ಚೆನ್ನೈ, ತಮಿಳುನಾಡು :ವಿಧಾನಸಭಾ ಚುನಾವಣೆ ಹಿನ್ನೆಲೆ ತಮಿಳುನಾಡು ರಾಜಕೀಯ ಅಖಾಡ ರಂಗೇರಿದೆ. ಅಲ್ಲಿನ ಜಾಲತಾಣಗಳೂ ಜನರನ್ನು ತಲುಪಲು ವಿವಿಧ ತಂತ್ರಗಳನ್ನು ಹೂಡುತ್ತಿವೆ. ಈಗ ತಮಿಳು ಬಿಜೆಪಿಯ ಅಧಿಕೃತ ಟ್ವಿಟರ್ ಖಾತೆ ಅವಾಂತರ ಸೃಷ್ಟಿಸಿದೆ.
ಕಾಂಗ್ರೆಸ್ ನಾಯಕ ಮತ್ತು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಸೊಸೆ ಶ್ರೀನಿಧಿ ಕಾರ್ತಿ ಚಿದಂಬರಂ ಅವರ ಭರತನಾಟ್ಯದ ವಿಡಿಯೋದಲ್ಲಿನ ಫೋಟೋವನ್ನ ತಮಿಳುನಾಡು ಬಿಜೆಪಿ ತನ್ನ ಪ್ರಮೋಷನಲ್ ವಿಡಿಯೋದಲ್ಲಿ ಬಳಸಿಕೊಂಡಿದೆ. ಆ ವಿಡಿಯೋವನ್ನು ಆಧರಿಸಿ 'ರಾಜ್ಯದಲ್ಲಿ ಕಮಲ ಅರಳುತ್ತಿದೆ' ಎಂದು ತಲೆಬರಹ ನೀಡಿದೆ.
ಇದಕ್ಕೆ ಟ್ವಿಟರ್ನಲ್ಲೇ ಪ್ರತಿಕ್ರಿಯೆ ನೀಡಿರುವ ಶ್ರೀನಿಧಿ ಚಿದಂಬರಂ, ಬಿಜೆಪಿ ತನ್ನ ಚುನಾವಣೆಯಲ್ಲಿ ಬಳಕೆ ಮಾಡಿಕೊಂಡಿರುವ ಭಾವಚಿತ್ರ ನನ್ನದು ಎಂದಿದ್ದಾರೆ. ತಮಿಳುನಾಡಿನಲ್ಲಿ ಕಮಲ ಅರಳುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.