ಗೂಗಲ್ ಒಡೆತನದ ಯೂಟ್ಯೂಬ್ ಮತ್ತು ಯೂಟ್ಯೂಬ್ ಮ್ಯೂಸಿಕ್ ಎರಡಕ್ಕೂ ಹೊಸ ಪಾವತಿಯ ರೂಪವನ್ನು ಪ್ರಾರಂಭಿಸಲಾಗಿದೆ. ಹಿಂದಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಆಯ್ಕೆಗಳ ಜೊತೆಗೆ, ಯೂಟ್ಯೂಬ್ ಬಳಕೆದಾರರು ಈಗ ಯುಪಿಐ ಮೂಲಕ ಸುಲಭವಾಗಿ ಪಾವತಿ ಮಾಡಲು ಸಾಧ್ಯವಾಗುತ್ತದೆ.
ಇನ್ಮುಂದೆ ಯುಪಿಐ ಮೂಲಕವೂ ಯೂಟ್ಯೂಬ್ ಪ್ರೀಮಿಯಂಗೆ ಪಾವತಿ ಮಾಡಬಹುದು
ಭಾರತದಲ್ಲಿ ಡಿಜಿಟಲ್ ಪಾವತಿಗಳಲ್ಲಿ ಯುಪಿಐಗೆ ಹೆಚ್ಚನ ಆದ್ಯತೆ ನಿಡಲಾಗುವುದರಿಂದ, ಹಿಂದಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಆಯ್ಕೆಗಳ ಜೊತೆಗೆ, ಯೂಟ್ಯೂಬ್ ಬಳಕೆದಾರರು ಈಗ ಯುಪಿಐ ಮೂಲಕವೂ ಪಾವತಿ ಮಾಡುವ ಆಯ್ಕೆ ನಿಡಲಾಗಿದೆ.
ಭಾರತದಲ್ಲಿ ಡಿಜಿಟಲ್ ಪಾವತಿಗಳಲ್ಲಿ ಯುಪಿಐಗೆ ಹೆಚ್ಚನ ಆದ್ಯತೆ ನಿಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಎಲ್ಲಾ ಯುಪಿಐ ಬಳಕೆದಾರರು ಈಗ ಯೂಟ್ಯೂಬ್‌ನಲ್ಲಿ ಯುಪಿಐ ಪಾವತಿ ಆಯ್ಕೆಯನ್ನು, ಯೂಟ್ಯೂಬ್ ಪ್ರೀಮಿಯಂ ಮತ್ತು ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂಗಾಗಿ ಮಾಸಿಕ ಅಥವಾ ತ್ರೈಮಾಸಿಕ ಪ್ರಿಪೇಯ್ಡ್ ಚಂದಾದಾರರಾಗಲು, ತಮ್ಮ ನೆಚ್ಚಿನ ಚಲನಚಿತ್ರಗಳನ್ನು ಖರೀದಿಸಲು ಮತ್ತು ಚಾನೆಲ್ ಸದಸ್ಯತ್ವಗಳಿಗೆ ಪಾವತಿಸಬಹುದು.