬರ ರಕ್ಷಣೆ, ಮೂವರ ಶವಗಳು ಪತ್ತೆ

By

Published : Feb 19, 2023, 5:28 PM IST

ಬುದೌನ್ (ಉತ್ತರ ಪ್ರದೇಶ): ಗಂಗಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಮೂವರು ಎಂಬಿಬಿಎಸ್​​ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬುದೌನ್ ​​ಜಿಲ್ಲೆಯಲ್ಲಿ ನಡೆದಿದೆ. ನಿನ್ನೆಯಿಂದ ನೀರಿನಲ್ಲಿ ಕಣ್ಮರೆಯಾಗಿದ್ದ ವಿದ್ಯಾರ್ಥಿಗಳ ಶವಗಳು ಇಂದು ಪತ್ತೆಯಾಗಿದೆ. ಮೃತರನ್ನು ಜೈ ಮೌರ್ಯ (26), ಪವನ್ ಯಾದವ್​ (24) ಮತ್ತು ನವೀನ್ ಸೆಂಗರ್ (22) ಎಂದು ಗುರುತಿಸಲಾಗಿದೆ.

ಐವರು ವಿದ್ಯಾರ್ಥಿಗಳ ತಂಡ: ಶನಿವಾರ (ಫೆಬ್ರವರಿ 18) ಮಧ್ಯಾಹ್ನ ಇಲ್ಲಿನ ಕಛ್ಲಾ ಗಂಗಾ ಘಾಟ್​ಗೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ಬಂದಿದ್ದರು. ಐವರು ಸಹ ಗಂಗಾ ಸ್ನಾನದ ಮಾಡಲೆಂದು ಆಳದ ನೀರಿಗೆ ಇಳಿದು ನಾಪತ್ತೆಯಾಗಿದ್ದರು. ಆಗ ತಕ್ಷಣವೇ ಸ್ಥಳೀಯ ಈಜುಗಾರರು ರಾಜಸ್ಥಾನದ ಭರತ್‌ಪುರದ ನಿವಾಸಿ ಅಂಕುಶ್ ಗೆಹ್ಲೋಟ್ ಮತ್ತು ಗೋರಖ್‌ಪುರದ ಪ್ರಮೋದ್ ಯಾದವ್​ ಎಂಬುವರನ್ನು ರಕ್ಷಣೆ ಮಾಡಿದ್ದರು.

ಇದನ್ನೂ ಓದಿ:ದೊಡ್ಡಬೆಳವಂಗಲ ಯುವಕರ ಹತ್ಯೆ: ಕಾಲಿಗೆ ಗುಂಡು ಹಾರಿಸಿ ಇಬ್ಬರು ಆರೋಪಿಗಳ ಬಂಧನ

ಉಳಿದ ಮೂವರು ನದಿಯಲ್ಲಿ ಕಣ್ಮರೆಯಾಗಿದ್ದರು. ನಂತರ ವಿಷಯ ತಿಳಿದು ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಶೋಧ ಕಾರ್ಯ ನಡೆಸಿದ್ದರು. ಅಲ್ಲದೇ, ಎನ್‌ಡಿಆರ್‌ಎಫ್ ತಂಡವನ್ನು ಜಿಲ್ಲಾಡಳಿತ ಕರೆಸಿ ಕಾರ್ಯಾಚರಣೆ ಕೈಗೊಂಡಿತ್ತು. ಶನಿವಾರ ತಡರಾತ್ರಿಯವರೆಗೂ ಶೋಧ ಕಾರ್ಯ ನಡೆಸಿದ್ದರೂ ಮೃತದೇಹಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಭಾನುವಾರ ಬೆಳಗ್ಗೆ ಮತ್ತೆ ಎನ್‌ಡಿಆರ್‌ಎಫ್ ತಂಡ ಶೋಧ ಕಾರ್ಯಾಚರಣೆ ಆರಂಭಿಸಿತ್ತು.

ಎಂಟು ಗಂಟೆ ನಡೆದ ಶೋಧ ಕಾರ್ಯಾಚರಣೆ.. ಈ ವೇಳೆ ಕಛ್ಲಾ ಗಂಗಾ ಘಾಟ್‌ನಿಂದ 500 ಮೀಟರ್ ದೂರದಲ್ಲಿ ಮೂವರ ಮೃತದೇಹಗಳು ಕೂಡ ಪತ್ತೆಯಾಗಿವೆ. ಸುಮಾರು ಎಂಟು ಗಂಟೆ ಕಾಲಗಳ ಈ ಶೋಧ ಕಾರ್ಯಾಚರಣೆ ಜರುಗಿದೆ. ನವೀನ್ ಸೆಂಗರ್​ನನ್ನು ಹತ್ರಾಸ್ ನಿವಾಸಿ, ಜೈ ಮೌರ್ಯನನ್ನು ಜೌನ್‌ಪುರ ನಿವಾಸಿ, ಪವನ್ ಯಾದವ್​ನನ್ನು ಬಲ್ಲಿಯಾ ನಿವಾಸಿ ಎಂದು ಗುರುತಿಸಲಾಗಿದೆ. ಎಲ್ಲರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಬುಡೌನ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೋಜ್ ಕುಮಾರ್ ತಿಳಿಸಿದ್ದಾರೆ.

ಒಬ್ಬರನ್ನು ಉಳಿಸಲು ಹೋಗಿ.. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲ ಡಾ.ಧರ್ಮೇಂದ್ರ ಗುಪ್ತಾ ಪ್ರತಿಕ್ರಿಯಿಸಿ, ಐವರು ವಿದ್ಯಾರ್ಥಿಗಳು ಸಹ 2019ರ ಎಂಬಿಬಿಎಸ್​ ಬ್ಯಾಚ್‌ನವರಾಗಿದ್ದು, ಮೂರನೇ ವರ್ಷದಲ್ಲಿ ಓದುತ್ತಿದ್ದರು. ಆದರೆ, ಎಲ್ಲರೂ ಕಾಲೇಜು ಆಡಳಿತ ಮಂಡಳಿಗೆ ಮಾಹಿತಿ ನೀಡದೆ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದರು ಎಂದು ಹೇಳಿದ್ದಾರೆ. ಮತ್ತೊಂದೆಡೆ, ಬದುಕುಳಿದ ಅಂಕುಶ್ ಮಾತನಾಡಿ, ಶಿವರಾತ್ರಿ ಹಬ್ಬದ ನಿಮಿತ್ತ ಕಾಲೇಜಿಗೆ ರಜೆ ಇತ್ತು. ಹೀಗಾಗಿ ಗಂಗಾ ಸ್ನಾನ ಮಾಡಲು ಬಂದಿದ್ದೆವು. ನಾವೆರಲ್ಲೂ ದಡದಲ್ಲಿ ಸ್ನಾನ ಮಾಡುತ್ತಿದ್ದೆವು. ಮೊದಲಿಗೆ ಒಬ್ಬರು ನೀರಿನಲ್ಲಿ ಮುಳುಗಿದರು. ನಂತರ ಆ ಅವರನ್ನು ರಕ್ಷಿಸಲು ನಾಲ್ವರು ಸಹ ಹೋಗಿದೆವು. ಬಳಿಕ ಮತ್ತಿಬ್ಬರು ನೀರಿನಲ್ಲಿ ಮುಗಿಳಿದರು ಎಂದು ವಿವರಿಸಿದ್ದಾರೆ.

ಇದನ್ನೂ ಓದಿ:ಹಾವೇರಿ: ಜಾಗದ ಸಲುವಾಗಿ ಹೊಡೆದಾಟ, 8 ಮಂದಿಗೆ ಗಾಯ, ಓರ್ವ ಗಂಭೀರ

ABOUT THE AUTHOR

...view details