ಕರ್ನಾಟಕ

karnataka

ETV Bharat / bharat

ಮಾವಿನ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ... ಗಂಡನ ಮೇಲೆ ಶಂಕೆ! - ಪಶ್ಚಿಮ ಬಂಗಾಳದ ಮಾಲ್ಡಾ

ಗಂಡನ ಮನೆಯವರು ಮಹಿಳೆಯೊಬ್ಬಳಿಗೆ ಕಿರುಕುಳ ನೀಡಿ, ಕೊಲೆ ಮಾಡಿ ತದನಂತರ ಆಕೆಯ ಶವ ಮಾವಿನ ಮರಕ್ಕೆ ನೇಣು ಬಿಗಿದಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Woman found hanging from tree in Bengal
Woman found hanging from tree in Bengal

By

Published : Mar 14, 2020, 12:19 PM IST

ಮಾಲ್ಡಾ(ಪಶ್ಚಿಮ ಬಂಗಾಳ): ಮಾವಿನ ತೋಟದಲ್ಲಿ 29 ವರ್ಷದ ಯುವತಿಯೊಬ್ಬಳ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗಂಡನ ಮೇಲೆ ಶಂಕೆ ವ್ಯಕ್ತಪಡಿಸಲಾಗಿದೆ.

ರೇಷ್ಮಾ ಖತೂನ್​ ಮೃತ ದುರ್ದೈವಿಯಾಗಿದ್ದಾಳೆ. ಈಕೆಯ ಗಂಡ ಹಾಗೂ ಅಳಿಯಂದಿರು ಸೇರಿಕೊಂಡು ಕತ್ತು ಹಿಸುಕಿ ಈಕೆಯ ಕೊಲೆ ಮಾಡಿದ್ದು, ತದನಂತರ ಮಾವಿನ ಮರಕ್ಕೆ ನೇಣು ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು, ಈಗಾಗಲೇ ಆಕೆಯ ಗಂಡನ ಬಂಧನ ಮಾಡಲಾಗಿದೆ.

ರೇಷ್ಮಾ ಕುಟುಂಬಸ್ಥರು ನೀಡಿರುವ ದೂರಿನನ್ವಯ ಗಂಡನ ಮನೆಯವರು ನಿತ್ಯ ಆಕೆಗೆ ತೊಂದರೆ ನೀಡುತ್ತಿದ್ದರಂತೆ. ಮಹಿಳೆ ತಂದೆ ಕಡೆಯಿಂದ ಭೂಮಿ ತಮಗೆ ವರ್ಗಾವಣೆ ಮಾಡುವಂತೆ ಪಟ್ಟು ಹಿಡಿದಿದ್ದು, ಇದಕ್ಕೆ ಆಕೆ ಒಪ್ಪಿಕೊಳ್ಳದ ಕಾರಣ ದುಷ್ಕೃತ್ಯ ವೆಸಗಿದ್ದಾಗಿ ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details