ಕರ್ನಾಟಕ

karnataka

ETV Bharat / bharat

ತಲೆಮರೆಸಿಕೊಂಡಿದ್ದ ಶ್ರೀಕಾಂತ್ ತ್ಯಾಗಿ ಬಂಧಿಸಿದ ಯುಪಿ ಪೊಲೀಸರು - ಶ್ರೀಕಾಂತ್ ತ್ಯಾಗಿ

ಮಹಿಳೆಗೆ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಶ್ರೀಕಾಂತ್ ತ್ಯಾಗಿಗೆ ಸೋಮವಾರ ನೋಯ್ಡಾ ಅಧಿಕಾರಿಗಳು ಶಾಕ್ ನೀಡಿದ್ದರು. ಈಗ ತಲೆಮರೆಸಿಕೊಂಡಿದ್ದ ಶ್ರೀಕಾಂತ್ ತ್ಯಾಗಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

bjp leader shrikant tyagi arrested  tyagi arrested in meerut along with 3 people  bjp leader shrikant tyagi news  bjp leader shrikant tyagi video viral  ಶ್ರೀಕಾಂತ್ ತ್ಯಾಗಿ ಬಂಧಿಸಿದ ಯುಪಿ ಪೊಲೀಸರು  ತ್ಯಾಗಿಯನ್ನು ಬಂಧಿಸುವಲ್ಲಿ ನೋಯ್ಡಾ ಪೊಲೀಸರು ಯಶಸ್ವಿ  ಶ್ರೀಕಾಂತ್ ತ್ಯಾಗಿಗೆ ನಿನ್ನೆ ನೋಯ್ಡಾ ಅಧಿಕಾರಿಗಳು ಶಾಕ್  ಕಾಂತ್ ತ್ಯಾಗಿಯನ್ನು ಬಂಧಿಸಿದ ನೋಯ್ಡಾ ಪೊಲೀಸರು  ಉತ್ತರಪ್ರದೇಶ ಅಪರಾಧ ಸುದ್ದಿ
ಶ್ರೀಕಾಂತ್ ತ್ಯಾಗಿ

By

Published : Aug 9, 2022, 1:10 PM IST

ಮೀರತ್(ಉತ್ತರಪ್ರದೇಶ): ಯುಪಿ ಪೊಲೀಸರು ಶ್ರೀಕಾಂತ್​ ತ್ಯಾಗಿ ಅವರ ಬಂಧನಕ್ಕೆ ನಿರಂತರ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಕೊನೆಗೂ ಇಂದು ಬೆಳಗ್ಗೆ ಪೊಲೀಸರ ಕೈಗೆ ಶ್ರೀಕಾಂತ್​ ತ್ಯಾಗಿ ಸಿಕ್ಕಿಬಿದ್ದಿದ್ದಾರೆ. ಶ್ರೀಕಾಂತ್ ತ್ಯಾಗಿಯನ್ನು ಬಂಧಿಸಿದ ನೋಯ್ಡಾ ಪೊಲೀಸರು ಕಾರ್​ವೊಂದನ್ನು ವಶಪಡಿಸಿಕೊಂಡಿದ್ದಾರೆ. ಆ ಕಾರಿಗೆ ಉತ್ತರಪ್ರದೇಶದ ವಿಧಾನ ಸಭೆಯ ಸ್ಟಿಕ್ಕರ್ ಲಗತ್ತಿಸಿರುವುದು ಕಂಡುಬಂದಿದೆ.

ಇಂದು ಬೆಳಗ್ಗೆ ಶ್ರೀಕಾಂತ್ ತ್ಯಾಗಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಜತೆಗೆ ಇನ್ನೂ ಮೂವರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಇಂದು ಆರೋಪಿಗಳನ್ನು ಕೋರ್ಟ್​ಗೆ ಹಾಜರು ಪಡಿಸುವ ಸಾಧ್ಯತೆಯಿದೆ.

ಪ್ರಕರಣ ಹಿನ್ನೆಲೆ.. ಆಗಸ್ಟ್ 6 ರಂದು ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಅವರು ಮಹಿಳೆಯ ಮೇಲೆ ಹಲ್ಲೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆ ವಿಡಿಯೋ ವೈರಲ್ ಆದ 24 ಗಂಟೆಗಳಲ್ಲಿ 12ಕ್ಕೂ ಹೆಚ್ಚು ಮಂದಿ ನೋಯ್ಡಾದ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಗೆ ನುಗ್ಗಿ ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದರು. ಇದಾದ ನಂತರ ಸಂಸದ ಮಹೇಶ್ ಶರ್ಮಾ ಸ್ಥಳಕ್ಕಾಗಮಿಸಿ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು.

ತ್ಯಾಗಿ ಮನೆಯಲ್ಲಿ ಅಕ್ರಮ ಕಟ್ಟಡ ನೆಲಸಮ: ಶ್ರೀಕಾಂತ್​ ತ್ಯಾಗಿ ಅವರ ಮನೆ ನೆಲಸಮಗೊಳಿಸಲಾಗಿದ್ದು, ಭಂಗೇಲ್‌ನಲ್ಲಿರುವ ಅಂಗಡಿಗಳ ಮೇಲೂ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವಿಚಾರವನ್ನು ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅರಿತು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದರು.

ಓದಿ:ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ಶ್ರೀಕಾಂತ್​ ತ್ಯಾಗಿ.. ಬುಲ್ಡೋಜರ್​ನಿಂದ ಅಕ್ರಮ ನಿವಾಸ ತೆರವು, ಗೂಂಡಾ ಕಾಯ್ದೆ ದಾಖಲು!

ABOUT THE AUTHOR

...view details