ಇಂದೋರ್: ತಾನು ಪೊಲೀಸ್ ಎಂದು ನಂಬಿಸಿ ಜನರಿಗೆ ಮೋಸ ಮಾಡಿ, ದರೋಡೆ ನಡೆಸುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಗೆಳೆಯನ ಪತ್ನಿ ಪೊಲೀಸ್ ಆಗಿದ್ದು, ತನ್ನ ಪತ್ನಿಯ ಸಮವಸ್ತ್ರವನ್ನು ಗೆಳತಿಗೆ ನೀಡಿ ಆತನೇ ದರೋಡೆಯಲ್ಲಿ ಸಹಕರಿಸುತ್ತಿದ್ದ ಎಂದು ತಿಳಿದುಬಂದಿದೆ. ಇದೀಗ ಇಬ್ಬರನ್ನೂ ಬಂಧಿಸಲಾಗಿದೆ.
ಪೊಲೀಸ್ ವೇಷದಲ್ಲಿ ದರೋಡೆ ನಡೆಸುತ್ತಿದ್ದ ಮಹಿಳೆಯ ಬಂಧನ.. - police
ಮಧ್ಯಪ್ರದೇಶದಲ್ಲಿ ಇನ್ಸ್ಪೆಕ್ಟರ್ ಆಗಿರುವ ತನ್ನ ಪತ್ನಿಯ ಸಮವಸ್ತ್ರವನ್ನೇ ದರೋಡೆ ನಡೆಸುತ್ತಿದ್ದ ಆರೋಪಿಗೆ ನೀಡುತ್ತಿದ್ದ. ಅದೇ ಡ್ರೆಸ್ ಹಾಕಿಕೊಳ್ತಿದ್ದ ಮಹಿಳೆ ಜತೆಗೆ ನಕಲಿ ಗುರುತಿನ ಚೀಟಿಯನ್ನೂ ಮಾಡಿಸಿದ್ದಳು. ಅದನ್ನ ತೋರಿಸಿಯೇ ಅಮಾಯಕರಿಗೆ ಯಾಮಾರಿಸುತ್ತಿದ್ದರು.
'ಪೊಲೀಸ್ ಸಮವಸ್ತ್ರ ಧರಿಸಿ, ತಾನು ಪೊಲೀಸ್ ಎಂದು ಜನರನ್ನು ನಂಬಿಸಿ ಮಹಿಳೆ ದರೋಡೆ ನಡೆಸುತ್ತಿದ್ದಳು' ಎಂದು ಪೊಲೀಸರು ಹೇಳಿದ್ದಾರೆ. ಅಚ್ಚರಿ ಏನಂದ್ರೇ, ಈ ಖತರ್ನಾಕ್ ಲೇಡಿಯಗೆಳೆಯನೊಬ್ಬ ಇದಕ್ಕೆಲ್ಲ ಸಾಥ್ ನೀಡುತ್ತಿದ್ದ. ಮಧ್ಯಪ್ರದೇಶದಲ್ಲಿ ಇನ್ಸ್ಪೆಕ್ಟರ್ ಆಗಿರುವ ತನ್ನ ಪತ್ನಿಯ ಸಮವಸ್ತ್ರವನ್ನೇ ದರೋಡೆ ನಡೆಸುತ್ತಿದ್ದ ಆರೋಪಿಗೆ ನೀಡುತ್ತಿದ್ದ. ಅದೇ ಡ್ರೆಸ್ ಹಾಕಿಕೊಳ್ತಿದ್ದ ಮಹಿಳೆ ಜತೆಗೆ ನಕಲಿ ಗುರುತಿನ ಚೀಟಿಯನ್ನೂ ಮಾಡಿಸಿದ್ದಳು. ಅದನ್ನ ತೋರಿಸಿಯೇ ಅಮಾಯಕರಿಗೆ ಯಾಮಾರಿಸುತ್ತಿದ್ದರು. ಇದನ್ನೆಲ್ಲ ವಶಪಡಿಸಿಕೊಂಡಿರು ಪೊಲೀಸರು, ಆರೋಪಿಗಳ ಗುರುತನ್ನು ಇನ್ನೂ ಬಹಿರಂಗಪಡಿಸಿಲ್ಲ. ಆರೋಪಿಗಳ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.