ಕರ್ನಾಟಕ

karnataka

ಜಿಎಚ್‌ಎಂಸಿ ಚುನಾವಣೆ: ಹೈದರಾಬಾದ್​ನಲ್ಲಿ ಬಿಜೆಪಿ ಪರ ಯುಪಿ ಸಿಎಂ ಕ್ಯಾಂಪೇನ್​

By

Published : Nov 28, 2020, 6:57 AM IST

ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‌ಎಂಸಿ) ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಹೈದರಾಬಾದ್‌ಗೆ ಭೇಟಿ ನೀಡಿ ಬಿಜೆಪಿ ಪ್ರಚಾರದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಮಲ್ಕಜ್​​ಗಿರಿ ಸಂಸದೀಯ ಕ್ಷೇತ್ರದಲ್ಲಿ ಇಂದು ನಡೆಯಲಿರುವ ರೋಡ್ ಶೋ ನೇತೃತ್ವವನ್ನು ಯೋಗಿ ಆದಿತ್ಯನಾಥ್​ ವಹಿಸಿಕೊಳ್ಳಲಿದ್ದಾರೆ. .

Yogi Adityanath to address public meeting in Old Hyderabad today
ಜಿಎಚ್‌ಎಂಸಿ ಚುನಾವಣೆ

ಹೈದರಾಬಾದ್​: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಹೈದರಾಬಾದ್‌ಗೆ ಭೇಟಿ ನೀಡಲಿದ್ದು, ಮುಂದಿನ ತಿಂಗಳು ನಡೆಯಲಿರುವ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಚುನಾವಣೆಗೆ ಬಿಜೆಪಿ ಪ್ರಚಾರ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಇಂದು ಯೋಗಿ ನೇತೃತ್ವದಲ್ಲಿ ಮಲ್ಕಜ್​​ಗಿರಿ ಕ್ಷೇತ್ರದಲ್ಲಿ ರೋಡ್ ಶೋ ಕೂಡ ನಡೆಯಲಿದೆ. ನಂತರ ಅಖಿಲ ಭಾರತ ಮಜ್ಲಿಸ್​ -ಎ-ಇಟ್ಟೇಹದುಲ್ ಮುಸ್ಲೀಮೀನ್ (ಎಐಐಎಂಐಎಂ) ನ ಮೂಲ ಎಂದೇ ಕರೆಯಲಾಗುವ ಹೈದರಾಬಾದ್​​ನ​​ ಓಲ್ಡ್​ ಸಿಟಿಯ ಶಾ ಅಲಿ ಬಂದಾದಲ್ಲಿ ಯೋಗಿ ಸಾರ್ವಜನಿಕ ಭಾಷಣ ಮಾಡಲಿದ್ದಾರೆ.

ಇನ್ನು ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹೈದರಾಬಾದ್‌ನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದು, ಶನಿವಾರ ಯೋಗಿ ಆದಿತ್ಯನಾಥ್ ಅವರು ತಮ್ಮ ಸಾರ್ವಜನಿಕ ಭಾಷಣದಲ್ಲಿ ನಿಜಾಮ್‌ನ ಖಾಸಗಿ ಸೇನೆಯಾಗಿದ್ದ 'ರಜಾಕರ್'ಗಳ ಕುರಿತು ಮಾತನಾಡಲಿದ್ದಾರೆ ಎಂದು ಹೇಳಿದ್ದರು.

ಇನ್ನು ಡಿಸೆಂಬರ್ 1 ರಂದು ನಡೆಯಲಿರುವ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ 150 ವಾರ್ಡ್‌ಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.

ABOUT THE AUTHOR

...view details