ಪಾಟ್ನಾ, ಬಿಹಾರ್: ಬಿಹಾರದ ಗ್ರಾಮೀಣ ಕಾಮಗಾರಿ ಇಲಾಖೆಯ ಕಿಶನ್‌ಗಂಜ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜಯ್ ಕುಮಾರ್ ರೈ ನಿವಾಸ ಮತ್ತು ಕಚೇರಿಗಳ ಮೇಲೆ Bihar State Vigilance Department ದಾಳಿ ನಡೆಸಿದೆ. ಪಾಟ್ನಾದ ಗೋಲಾ ರಸ್ತೆ, ಪಾಟ್ನಾ ಜಿಲ್ಲೆಯ ದುಲ್ಹಾನ್ ಬಜಾರ್‌ನ ಮನೆ ಮತ್ತು ಕಿಶನ್‌ಗಂಜ್‌ನ ವಿವಿಧ ಸ್ಥಳದಗಳಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣ... ಇಂಜಿನಿಯರ್ ಮನೆ ಮೇಲೆ ದಾಳಿ, ಹಣ ಎಣಿಕೆ ಮಾಡಿ ಸುಸ್ತಾದ ಅಧಿಕಾರಿಗಳು - ಎಕ್ಸಿಕ್ಯೂಟಿವ್ ಇಂಜಿನಿಯರ್ ಸಂಜಯ್ ಕುಮಾರ್
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ, ಗ್ರಾಮೀಣ ಕಾಮಗಾರಿ ಇಲಾಖೆಯ ಕಿಶನ್‌ಗಂಜ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜಯ್ ಕುಮಾರ್ ರೈ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಮೂಲಗಳ ಪ್ರಕಾರ, ಆರಂಭಿಕ ದಾಳಿಯಲ್ಲಿಯೇ ಸುಮಾರು 5 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ ಎಂದು ತಿಳಿದ ಬಂದಿದೆ.
ಇಂಜಿನಿಯರ್ ಮನೆಯಲ್ಲಿ ಐದು ಕೋಟಿ ನಗದು ಪತ್ತೆ: ಇಂಜಿನಿಯರ್ ಸಂಜಯ್ ಕುಮಾರ್ ರೈ ತನ್ನ ಜೂನಿಯರ್ ಇಂಜಿನಿಯರ್ ಮತ್ತು ಕ್ಯಾಷಿಯರ್ ಮನೆಗಳಲ್ಲಿ ಲಂಚದ ಹಣವನ್ನು ಇಟ್ಟುಕೊಂಡಿರುವುದನ್ನು ವಿಜಿಲೆನ್ಸ್ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸುದ್ದಿ ತಿಳಿದ ಬಳಿಕ ತನಿಖಾ ತಂಡ ಇವರ ಮೇಲೂ ದಾಳಿ ನಡೆಸಿದೆ.
ಕಿಶನ್‌ಗಂಜ್‌ನಿಂದ ನಾಲ್ಕು ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಸಂಜಯ್ ಕುಮಾರ್ ರೈ ಅವರ ಪಾಟ್ನಾ ನಿವಾಸದಲ್ಲಿ ಸುಮಾರು 1 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ವಿಜಿಲೆನ್ಸ್ ಇಲಾಖೆ ದಾಳಿ ಮುಂದುವರಿದಿದ್ದು, ದಾಳಿಯಲ್ಲಿ ಹಲವು ದಾಖಲೆಗಳು ಪತ್ತೆಯಾಗಿವೆ. ಈ ಎಲ್ಲ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.