ಚಂಡೀಗಢ (ಪಂಜಾಬ್):ಸಾಂವಿಧಾನಿಕ ಅಧಿಕಾರವನ್ನು ಅಹಿತಕರ ವಿವಾದಗಳಿಗೆ ಎಳೆಯುವ ಮೂಲಕ ಗವರ್ನರ್ ಕಚೇರಿಯ ಪ್ರತಿಷ್ಠೆಯನ್ನು ಕಡಿಮೆಗೊಳಿಸುವ ಕೆಟ್ಟ ಪ್ರಯತ್ನಗಳಿಗೆ ರಾಜ್ಯ ಬಿಜೆಪಿ ನಾಯಕತ್ವವನ್ನು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಖಂಡಿಸಿದ್ದಾರೆ.
'ಪಂಜಾಬ್ ರಾಜ್ಯವನ್ನ ಅಮರಿಂದರ್ ಸಿಂಗ್ ಮತ್ತೊಂದು ಪಶ್ಚಿಮ ಬಂಗಾಳವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ' ಎಂದು ಆರೋಪಿಸಿರುವ ಬಿಜೆಪಿ ರಾಜ್ಯ ಘಟಕದ ಟ್ವೀಟ್ಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರಕ್ಕಾಗಿ ಕಾಯುತ್ತಿರುವ ಬಿಜೆಪಿ ರಾಜ್ಯಪಾಲರ ಕಚೇರಿಯನ್ನು ತನ್ನ ಸ್ವಂತ ಹಿತಾಸಕ್ತಿಗಾಗಿ ಬಳಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.