ಜೆಮ್ಷೆಡ್ಪುರ:ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ಅಂತ ಹೇಳಿಕೊಂಡು ಹಣ ವಸೂಲಿಗಿಳಿದ ವ್ಯಕ್ತಿಯನ್ನು ಹಿಡಿದ ಮಹಿಳೆ ಆತನಿಗೆ ಸಾರ್ವಜನಿಕವಾಗಿ ಥಳಿಸಿದ್ದಾರೆ.
ನಕಲಿ ಭ್ರಷ್ಟಾಚಾರ ನಿಗ್ರಹ ಅಧಿಕಾರಿಗೆ ಮಹಿಳೆಯಿಂದ ಮಂಗಳಾರತಿ!
ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿ ಅಂತ ನಕಲಿ ಐಡಿ ಇಟ್ಟುಕೊಂಡು ಹಣ ವಸೂಲಿಗೆ ಇಳಿದ ವ್ಯಕ್ತಿಗೆ ಮಹಿಳೆ ಸಾರ್ವಜನಿಕವಾಗಿ ಥಳಿಸಿರುವ ಘಟನೆ ನಡೆದಿದೆ.
ಮಹಿಳೆಯಿಂದ ಥಳಿತ
ಜೆಮ್ಶೆಡ್ಪುರದ ಮಾಂಗೋ ಪ್ರದೇಶದಲ್ಲಿ ಆರೋಪಿಯು ಮಹಿಳೆಯಿಂದ 50,000 ಹಣದ ಬೇಡಿಕೆ ಇಟ್ಟಿದ್ದಾನೆ. ಅಲ್ಲದೇ ನಿಮ್ಮ ಕೌಟುಂಬಿಕ ಸಮಸ್ಯೆ ನಿವಾರಣೆ ಮಾಡುವುದಾಗಿ ಭರವಸೆ ಕೊಟ್ಟಿದ್ದಾನೆ. ಈತನ ಚಲನವಲನದ ಬಗ್ಗೆ ಅನುಮಾನಗೊಂಡ ಮಹಿಳೆ, ದುಡ್ಡು ಕೊಡುವ ನೆಪದಲ್ಲಿ ಕರೆಸಿಕೊಂಡಿದ್ದಾರೆ. ಈ ವೇಳೆ ವಂಚಕನಿಗೆ ಸಾರ್ವಜನಿಕ ಪ್ರದೇಶದಲ್ಲೇ ಥಳಿಸಿದರು.
ಆರೋಪಿಯನ್ನು ವಶಕ್ಕೆ ಪಡೆದ ಮಾಂಗೋ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.