ಕರ್ನಾಟಕ

karnataka

ETV Bharat / bharat

ಕಮಲಾ ಹ್ಯಾರಿಸ್ ಸೋದರ ಮಾವನೊಂದಿಗೆ ಈಟಿವಿ ಭಾರತ್​ ಎಕ್ಸ್​ಕ್ಲೂಸಿವ್​ ಸಂದರ್ಶನ!

ಅಮೆರಿಕ ಉಪಾಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡಿರುವ ಕಮಲಾ ಹ್ಯಾರಿಸ್​ ಬಗ್ಗೆ ಅವರ ಸೋದರ ಮಾವ ಈಟಿವಿ ಭಾರತಕ್ಕೆ ಸಂದರ್ಶನ ನೀಡಿದ್ದಾರೆ.

Kamala Harris's uncle
Kamala Harris's uncle

By

Published : Nov 3, 2020, 10:03 PM IST

ನವದೆಹಲಿ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಭಾರತೀಯ ಮೂಲದ ಕಮಲಾ ಹ್ಯಾರಿಸ್​ ಕಣಕ್ಕಿಳಿದಿದ್ದು, ಇದೇ ವಿಚಾರವಾಗಿ ಅವರ ಮಾವ ಡಾ. ಜಿ. ಬಾಲಚಂದ್ರನ್​ ಈಟಿವಿ ಭಾರತ ಜತೆ ಮಾತನಾಡಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಡೆನ್​ ಗೆಲುವು ಸಾಧಿಸುವ ಅವಕಾಶ ಶೇ. 90ರಷ್ಟು ಇದೆ ಎಂದಿರುವ ಡಾ. ಜಿ.ಚಾಲಚಂದ್ರನ್​, 2016ರಲ್ಲಿ ವಿವಿಧ ಕಾರಣಗಳಿದಾಗಿ ಚುನಾವಣೆ ಸೋಲುವಂತಾಯಿತು. ಆದರೆ ಇದೀಗ ಬಿಡೆನ್​ ಗೆಲುವು ಸ್ಪಷ್ಟ ಎಂದಿರುವ ಅವರು, ಟ್ರಂಪ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಮಲಾ ಹ್ಯಾರಿಸ್ ಸೋದರ ಮಾವನೊಂದಿಗೆ ಎಕ್ಸ್​ಕ್ಲೂಸಿವ್​ ಸಂದರ್ಶನ

ಮಾಜಿ ಪತ್ರಕರ್ತ, ಶಿಕ್ಷಣ ತಜ್ಞ ಮತ್ತು ವಿದ್ವಾಂಸ ಡಾ. ಬಾಲಚಂದ್ರನ್​ ಅವರು ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರೊಂದಿಗೆ ದೆಹಲಿಯಲ್ಲಿ ಸಂದರ್ಶನ ನೀಡಿದ್ದು, ಟ್ರಂಪ್​ ಯಾವುದೇ ಸಾರ್ವಜನಿಕ ಸೇವೆ ಮಾಡಿಲ್ಲ. ಕೋವಿಡ್​​ ಪರಿಸ್ಥಿತಿ ನಿಯಂತ್ರಣ ಮಾಡುವಲ್ಲಿ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದ್ದಾರೆ ಎಂದಿದ್ದಾರೆ.

ಕಮಲಾ ಹ್ಯಾರಿಸ್​ ಅವರ ಸಾಧನೆಗಳ ಬಗ್ಗೆ ಕುಟುಂಬಕ್ಕೆ ಹೆಮ್ಮೆ ಇದೆ. ಅವರ ಗೆಲುವಿನ ಸಂಭ್ರಮ ಆಚರಣೆ ಮಾಡಲು ಇಲ್ಲಿಯವರೆಗೆ ಯಾವುದೇ ಯೋಜನೆ ರೂಪಿಸಿಲ್ಲ. ಆದರೆ ಅವರ ಗೆಲುವಿಗಾಗಿ ಚೆನ್ನೈನ ವಿವಿಧ ಹಳ್ಳಿಗಳಲ್ಲಿ ಸ್ಥಳೀಯರು ಪ್ರಾರ್ಥನೆ ಮಾಡ್ತಿದ್ದಾರೆ ಎಂದಿದ್ದಾರೆ. ಕಮಲಾ ಹ್ಯಾರಿಸ್​ ಅವರ ಸಾಮರ್ಥ್ಯ ಏನು ಎಂಬುದು ಸಾರ್ವಜನಿಕರಿಗೆ ಗೊತ್ತಿದೆ. ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್​ ಆಗಿ, ಸೆನೆಟರ್​​ ಆಗಿ ಈಗಾಗಲೇ ಸೇವೆ ಸಲ್ಲಿಸಿದ್ದಾರೆ. ನನ್ನ ತಂಗಿ ಅವಳನ್ನು ಅಮೆರಿಕಾಗೆ ಕರೆದೊಯ್ಯುತ್ತಿದ್ದ ವೇಳೆ ಕೇವಲ ಎರಡು ವರ್ಷದ ಚಿಕ್ಕ ಮಗುವಾಗಿದ್ದಳು ಎಂದು ನೆನಪಿಸಿಕೊಂಡಿದ್ದಾರೆ.

ABOUT THE AUTHOR

...view details