ಚೆನ್ನೈ:ಕಳೆದ ಕೆಲ ದಿನಗಳ ಹಿಂದೆ ತಲೆ ಮೇಲೆ ಎಐಎಡಿಎಂಕೆ ಪಕ್ಷದ ಬ್ಯಾನರ್ ಬಿದ್ದು 23 ವರ್ಷದ ಯುವತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಅಂತಹದ್ದೇ ದುರ್ಘಟನೆ ನಡೆದಿದೆ.
ತಮಿಳುನಾಡಿನ ಕೊಯಂಬತ್ತೂರಿನ ರೋಡ್ನಲ್ಲಿ ಸ್ಕೂಟಿ ಮೇಲೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, 30 ವರ್ಷದ ಮಹಿಳೆ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾಳೆ.
ಅನುರಾಧ ರಾಜೇಶ್ವರಿ ನಿನ್ನೆ ಬೆಳಗ್ಗೆ ಸ್ಕೂಟರ್ನಲ್ಲಿ ಆಫೀಸ್ಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಬದಿ ಹಾಕಿದ್ದ ಎಐಎಡಿಎಂಕೆ ಪಕ್ಷದ ಬ್ಯಾನರ್ ಆಕೆಯ ಮೇಲೆ ಬೀಳುತ್ತಿತ್ತು. ಈ ವೇಳೆ ಬೀಳುತ್ತಿರುವ ಬ್ಯಾನರ್ ತಪ್ಪಿಸಲು ಹೋದಾಗ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಟ್ರಕ್ ಆಕೆಗೆ ಗುದ್ದಿದೆ. ಈ ವೇಳೆ ಆಕೆಯ ಎರಡೂ ಕಾಲುಗಳ ಮೇಲೆ ಲಾರಿ ಚಕ್ರ ಹರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಗೆ ಟ್ರಕ್ ಚಾಲಕನ ಅಜಾಗರೂಕತೆಯೇ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿನ್ನೆ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಕೊಯಂಬತ್ತೂರಿಗೆ ಆಗಮಿಸಿದ್ದು, ಅವರನ್ನು ಸ್ವಾಗತಿಸಲು ಹೆದ್ದಾರಿಯಲ್ಲಿ ಪಕ್ಷದ ಧ್ವಜ ಹಾಗು ಬ್ಯಾನರ್ ಹಾಕಲಾಗಿತ್ತು.