ಕರ್ನಾಟಕ

karnataka

ETV Bharat / bharat

ಹೈದರಾಬಾದ್​ 'ಭಾಗ್ಯನಗರ' ಎಂದು ಘೋಷಿಸಿ..; ಬಂಡಿ ಸಂಜಯ್ ಒತ್ತಾಯ - ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್

ಕೆಸಿಆರ್ ತಮ್ಮ ನೀತಿಗಳನ್ನು ಬದಲಾಯಿಸದಿದ್ದರೆ ಸಾರ್ವಜನಿಕ ಚಳವಳಿಗಳು ಪ್ರಾರಂಭವಾಗುತ್ತವೆ. ಬಿಜೆಪಿ ಕಾರ್ಯಕರ್ತರ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಬಂಡಿ ಸಂಜಯ್​ ಸಿಎಂ ಗೆ ಎಚ್ಚರಿಕೆ ನೀಡಿದ್ದಾರೆ.

Telangana
ಬಂಡಿ ಸಂಜಯ್

By

Published : Dec 5, 2020, 9:12 PM IST

ಹೈದರಾಬಾದ್(ತೆಲಂಗಾಣ): ಜನರ ಬೆಂಬಲದೊಂದಿಗೆ ಗ್ರೇಟರ್ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದಿರುವುದು ಸಂತಸ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಸಂತೋಷ ವ್ಯಕ್ತಪಡಿಸಿದ್ದಾರೆ.

ಚುನಾವಣೆಗೆ ಅಲ್ಪಾವಧಿ ಇದ್ದುದರ ಹೊರತಾಗಿಯೂ, ಕಾರ್ಯಕರ್ತರೆಲ್ಲರೂ ಒಗ್ಗಟ್ಟಿನಿಂದ ಹೋರಾಡಿದರು. ಈ ಚುನಾವಣೆ ಅವಸರದಿಂದ ನಡೆದಿದ್ದು, ಅಭ್ಯರ್ಥಿಗಳನ್ನು ಅಂತಿಮಗೊಳಿಸಲೂ ಸಹ ಸಮಯ ನೀಡಲಾಗಿಲ್ಲ. ಟಿಆರ್​ಎಸ್​ ಪಕ್ಷವು ತಪ್ಪು ಮಾರ್ಗಗಳಲ್ಲಿ ಗೆಲ್ಲಲು ಶತ ಪ್ರಯತ್ನಗಳನ್ನು ಮಾಡಿತ್ತು ಎಂದು ಅವರು ಟೀಕಿಸಿದರು. ರಾಜ್ಯ ಚುನಾವಣಾ ಆಯೋಗ ಕೂಡಾ ಟಿಆರ್‌ಎಸ್ ಅಡಿಯಲ್ಲಿಯೇ ಕೆಲಸ ಮಾಡಿದೆ ಎಂದು ಅವರು ಆರೋಪಿಸಿದರು.

ರಾಷ್ಟ್ರೀಯ ನಾಯಕರ ಆಗಮನದೊಂದಿಗೆ ತೆಲಂಗಾಣದಲ್ಲಿ ಪಕ್ಷದ ಬಗ್ಗೆ ವಿಶ್ವಾಸ ಹೆಚ್ಚಾಗಿದೆ. ಬಿಜೆಪಿಯ ಪ್ರತಿ ಚುನಾವಣೆಯನ್ನೂ ಗಂಭೀರವಾಗಿ ಪರಿಗಣಿಸುತ್ತಿರುವ ಸಂಜಯ್, ಸಾಮಾಜಿಕ ಮಾಧ್ಯಮಗಳ ಮೂಲಕದ ಪ್ರಚಾರವು ಉಪಯುಕ್ತವಾಗಿದೆ ಎಂದು ಹೇಳಿದರು. ಗ್ರೇಟರ್‌ನಲ್ಲಿ ಬಿಜೆಪಿಯ ಮತ ಶೇ.10 ರಿಂದ ಶೇ 35.56 ಕ್ಕೆ ಏರಿದೆ. ಟಿಆರ್‌ಎಸ್‌ನಲ್ಲಿ ಜನರಿಗೆ ಎಷ್ಟು ವಿರೋಧವಿದೆ, ಬಿಜೆಪಿಯಲ್ಲಿ ಎಷ್ಟು ನಂಬಿಕೆ ಇದೆ ಎಂದು ಶೇಕಡಾವಾರು ಮತಗಳು ಹೇಳುತ್ತವೆ. ರಾಜ್ಯ ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ವರ್ತಿಸಿದ್ದರೆ, ಚುನಾವಣೆಗೆ ಸಾಕಷ್ಟು ಸಮಯ ನೀಡಿದ್ದರೆ ಖಂಡಿತವಾಗಿಯೂ ಬಿಜೆಪಿ 100 ಸ್ಥಾನಗಳನ್ನು ಗೆಲ್ಲುತ್ತಿತ್ತು ಎಂದು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಹೇಳಿದರು.

ಚುನಾವಣೆ ವೇಳೆ ರಾಜಕೀಯ ಇದ್ದೇ ಇರುತ್ತೆ, ಈಗ ನಮ್ಮ ಗುರಿ ನಗರದ ಅಭಿವೃದ್ಧಿ ಮಾತ್ರ. ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಇದೇ ವೇಳೆ ಸಿಎಂ ಚಂದ್ರಶೇಖರ್​ ರಾವ್​ ಅವರನ್ನು ಆಗ್ರಹಿಸಿದ್ದಾರೆ. ಕೆಸಿಆರ್ ತನ್ನ ಮಾರ್ಗಗಳನ್ನು ಬದಲಾಯಿಸದಿದ್ದರೆ ಸಾರ್ವಜನಿಕ ಚಳವಳಿಗಳು ಪ್ರಾರಂಭವಾಗುತ್ತವೆ. ಬಿಜೆಪಿ ಕಾರ್ಯಕರ್ತರ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಇದೇ ವೇಳೆ ಅವರು ಹೇಳಿದರು.

ಟಿಆರ್‌ಎಸ್, ಎಂಐಎಂ ಮತ್ತು ಕಾಂಗ್ರೆಸ್ ಪ್ರಚಾರವನ್ನು ಜನರು ನಿರ್ಲಕ್ಷಿಸಿ ಬಿಜೆಪಿ ಕಡೆ ಒಲವು ತೋರಿದ್ದಾರೆ. ಎಂಐಎಂ ಬಿಜೆಪಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿಲ್ಲ. ಇನ್ನು ಹೈದರಾಬಾದ್ ಹೆಸರು ಬದಲಾವಣೆಯ ಬೇಡಿಕೆಯಲ್ಲಿ ಯಾವುದೇ ಕಡಿತವಿಲ್ಲ ಎಂದು ಅವರು ಪುನರುಚ್ಚರಿಸಿದರು. ಟಿಆರ್‌ಎಸ್‌ಗೆ ಬಿಜೆಪಿಗಿಂತ 9,000 ಹೆಚ್ಚಿನ ಮತಗಳು ಮಾತ್ರ ದೊರೆತಿವೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ ಎಂದು ಇದೇ ವೇಳೆ ಅವರು ಎಚ್ಚರಿಸಿದರು.

ABOUT THE AUTHOR

...view details