ಕರ್ನಾಟಕ

karnataka

By

Published : Jan 4, 2021, 4:32 PM IST

ETV Bharat / bharat

ನಾನು ಕೋವಿಡ್​ ಲಸಿಕೆ ಪಡೆಯಲ್ಲ; ಶಿವರಾಜ್​ ಸಿಂಗ್​ ಚೌಹಾಣ್​ ಈ ರೀತಿ ಹೇಳಿದ್ಯಾಕೆ!?

ಯಾವುದೇ ಕಾರಣಕ್ಕೂ ಈಗಲೇ ನಾನು ಕೋವಿಡ್​ ವ್ಯಾಕ್ಸಿನ್​ ಪಡೆದುಕೊಳ್ಳುವುದಿಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಹೇಳಿದ್ದಾರೆ.

Shivraj Singh Chouhan
Shivraj Singh Chouhan

ಭೋಪಾಲ್ ​(ಮಧ್ಯಪ್ರದೇಶ): ದೇಶದಲ್ಲಿ ತುರ್ತು ಬಳಕೆ ಮಾಡಲು ಎರಡು ಕೋವಿಡ್ ಲಸಿಕೆಗಳಿಗೆ ಅನುಮತಿ ನೀಡಲಾಗಿದ್ದು, ಆರಂಭದಲ್ಲಿ ಮೂರು ಕೋಟಿ ಜನರಿಗೆ ಈ ವ್ಯಾಕ್ಸಿನ್​ ನೀಡುವ ಸಾಧ್ಯತೆ ಇದೆ. ಇದರ ಮಧ್ಯೆ ತಾವು ಈಗಲೇ ಕೋವಿಡ್​ ಲಸಿಕೆ ಪಡೆದುಕೊಳ್ಳುವುದಿಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಹೇಳಿದ್ದಾರೆ.

ಶಿವರಾಜ್​ ಸಿಂಗ್​ ಚೌಹಾಣ್​ ಸುದ್ದಿಗೋಷ್ಠಿ

ನಾನು ಈಗಲೇ ಲಸಿಕೆ ಪಡೆಯದಿರಲು ನಿರ್ಧರಿಸಿದ್ದೇನೆ. ಮೊದಲು ಇತರರಿಗೆ ನೀಡಬೇಕು. ನನ್ನ ಸರದಿ ನಂತರ ಬರಬೇಕು. ಲಸಿಕೆಯನ್ನು ಆದ್ಯತೆ ಮೇಲೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ವೇಳೆ ಅವರು ಮಾಹಿತಿ ಹೊರಹಾಕಿದ್ದಾರೆ.

ದೇಶದಲ್ಲಿ ಕೊರೊನಾ ಲಸಿಕೆ ಬಳಕೆ ಮಾಡಲು ತುರ್ತು ಅನುಮತಿ ಸಿಗುತ್ತಿದ್ದಂತೆ ಆಡಳಿತ ಹಾಗೂ ವಿಪಕ್ಷಗಳ ನಡುವೆ ರಾಜಕೀಯ ಕೆಸರೆರಚಾಟ ಕೂಡ ಶುರುವಾಗಿದೆ. ಇದೇ ವಿಷಯವಾಗಿ ಮಾತನಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ಇದೊಂದು ಬಿಜೆಪಿ ವ್ಯಾಕ್ಸಿನ್​ ಎಂದಿದ್ದರು.

ABOUT THE AUTHOR

...view details