ಕರ್ನಾಟಕ

karnataka

ETV Bharat / bharat

ಆ.​1 ರೊಳಗೆ ಮನೆ ಖಾಲಿ ಮಾಡುತ್ತೇನೆ : ಪ್ರಿಯಾಂಕ ಗಾಂಧಿ ಸ್ಷಷ್ಟನೆ

ಜುಲೈ 1 ರಂದು ನೋಟಿಸ್​​ ನೀಡಿದಂತೆ ಆಗಸ್ಟ್ 1ರೊಳಗೆ 35 ಲೋಧಿ ಎಸ್ಟೇಟ್​ನಲ್ಲಿರುವ ಮನೆಯನ್ನು ಖಾಲಿ ಮಾಡುತ್ತೇನೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಸ್ಪಷ್ಟಪಡಿಸಿದ್ದಾರೆ.

Will vacate govt accommodation by August 1: Priyanka Gandhi
ಪ್ರಿಯಾಂಕಾ ಗಾಂಧಿ ವಾದ್ರಾ

By

Published : Jul 14, 2020, 2:16 PM IST

ನವದೆಹಲಿ : ಆಗಸ್ಟ್ 1 ರೊಳಗೆ 35 ಲೋಧಿ ಎಸ್ಟೇಟ್​ನಲ್ಲಿರುವ ಸರ್ಕಾರಿ ವಸತಿಯನ್ನು ಖಾಲಿ ಮಾಡುವುದಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, "ಮಾಧ್ಯಮಗಳಲ್ಲಿ ಬಂದಿರುವ ವರದಿ ಸುಳ್ಳು , ಮನೆ ಖಾಲಿ ಮಾಡುವ ಕುರಿತು ನಾನು ಸರ್ಕಾರಕ್ಕೆ ಯಾವುದೇ ಮನವಿ ಮಾಡಿಲ್ಲ. ಜುಲೈ 1 ರಂದು ನೋಟಿಸ್​​ ನೀಡಿದಂತೆ ಆಗಸ್ಟ್ 1 ರಂದು 35 ಲೋಧಿ ಎಸ್ಟೇಟ್​ನಲ್ಲಿರುವ ಮನೆಯನ್ನು ಖಾಲಿ ಮಾಡುತ್ತೇನೆ" ಎಂದು ಹೇಳಿದ್ದಾರೆ. ​

ಗಾಂಧಿ ಕುಟುಂಬಕ್ಕೆ ನೀಡಿದ್ದ ವಿಶೇಷ ಭದ್ರತೆಯನ್ನು ಸರ್ಕಾರ ಹಿಂಪಡೆದಿರುವ ಹಿನ್ನೆಲೆ ಪ್ರಿಯಾಂಕಾ ಗಾಂಧಿ ವಾದ್ರಾ ಆಗಸ್ಟ್ 1 ರೊಳಗೆ ದೆಹಲಿಯಲ್ಲಿರುವ ತಮ್ಮ ಸರ್ಕಾರಿ ವಸತಿ ಖಾಲಿ ಮಾಡುವಂತೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿರುವ ಎಸ್ಟೇಟ್ ನಿರ್ದೇಶನಾಲಯವು ನೋಟಿಸ್​ ನೀಡಿತ್ತು.

ಎಸ್‌ಪಿಜಿ ಹಿಂಪಡೆದು ಝಡ್​ ಪ್ಲಸ್​ ಭದ್ರತೆ ನೀಡಿದ ಬಳಿಕ ಭದ್ರತೆ ಆಧಾರದಲ್ಲಿ ನಿಮಗೆ ಮನೆ ಹಂಚಿಕೆ ಮಾಡಬೇಕು. ಆದ್ದರಿಂದ 35 ಲೋಧಿ ಎಸ್ಟೇಟ್​ನಲ್ಲಿರುವ ಟೈಪ್​ 6 ಬಿ ಮನೆಯನ್ನು ಜುಲೈ 1 ರಿಂದ ನಿಮ್ಮಿಂದ ಹಿಂಪಡೆಯಲಾಗಿದೆ. ಆಗಸ್ಟ್​ 1 ರೊಳಗೆ ಮನೆ ತೊರೆಯುವಂತೆ ಸಚಿವಾಲಯ ಪ್ರಿಯಾಂಕ ಗಾಂಧಿಗೆ ತಿಳಿಸಿತ್ತು. ಹಾಗಾಗಿ ಆಗಸ್ಟ್ 1 ರೊಳಗೆ ಮನೆ ಖಾಲಿ ಮಾಡುವುದಾಗಿ ಪ್ರಿಯಾಂಕ ಗಾಂಧಿ ಹೇಳಿದ್ದಾರೆ.

ABOUT THE AUTHOR

...view details