ಕರ್ನಾಟಕ

karnataka

By

Published : Mar 26, 2019, 7:34 PM IST

ETV Bharat / bharat

ಅನಾರೋಗ್ಯ ರಜೆಯಲ್ಲಿ ಶ್ರೀನಗರದತ್ತಲೇ  ಅಭಿನಂದನ್ ಪ್ರಯಾಣ ಬೆಳೆಸಿದ್ದೇಕೆ..?

ಈ ರಜೆಯಲ್ಲಿ ಕುಟುಂಬಸ್ಥರೊಂದಿಗೆ ಅಭಿನಂದನ್ ಸಮಯ ಕಳೆಯುವ ಅವಕಾಶವನ್ನೂ ಹೊಂದಿದ್ದರು. ಆದರೆ ಅಭಿನಂದನ್ ಈ ರಜೆಯಲ್ಲಿ ಶ್ರೀನಗರದಲ್ಲಿರುವ ಸ್ಕ್ವಾಡ್ರನ್​​ರನ್ನು ಭೇಟಿ ಮಾಡಲಿದ್ದಾರೆ.

ಅಭಿನಂದನ್

ನವದೆಹಲಿ: ಯುದ್ಧೋನ್ಮಾದಲ್ಲಿದ್ದ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿ ವಿಶ್ವಮಟ್ಟದಲ್ಲಿ ಭಾರತದ ಸಾಮರ್ಥ್ಯವನ್ನು ಸಾಬೀತುಪಡಿಸಿದ ವಿಂಗ್ ಕಮಾಂಡರ್​ ಅಭಿನಂದನ್ ವರ್ತಮಾನ್ ಅನಾರೋಗ್ಯ ರಜೆ ನಿಮಿತ್ತ ಶ್ರೀನಗರಕ್ಕೆ ತೆರಳಿದ್ದಾರೆ.

ಪಾಕಿಸ್ತಾನದಿಂದ ಭಾರತಕ್ಕೆ ಹಿಂತಿರುಗಿದ ಬಳಿಕ ವಿವಿಧ ಪರೀಕ್ಷೆಗಳಿಗೆ ಒಳಪಟ್ಟ ನಂತರ ಇದೀಗ ವೈದ್ಯರ ಸಲಹೆ ಮೇರೆಗೆ ಅಭಿನಂದನ್​​ ನಾಲ್ಕು ವಾರಗಳ ಅನಾರೋಗ್ಯ ರಜೆ ಪಡೆದು ಶ್ರೀನಗರದತ್ತ ಪ್ರಯಾಣ ಬೆಳೆಸಿದ್ದಾರೆ.

ಈ ರಜೆಯಲ್ಲಿ ಕುಟುಂಬಸ್ಥರೊಂದಿಗೆ ಅಭಿನಂದನ್ ಸಮಯ ಕಳೆಯುವ ಅವಕಾಶವನ್ನೂ ಹೊಂದಿದ್ದರು. ಆದರೆ ಅಭಿನಂದನ್, ಚೆನ್ನೈಗೆ ಹೋಗುವ ಬದಲಿಗೆ ಈ ರಜೆಯಲ್ಲಿ ಶ್ರೀನಗರದಲ್ಲಿರುವ ಸ್ಕ್ವಾಡ್ರನ್​​ರನ್ನು ಭೇಟಿ ಮಾಡಿ ತಮ್ಮ ಸಾಮರ್ಥ್ಯವನ್ನ ಸಾಬೀತುಪಡಿಸಲು ನಿರ್ಧರಿಸಿದ್ದಾರೆ. ನಾಲ್ಕು ವಾರಗಳ ಬಳಿಕ ಅವರು ಮತ್ತೆ ನವದೆಹಲಿಗೆ ತೆರಳಲಿದ್ದಾರೆ.

ಪಾಕಿಸ್ತಾನದ ಎಫ್​-16 ಯುದ್ಧ ವಿಮಾನವನ್ನು ಹೊಡೆದುರುಳಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನ ಪ್ರವೇಶಿಸಿದ್ದ ಅಭಿನಂದನ್ ಅವರನ್ನು ಪಾಕ್ ಆರ್ಮಿ ಬಂಧಿಸಿತ್ತು.

ಇದಾದ ಕೆಲ ದಿನದಲ್ಲೇ ಭಾರತದ ಒತ್ತಡಕ್ಕೆ ಮಣಿದಿದ್ದ ಇಮ್ರಾನ್ ಖಾನ್ ಸರ್ಕಾರ ಅಭಿನಂದನ್​​ರನ್ನು ಭಾರತಕ್ಕೆ ಒಪ್ಪಿಸಿತ್ತು.

ABOUT THE AUTHOR

...view details