ಕರ್ನಾಟಕ

karnataka

ETV Bharat / bharat

'ಏಕರೂಪ ನಾಗರಿಕ ಸಂಹಿತೆ'ಯ ಕಾನೂನು ಜಾರಿಗೆ ಸಂಸತ್ತಿನಲ್ಲಿ ಒತ್ತಾಯಿಸುವೆ: ಬಿಜೆಪಿ ಸಂಸದ ದುಬೆ

ಕಾನೂನನ್ನು ರೂಪಿಸದೇ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದು ಕಷ್ಟ. ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಈ ಕ್ರಮವನ್ನು ಬೆಂಬಲಿಸಬೇಕು ಎಂದು ಬಿಜೆಪಿ ಸಂಸದ ದುಬೆ ಹೇಳಿದ್ದಾರೆ.

Satish Chandra Dubey
ಸತೀಶ್ ಚಂದ್ರ ದುಬೆ

By

Published : Dec 3, 2021, 7:18 PM IST

ನವದೆಹಲಿ:ಸಂಸತ್ತಿನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆ ಮತ್ತು ಜನಸಂಖ್ಯಾ ನಿಯಂತ್ರಣದಂತಹ ವಿಷಯಗಳನ್ನು ಪ್ರಸ್ತಾಪಿಸುವುದಾಗಿ ಮತ್ತು ಎರಡಕ್ಕೂ ಕಠಿಣ ಕಾನೂನು ಜಾರಿಗೆ ಒತ್ತಾಯಿಸುವುದಾಗಿ ಬಿಹಾರದ ಬಿಜೆಪಿ ರಾಜ್ಯಸಭಾ ಸಂಸದ ಮತ್ತು ಪಕ್ಷದ ಹಿರಿಯ ನಾಯಕ ಸತೀಶ್ ಚಂದ್ರ ದುಬೆ ಹೇಳಿದ್ದಾರೆ.

ಕಾನೂನನ್ನು ರೂಪಿಸದೇ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದು ಕಷ್ಟ. ಇದು ಸಮಯದ ಅಗತ್ಯವಾಗಿದೆ ಮತ್ತು ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಈ ಕ್ರಮವನ್ನು ಬೆಂಬಲಿಸಬೇಕು. ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನದೊಂದಿಗೆ ರಾಷ್ಟ್ರದಾದ್ಯಂತ ಪ್ರತಿಯೊಬ್ಬ ನಾಗರಿಕರನ್ನು ಅವರ ಧರ್ಮವನ್ನು ಲೆಕ್ಕಿಸದೇ ಸಮಾನವಾಗಿ ಪರಿಗಣಿಸಲಾಗುವುದು.

ದುರ್ಬಲ ವರ್ಗಗಳ ನಡುವಿನ ತಾರತಮ್ಯದ ಸಮಸ್ಯೆ ತೊಡೆದುಹಾಕಲು ಮತ್ತು ದೇಶದ ವಿವಿಧ ಸಾಂಸ್ಕೃತಿಕ ಗುಂಪುಗಳ ನಡುವೆ ಸಮನ್ವಯವನ್ನು ಹೆಚ್ಚಿಸುವುದು ವಿಧಿ 44ರ ಉದ್ದೇಶವಾಗಿದೆ ಎಂದು ದುಬೆ ಹೇಳಿದರು.

ಇದನ್ನೂ ಓದಿ: ದೆಹಲಿ ಮಾಲಿನ್ಯಕ್ಕೆ ಪಾಕ್​​ ಕಾರಣವೆಂದ ಯುಪಿ ಸರ್ಕಾರ: ಅಲ್ಲಿ ನಾವು ಕೈಗಾರಿಕೆ ನಿಷೇಧಿಸಬೇಕಾ? ಎಂದು ಸುಪ್ರೀಂ ಗರಂ

ಬಿಜೆಪಿಯ ಅಜೆಂಡಾದ ಭಾಗವಾಗಿದ್ದ 370 ನೇ ವಿಧಿಯನ್ನು ಹಿಂಪಡೆಯಲು ಮತ್ತು ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಶ್ರಮಿಸಿದೆ. ಈಗ, ಪಕ್ಷವು ಏಕರೂಪ ನಾಗರಿಕ ಸಂಹಿತೆ, ಜನಸಂಖ್ಯೆ ನಿಯಂತ್ರಣ ಸೇರಿದಂತೆ ದೇಶದ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಗಮನಹರಿಸುತ್ತಿದೆ ಎಂದು ದುಬೆ ತಿಳಿಸಿದ್ದಾರೆ.

ABOUT THE AUTHOR

...view details