ಕೋಟಾ: ಬಿಹಾರದ ನೀಮಾಕೋಲ್ ನಿವಾಸಿ 11 ವರ್ಷದ ಸೋನು ಈಗ ಚಿರಪರಿಚಿತ. ಸೋನು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗ್ತಿದ್ದಾರೆ. ಈ ಬಾಲಕ ಮುಖ್ಯಮಂತ್ರಿ ನಿತೀಶ್ಗೆ ಮಾಡಲಾದ ಮನವಿಯೂ ಅಲೆನ್ ಕೋಚಿಂಗ್ ಡೈರೆಕ್ಟರ್ ಬ್ರಿಜೇಶ್ ಮಹೇಶ್ವರಿ ಸೇರಿದಂತೆ ಎಲ್ಲರ ಮನ ಗೆದ್ದಿದೆ.
ಇನ್‌ಸ್ಟಿಟ್ಯೂಟ್ ಭರವಸೆ: ಓದುವ ಉತ್ಸಾಹ, ತನ್ನ ಪರಿಸ್ಥಿತಿಗಳನ್ನು ಬಿಟ್ಟುಕೊಡದ ಮನೋಭಾವ ಮತ್ತು ಏನನ್ನಾದರೂ ಸಾಧಿಸುವ ಆತ್ಮವಿಶ್ವಾಸವನ್ನು ಕಂಡು ಬಾಲಕ ಸೋನುಗೆ ಅಲೆನ್ ಕೋಚಿಂಗ್ ಇನ್ಸ್ಟಿಟ್ಯೂಟ್ನ ಬಾಗಿಲು ತೆರೆದಿದೆ. ಆಡಳಿತಾಧಿಕಾರಿ ಆಗುವ ತನ್ನ ಕನಸು ನನಸಾಗುವವರೆಗೂ ಅಲೆನ್ ಸಂಸ್ಥೆ ಬಾಲಕ ಜೀವನ, ಆಹಾರ, ಬಟ್ಟೆಗಾಗಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದೆ.
ಸಿಎಂ ಎದುರು ಧೈರ್ಯವಾಗಿ ಉನ್ನತ ಶಿಕ್ಷಣದ ಬಗ್ಗೆ ಮಾತನಾಡಿದ ಬಾಲಕ ಕೋಟಾ ತಲುಪಿದ ಸೋನು: ಕೋಚಿಂಗ್ ಸೆಂಟರ್ ನೀಡಿದ ಭರವಸೆ ಬಳಿಕ ವೈರಲ್ ಬಾಯ್ ಸೋನು ಕುಮಾರ್ ಈಗ ಕೋಟಾ ತಲುಪಿದ್ದಾನೆ. ಇಲ್ಲಿ ಆರನೇ ತರಗತಿಗೆ ಪ್ರವೇಶ ಪಡೆದಿದ್ದಾನೆ. ಆದರೆ ಈ ಮಾಹಿತಿಯನ್ನು ಇನ್‌ಸ್ಟಿಟ್ಯೂಟ್ ಹಂಚಿಕೊಂಡಿಲ್ಲ. ಸ್ವತಃ ಸೋನು ಅವರೇ ಹಂಚಿಕೊಂಡಿದ್ದಾರೆ. ಸೋನು ಕುಮಾರ್ ಸ್ವತಃ ವಿಡಿಯೋ ಬಿಡುಗಡೆ ಮಾಡುವ ಮೂಲಕ ಅಲೆನ್ನಲ್ಲಿ ಪ್ರವೇಶ ದೊರೆತಿರುವುದರ ಬಗ್ಗೆ ಖಚಿತಪಡಿಸಿದ್ದಾನೆ. ನಳಂದದ ಹರ್ನಾಟ್ ಬ್ಲಾಕ್‌ನ ನೀಮ್‌ಕೋಲ್ ನಿವಾಸಿ 11 ವರ್ಷದ ಸೋನು ಕುಮಾರ್ ಜೂನ್ 13 ರಂದು ಕೋಟಾದಲ್ಲಿ ನಾಮನಿರ್ದೇಶನಗೊಂಡಿದ್ದಾನೆ.
ಓದಿ:ತಾಯಿ ಕಲಿತ ಸರ್ಕಾರಿ ಶಾಲೆಗೆ ₹2 ಕೋಟಿ ವ್ಯಯಿಸಿ ಹೈಟೆಕ್ ಸ್ಪರ್ಶ ನೀಡಿದ ಉದ್ಯಮಿ
ಸಿಎಂ ಜೊತೆಗಿನ ಆ ಸಭೆ: ನೀಮಕೋಲ್ ನಿವಾಸಿ ರಣವಿಜಯ್ ಯಾದವ್ ಅವರ ಪುತ್ರ ಸೋನು ಕುಮಾರ್ ಅವರು 14 ಮೇ 2022 ರಂದು ಕಲ್ಯಾಣ್ ವಿಘಾದಲ್ಲಿ ಮುಖ್ಯಮಂತ್ರಿಗಳ ಮುಂದೆ ಸರ್ಕಾರಿ ಶಾಲೆಗಳಲ್ಲಿನ ಕಳಪೆ ಶಿಕ್ಷಣ ವ್ಯವಸ್ಥೆಯನ್ನು ಬಹಿರಂಗಪಡಿಸಿದ್ದ. ಆಗ ಈ ಪುಟ್ಟ ಬಾಲಕ ತನಗೂ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದ.
ಸಿಎಂ ಜೊತೆ ಸೋನು ಇರುವ ವಿಡಿಯೋವನ್ನು ಜನ ಕುತೂಹಲದಿಂದ ವೀಕ್ಷಿಸಿದ್ದರು. ಈ ವೇಳೆ ಸೋನು ಸಿಎಂಗೆ ಒಳ್ಳೆಯ ಶಿಕ್ಷಣ ಬೇಕು ಎಂದು ಹೇಳುತ್ತಿರುವುದು ಕಂಡು ಬಂತು. ತನ್ನ ಕುಡುಕ ತಂದೆ ದುಡಿದ ಎಲ್ಲ ಹಣವನ್ನು ಮದ್ಯಕ್ಕಾಗಿ ಖರ್ಚು ಮಾಡುತ್ತಾರೆ ಎಂದು ಸಿಎಂ ಮುಂದೆ ಸೋನು ದೂರು ನೀಡಿದ್ದ.
ಸಹಾಯ ಮಾಡಲು ಮುಂದಾದ ಅನೇಕ ಕೈಗಳು: ಸೋನು ವೈರಲ್ ವಿಡಿಯೋಗೆ ಪ್ರತಿಕ್ರಿಯೆ ಪಾಸಿಟಿವ್ ಆಗಿ ಬಂದಿವೆ. ಶಾಲೆಗಳ ವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳ ಸುರಿಮಳೆಯೇ ಹರಿದು ಬಂದಿತ್ತು. ಆರ್‌ಜೆಡಿ ನಾಯಕ ತೇಜ್ ಪ್ರತಾಪ್, ಜಾಪ್ ಮುಖ್ಯಸ್ಥ ಪಪ್ಪು ಯಾದವ್‌ನಿಂದ ಹಿಡಿದು ಚಲನಚಿತ್ರ ತಾರೆಯರು ಸಹಾಯಕ್ಕಾಗಿ ಸಂಪರ್ಕಿಸಿದ್ದಾರೆ.
ಇದರಲ್ಲಿ ಸೋನು ಸೂದ್ ಹೆಸರೂ ಸೇರಿದೆ. ಆದರೆ, ಈ ಮಗು ಎಲ್ಲರ ಸಹಕಾರವನ್ನು ಬದಿಗೊತ್ತಿ ಕೊನೆಗೆ ಆಯ್ಕೆ ಮಾಡಿಕೊಂಡಿದ್ದು ರಾಜಸ್ಥಾನದ ಕೋಟಾವನ್ನು. ಹೀಗೆ ಬಾಲಕ ಸೋನು ತನ್ನ ಗಮ್ಯಸ್ಥಾನ ತಲುಪಲು ಅವರ ಚಿಕ್ಕ ರಂಜೀತ್ ಕುಮಾರ್ ಆಯ್ಕೆಯಂತೆ ಕೋಟಾದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲಿದ್ದಾರೆ.