ನವದೆಹಲಿ:ಮಾಸ್ಕ್ ಧರಿಸುವ ವಿಚಾರವಾಗಿ ವಾಗ್ವಾದ ಉಂಟಾಗಿ 17 ವರ್ಷದ ಯುವಕನೋರ್ವನ ಕೊಲೆ ಮಾಡಿರುವ ಘಟನೆ ನವದೆಹಲಿಯ ಗೋವಿಂದಪುರ್ದಲ್ಲಿ ನಡೆದಿದೆ.
ಸಲೀಂ 17 ವರ್ಷದ ಯುವಕ ಮೃತ ದುರ್ದೈವಿ. 28 ವರ್ಷದ ಅಪ್ಸರ್, 61 ವರ್ಷದ ಅಖ್ತರ್ ಹಾಗೂ 29 ವರ್ಷದ ಗುಲಾಂ ಮೊಹಮ್ಮದ್ ವಿರುದ್ಧ ಪ್ರಕರಣ ದಾಖಲಾಗಿದೆ.

ಮಾಸ್ಕ್ ತಯಾರಿಸುವ ವಿಚಾರವಾಗಿ ಜಗಳ ಉಂಟಾಗಿದ್ದು, ಅದು ತಾರಕಕ್ಕೇರಿದಾಗ ಸಲೀಂ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಇದೀಗ ಗೋವಿಂದಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿ ಅಖ್ತರ್ ಬಂಧನವಾಗಿದ್ದು, ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ.
ಇಬ್ಬರು ಮಾಸ್ಕ್ ತಯಾರಿಸಿ ಮಾರಾಟ ಮಾಡುತ್ತಿದ್ದು, ಸಲೀಂ ಕಡಿಮೆ ಬೆಲೆಗೆ ಅವುಗಳ ಮಾರಾಟ ಮಾಡುತ್ತಿದ್ದ ಕಾರಣ ಜಗಳ ಉಂಟಾಗಿ ಕೊಲೆಯಾಗಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.