ಕರ್ನಾಟಕ

karnataka

ETV Bharat / bharat

ಮುಂಬೈನಿಂದ ಜಮ್​​ಶೆಡ್​​​​ಪುರ್​ಗೆ ಪ್ರಯಾಣ... 1800 ಕಿ.ಮೀ ಸ್ಕೂಟರ್​​ ಓಡಿಸಿದ ಮಹಿಳೆ! - ಸೋನಿಯಾ ದಾಸ್

ಕಳೆದ ನಾಲ್ಕು ತಿಂಗಳಿಂದ ಮುಂಬೈನಲ್ಲಿ ಸಿಲುಕಿಕೊಂಡಿದ್ದ ಸೋನಿಯಾ ದಾಸ್​ ಸ್ಕೂಟರ್​​ನಲ್ಲೇ ಜಾರ್ಖಂಡ್​ನ ಜಮ್​ಶೆಡ್​​ಪುರ್​ಕ್ಕೆ ಪ್ರಯಾಣ ಬೆಳೆಸಿರುವ ಘಟನೆ ನಡೆದಿದೆ

Woman rides 1800 km
Woman rides 1800 km

By

Published : Jul 25, 2020, 10:07 PM IST

ಜಮ್​​ಶೆಡ್​​​​ಪುರ್​​ (ಜಾರ್ಖಂಡ್): ದೇಶಾದ್ಯಂತ ಕೊರೊನಾ ಅಬ್ಬರ ಹಾಗೂ ಲಾಕ್​ಡೌನ್​ ಕಾರಣ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಜನರು ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ ಸೈಕಲ್​, ಬೈಕ್​, ಸ್ಕೂಟರ್​ಗಳ ಮೇಲೆ ತಮ್ಮ ಊರುಗಳಿಗೆ ಜನರು ಹೋಗುತ್ತಿರುವ ಘಟನೆ ಇಂದಿಗೂ ನಡೆಯುತ್ತಿವೆ.

ಕಳೆದ ನಾಲ್ಕು ತಿಂಗಳಿಂದ ಮುಂಬೈನಲ್ಲಿ ಸಿಲುಕಿಕೊಂಡಿದ್ದ ಸೋನಿಯಾ ದಾಸ್​ ಸ್ಕೂಟರ್​​ನಲ್ಲೇ ಜಾರ್ಖಂಡ್​ನ ಜಮ್​ಶೆಡ್​​ಪುರ್​ಕ್ಕೆ ತೆರಳಿದ್ದು, ಬರೋಬ್ಬರಿ 1800 ಕಿಲೋ ಮೀಟರ್​​ ಸ್ಕೂಟರ್​ ಓಡಿಸಿದ್ದಾಳೆ.

ಮುಂಬೈ ಬಿಡುವುದಕ್ಕೂ ಮೊದಲು ಜಾರ್ಖಂಡ್​ ಮುಖ್ಯಮಂತ್ರಿ ಹೇಮಂತ್​ ಸೊರೆನ್​ ಹಾಗೂ ಬಾಲಿವುಡ್​ ನಟ ಸೋನು ಸೂದ್​​ ಅವರ ಬಳಿ ಊರಿಗೆ ತೆರಳಲು ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಂಡಿದ್ದಳು. ಆದರೆ ಅವರಿಂದ ಯಾವುದೇ ರೀತಿಯ ಸಹಾಯ ಲಭ್ಯವಾಗದ ಕಾರಣ ಈ ನಿರ್ಧಾರ ಕೈಗೊಂಡಿದ್ದಾಳೆ.

ಸೋನಿಯಾ ಮುಂಬೈನಲ್ಲಿ ಪ್ರೊಡೆಕ್ಷನ್​ ಹೌಸ್​​ನಲ್ಲಿ ಕೆಲಸ ಮಾಡುತ್ತಿದ್ದಳು. ಇವರ ಪತಿ ಅಭಿಷೇಕ್​​ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಐದು ವರ್ಷದ ಮಗುವಿದೆ. ಲಾಕ್​ಡೌನ್​ ಕಾರಣ ಎಲ್ಲ ಶೂಟಿಂಗ್​ ಕೆಲಸ ಸ್ಥಗಿತಗೊಂಡಿದ್ದ ಕಾರಣ ಇವರು ನಿರುದ್ಯೋಗಿಯಾಗಿದ್ದರು. ಜತೆಗೆ ಆರ್ಥಿಕ ಬಿಕ್ಕಟ್ಟಿನ ಕಾರಣ ಬಾಡಿಗೆ ಮನೆ ಬಿಟ್ಟು ಸ್ನೇಹಿತೆ ಸಬಿಯಾ ಮನೆಯಲ್ಲಿ ಉಳಿದುಕೊಂಡಿದ್ದಳು.

ಯಾವುದೇ ರೀತಿಯ ಸಹಾಯ ಲಭ್ಯವಾಗದ ಕಾರಣ ಸಬಿಯಾ ಜತೆ ಸ್ಕೂಟರ್​​ನಲ್ಲಿ ಜಾರ್ಖಂಡ್​ಗೆ ಪ್ರಯಾಣ ಮಾಡಲು ನಿರ್ಧರಿಸಿದ್ದಾಳೆ. ಬೇರೆಯವರಿಂದ 5 ಸಾವಿರ ರೂ. ವ್ಯವಸ್ಥೆ ಮಾಡಿಕೊಂಡು ಜುಲೈ 21ರಂದು ಮುಂಬೈ ಬಿಟ್ಟಿದ್ದಾರೆ. ಜುಲೈ 22ರಂದು ರಾಯ್ಪುರ್​ ತಲುಪುತ್ತಿದ್ದಂತೆ ಸರಿಯಾದ ದಾಖಲೆ ಮತ್ತು ವಾಹನದ ಪಾಸ್​ ಇಲ್ಲದ ಕಾರಣ ತಡೆಹಿಡಿಯಲಾಗಿದೆ. ಅದು ಅಲ್ಲೇ ಉಳಿದುಕೊಂಡು ಮರುದಿನ ಪಾಸ್​ ವ್ಯವಸ್ಥೆ ಮಾಡಿಕೊಂಡು ಮತ್ತೆ ತಮ್ಮ ಪ್ರಯಾಣ ಆರಂಭಿಸಿದ್ದಾರೆ.ಇದೀಗ ಸುರಕ್ಷಿತವಾಗಿ ಜಮ್​​ಶೆಡ್​​​​ಪುರ ತಲುಪಿರುವ ಮಹಿಳೆ ತನ್ನ ಪ್ರಯಾಣದ ಬಗ್ಗೆ ಮಾಹಿತಿ ನೀಡಿದ್ದಾಳೆ.

ABOUT THE AUTHOR

...view details