ಕರ್ನಾಟಕ

karnataka

ETV Bharat / bharat

ಭಾನುವಾರದ ಭವಿಷ್ಯ: ಈ ದಿನ ನೀವು ವ್ಯಾಪಾರಕ್ಕೆ ಕೈ ಹಾಕದಿರುವುದೇ ಒಳಿತು! - ಈ ದಿನದ ಭವಿಷ್ಯ

ಭಾನುವಾರದ ಭವಿಷ್ಯ ಇಲ್ಲಿದೆ: ಈ ದಿನ ನೀವು ಹೆಚ್ಚು ಒತ್ತಡದಲ್ಲಿರುತ್ತೀರಿ. ಹಾಗಾಗಿ, ಹೀಗೆ ಮಾಡುವುದರ ಮೂಲಕ ನೀವು ಸಂಕಷ್ಟದಿಂದ ಪಾರಾಗುತ್ತೀರಿ ಎನ್ನುತ್ತಾನೆ ಗಣೇಶ.

ಭಾನುವಾರದ ಭವಿಷ್ಯ

By

Published : Sep 8, 2019, 5:00 AM IST

ಮೇಷ:ನೀವು ಕೆಲಸ ಮತ್ತು ಕುಟುಂಬದ ನಡುವೆ ಪರದಾಡುತ್ತೀರಿ, ಏಕೆಂದರೆ ಎರಡಕ್ಕೂ ನಿಮ್ಮ ಗಮನ ಅಗತ್ಯ. ನೀವು ಸಂಜೆಯನ್ನು ವಿನೋದಕ್ಕಾಗಿ ಮೀಸಲಿರಿಸಿ. ನೀವು ಖ್ಯಾತಿ ಪಡೆಯಲುಪ್ರಯತ್ನಿಸುತ್ತೀರಿ ಮತ್ತು ನಿಮ್ಮ ಮಹತ್ವಾಕಾಂಕ್ಷೆಯನ್ನು ಸದ್ಯದಲ್ಲೇ ಈಡೇರಿಸಿಕೊಳ್ಳಲಿದ್ದೀರಿ. ನಿಮಗೆ ಬೆಂಬಲಕ್ಕೆ ಆಶೀರ್ವಾದಗಳಿವೆ.

ವೃಷಭ: ನೀವು ಇಂದು ಬಹುತೇಕ ಸಮಯವನ್ನು ನಿಮ್ಮ ಆರೋಗ್ಯ ಮತ್ತು ಸೌಖ್ಯಕ್ಕಾಗಿ ಕಳೆಯುತ್ತೀರಿ. ವ್ಯಾಪಾರ ಸಂಬಂಧಿ ಭೋಜನವು ಕೆಲ ಬಾಕಿ ಮಾತುಕತೆಗಳನ್ನು ಯಶಸ್ವಿ ಫಲಿತಾಂಶವಾಗಿನೀಡುತ್ತದೆ. ಸಂಶೋಧನೆಯ ಕಾರ್ಯ ನಿರೀಕ್ಷಿಸಿದ್ದಕ್ಕಿಂತ ಉತ್ತಮ ಪ್ರಗತಿ ಕಾಣುತ್ತದೆ.

ಮಿಥುನ: ನೀವು ಇಂದು ಉತ್ಪಾದಕ ದಿನವನ್ನು ಕಳೆಯುತ್ತೀರಿ. ನೀವು ನಿಮ್ಮ ಜೀವನ ಕುರಿತಂತೆ ಸಂತೋಷ ಮತ್ತು ಸಂತೃಪ್ತಿ ಹೊಂದುತ್ತೀರಿ. ಆದರೆ, ವೈಯಕ್ತಿಕ ಮತ್ತು ವೃತ್ತಿಯ ಸಮಸ್ಯೆಗಳಲ್ಲಿ ನೀವುಸಂಕ್ಷೋಭೆ ಎದುರಿಸುತ್ತೀರಿ. ಇಂದು ನಿಮಗೆ ಏನನ್ನಾದರೂ ಕೊಳ್ಳಲು ಅಥವಾ ಮಾರಾಟ ಮಾಡಲು ಫಲಪ್ರದ ದಿನವಾಗಿದೆ.

ಕರ್ಕಾಟಕ: ನೀವು ಕೆಲಸದಲ್ಲಿ ಮತ್ತು ಅದೇ ರೀತಿ ಹೃದಯದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬಹಳ ಚುರುಕಾಗಿದ್ದೀರಿ. ನೀವು ನಿಮ್ಮ ಗಮನ ಕಳೆದುಕೊಳ್ಳುತ್ತಿರುವುದರಿಂದ ನಿಮ್ಮ ಮನಸ್ಸು ಈಪ್ರಸ್ತುತದ ವಾಸ್ತವಕ್ಕೆ ತರುತ್ತದೆ. ನೀವು ಕೆಲಸ ಪೂರ್ಣಗೊಳಿಸಲು ನಿಮ್ಮ ಅಧಿಕಾರದಲ್ಲಿರುವ ಏನನ್ನಾದರೂ ಮಾಡುತ್ತೀರಿ ಮತ್ತು ಮನೆಗೆ ನಿಮ್ಮ ಪ್ರೀತಿಪಾತ್ರರತ್ತ ತೆರಳುತ್ತೀರಿ.

ಸಿಂಹ: ನೀವು ಪ್ರಯಾಣವನ್ನು ಇಷ್ಟಪಡುತ್ತೀರಿ. ನೀವು ಪ್ರವಾಸ ಅಥವಾ ಪ್ರಯಾಣ ಯೋಜಿಸಿ ಅದರಲ್ಲಿ ನಿಮ್ಮ ಕುಟುಂಬ ಮತ್ತು ಮಿತ್ರರನ್ನು ಒಳಗೊಳ್ಳುತ್ತೀರಿ. ಸೃಜನಶೀಲ ಕ್ಷೇತ್ರಗಳಲ್ಲಿಇರುವವರು ಅಗತ್ಯ ಪ್ರಶಂಸೆ ಪಡೆಯುತ್ತೀರಿ. ಚಲನಶೀಲ ದಿನ ಕಾಯುತ್ತಿದೆ.

ಕನ್ಯಾ:ನಿಮ್ಮ ಚಾಲನಾಶಕ್ತಿ ನಿಮ್ಮ ಹಣೆಬರಹವನ್ನು ನಿಮ್ಮದೇ ಕೈಗಳಿಗೆ ತೆಗೆದುಕೊಳ್ಳಬೇಕೆನ್ನುವ ಒಂದೇ ಮನಸ್ಸಿನ ಬಯಕೆ. ನಿಮ್ಮ ಆಡಳಿತ ಸಾಮರ್ಥ್ಯಗಳು ದೋಷರಹಿತವಾಗಿವೆ, ಮತ್ತುಯಶಸ್ವಿಯಾಗಲು ಇರುವ ತೀವ್ರ ಬಯಕೆ ನಿಮ್ಮ ಜವಾಬ್ದಾರಿಗಳತ್ತ ನಿಮ್ಮನ್ನು ಉತ್ತೇಜಿಸುತ್ತದೆ. ನಿಮ್ಮ ನಾಯಕತ್ವ ಮತ್ತು ಚಿಂತಿಸುವ ಕೌಶಲ್ಯಗಳು ನಿಮ್ಮ ಸಂಘಟನಾ ಕೌಶಲ್ಯಗಳನ್ನುಹೆಚ್ಚಾಗಿಸುತ್ತವೆ.

ತುಲಾ: ಇಂದು ನಿಮ್ಮ ವಿರೋಧಿಗಳು ಮತ್ತು ಶತ್ರುಗಳನ್ನು ವ್ಯಾಪಾರದಲ್ಲಿ ನಿಮ್ಮ ಯಶಸ್ಸಿನ ಕುರಿತು ಬಯಕೆ ಹೊಂದುವಂತೆ ಮಾಡುತ್ತದೆ. ಎಚ್ಚರವಾಗಿರಿ, ಅವರು ನಿಮಗೆ ಹಾನಿಮಾಡಲು ಮಸಿಬಳಿಯಲು ಹಲವು ವಿಧಗಳಲ್ಲಿ ಪ್ರಯತ್ನಿಸಬಹುದು. ಅವರೊಂದಿಗೆ ಹೊಡೆದಾಡುವ ಬದಲು ನೀವು ರಾಜಕೀಯವಾಗಿ ಸರಿಯಾಗಿರಲು ಯತ್ನಿಸಿ ನಿಮ್ಮ ಒಳನೋಟ ಬಳಸಿ ವಿಷಯಗಳನ್ನುಇತ್ಯರ್ಥಪಡಿಸಬಹುದು.

ವೃಶ್ಚಿಕ:ನಿಮ್ಮ ಮನಸ್ಸಿನಲ್ಲಿ ನೀವು ಓದಿದ ವ್ಯಕ್ತಿತ್ವ ವಿಕಸನದ ಪುಸ್ತಕಗಳಿಂದ ಹೆಚ್ಚು ಸ್ಫೂರ್ತಿ ಪಡೆದಿದ್ದೀರಿ ಎಂದು ಕಾಣುತ್ತದೆ. ನೀವು ಹೊಸ ವ್ಯಾಪಾರೋದ್ಯಮಕ್ಕೆ ಪ್ರವೇಶಿಸಿದಂತೆ ನಿಮ್ಮಪ್ರಯತ್ನಗಳಿಗೆ ಗೆಲುವು ದೊರೆಯುತ್ತದೆ. ನೇರವಾಗಿ ಹೇಳಬೇಕೆಂದರೆ, ನಿಮ್ಮ ವ್ಯಕ್ತಿತ್ವ ಎಲ್ಲರೂ ಗಮನಿಸುವಂತೆ ಮಾಡುತ್ತದೆ.

ಧನು:ನಿಮ್ಮ ಪ್ರೀತಿಪಾತ್ರರ ಅತ್ಯಂತ ತುರ್ತು ಅಗತ್ಯವೆಂದರೆ ಇಂದು ಹೆಚ್ಚು ಗಮನ ನೀಡಿ. ಮನೆಯಲ್ಲಿ ಸಣ್ಣ ಕಾರ್ಯಕ್ರಮದಿಂದ ನಿಮ್ಮ ಮಿತ್ರರು ಮತ್ತು ಬಂಧುಗಳು ಒಟ್ಟಿಗೆ ಭೋಜನಸೇವಿಸುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ಆತ್ಮೀಯ ಖಾಸಗಿ ಮಾತುಕತೆ ನಿಮಗೆ ಸಂತೋಷ ತರುತ್ತದೆ.

ಮಕರ: ಈ ದಿನ ಸುಸೂತ್ರವಾಗಿರುತ್ತದೆ; ಆದರೆ ನಿಮ್ಮ ಮನಸ್ಸು ಆ ಕ್ಷಣದ ಪ್ರಚೋದನೆಯಂತೆ ಕೆಲಸ ಮಾಡುವುದರಿಂದ ಹೆಚ್ಚಿನ ಒತ್ತಡದಲ್ಲಿರುತ್ತೀರಿ. ಆದಾಗ್ಯೂ, ಇದು ನಿಮ್ಮ ಪ್ರತಿಷ್ಠೆಯನ್ನು ನಿಮ್ಮಮೇಲಾಧಿಕಾರಿಗಳು ಮತ್ತು ಮಿತ್ರರಲ್ಲಿ ಹಾಳು ಮಾಡುವುದಿಲ್ಲ. ನಿಮ್ಮ ಕೆಲ ಕನಸುಗಳು ನಿಜವಾಗುವುದನ್ನೂ ನೀವು ಕಾಣುತ್ತೀರಿ.

ಕುಂಭ:ನೀವು ಗುರಿಗಳನ್ನು ಈಡೇರಿಸಿಕೊಳ್ಳುವ ವಿಧಾನ ಕುರಿತು ಮಹತ್ವಾಕಾಂಕ್ಷಿ ಮತ್ತು ಬಹಳ ಹೆಮ್ಮೆ ಪಡುತ್ತೀರಿ! ನೀವು ಅಗತ್ಯವಿದ್ದಲ್ಲಿ ಕಠಿಣ ಪರಿಶ್ರಮ ಪಡುತ್ತೀರಿ ಮತ್ತು ಅಗತ್ಯವಿದ್ದಲ್ಲಿ ನಿಮ್ಮದೇದಾರಿಯನ್ನು ರೂಪಿಸಿಕೊಳ್ಳುತ್ತೀರಿ. ಇದಲ್ಲದೆ ನೀವು ಬಯಸಿದ್ದು ಆಗಲು ಅಗತ್ಯವಾದ ಸಾಮರ್ಥ್ಯಗಳು ಮತ್ತು ದಕ್ಷತೆ ಇದೆ ಎನ್ನುವುದನ್ನು ದೃಢಪಡಿಸುತ್ತೀರಿ.

ಮೀನ: ಇಂದು ನೀವು ನಿಮ್ಮ ಅತ್ಯುತ್ತಮ ಸ್ಫೂರ್ತಿಯಲ್ಲಿಲ್ಲ. ನೀವು ಅತ್ಯಂತ ಸಣ್ಣ ಕಾರಣಗಳಿಗೆ ದುಃಖಿತರಾಗುವುದನ್ನು ನಿಯಂತ್ರಿಸಬೇಕು. ಹೊರಗಿನ ಪ್ರಭಾವಗಳಿಂದ ನಿರಾಸೆಯ ಆಲೋಚನೆಗಳುದಾಳಿ ಇಡುತ್ತವೆ. ನೀವು ಸಕಾರಾತ್ಮಕವಾಗಿರಲು ನಿಮ್ಮ ಮನೋಬಲವನ್ನು ಸದೃಢವಾಗಿರಿಸಬೇಕು. ನಿಮ್ಮ ಅರಿವನ್ನು ಹೆಚ್ಚಿಸುವುದು ವಿಷಯಗಳನ್ನು ಮತ್ತಷ್ಟು ನಿಜ ಮತ್ತು ಸ್ಪಷ್ಟತೆಯಿಂದ ನೋಡಲುನಿಮಗೆ ನೆರವಾಗುತ್ತವೆ.

ABOUT THE AUTHOR

...view details