ಕರ್ನಾಟಕ

karnataka

ETV Bharat / bharat

ಇಂದಿರಾಗೆ ಬಾಂಗ್ಲಾ​ ವಿಭಜನೆ ಕ್ರೆಡಿಟ್​​​ ಒಕೆ, ಏರ್​ಸ್ಟ್ರೈಕ್​​​ ಕ್ರೆಡಿಟ್​​​​​​ ಮೋದಿಗೇಕಿಲ್ಲ: ರಾಜನಾಥ್​​ ಸಿಂಗ್​​​​ - ದಾಳಿ

ಪಾಕಿಸ್ತಾನ ವಿಭಜಿಸಿ ಬಾಂಗ್ಲಾ ರಾಷ್ಟ್ರ ಉದಯಿಸಿದ ಕ್ರೆಡಿಟ್ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಸಲ್ಲುವುದಾದರೆ, ಬಾಲಾಕೋಟ್ ಏರ್​ಸ್ಟ್ರೈಕ್​ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬಾರದೇಕೆ: ರಾಜನಾಥ್ ಸಿಂಗ್ ಪ್ರಶ್ನೆ

ಆರ್ಮಿ ಕ್ರೆಡಿಟ್​ ವಾರ್​

By

Published : Mar 30, 2019, 9:48 PM IST

ಅಹಮದಾಬಾದ್:ಪುಲ್ವಾಮಾ ದಾಳಿಗೆ ಪ್ರತೀಕಾರವಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಾಯುಪಡೆ ದಾಳಿಯ ಕ್ರೆಡಿಟ್​ ವಾಕ್ ವಾರ್ ಮತ್ತೆ ಮುನ್ನೆಲೆಗೆ ಬಂದಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಂದಿರಾ ಗಾಂಧಿಯವರ ನಡೆಯನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್​ಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಾಮಪತ್ರ ಸಲ್ಲಿಕೆಯ ಬಳಿಕ ಸಾರ್ವಜನಿಕ ಮೆರವಣಿಗೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್​, ಪಾಕಿಸ್ತಾನ ವಿಭಜಿಸಿ ಬಾಂಗ್ಲಾ ರಾಷ್ಟ್ರ ಉದಯಿಸಿದ ಕ್ರೆಡಿಟ್ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಸಲ್ಲುವುದಾದರೆ, ಬಾಲಾಕೋಟ್ ಏರ್​ಸ್ಟ್ರೈಕ್​ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬಾರದು ಏಕೆ ಎಂದು ಪ್ರಶ್ನಿಸಿದ್ದಾರೆ.

ಭಾರತೀಯ ಸೈನಿಕರ ಸಾಮರ್ಥ್ಯದಿಂದ ಪಾಕಿಸ್ತಾನ ವಿಂಗಡನೆಯಾಗಿ ಬಾಂಗ್ಲಾದೇಶ ಜನ್ಮ ತಾಳಿತು. ಭಾರತ-ಪಾಕ್​ ನಡುವೆ ಸಂಭವಿಸಿದ್ದ ಯುದ್ಧದ ಬಳಿಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ತಿನಲ್ಲಿ ಇಂದಿರಾ ಗಾಂಧಿ ಅವರನ್ನು ಪ್ರಶಂಸಿದ್ದರು. ಇದರ ಜೊತೆಗೆ ಅವರು ಇಡೀ ದೇಶದ ಪ್ರಶಂಸೆಗೆ ಪಾತ್ರರಾಗಿದ್ದರು. ಈಗ ಮೋದಿಯನ್ನು ಏಕೆ ಪ್ರಶ್ನಿಸುತ್ತಿರಾ ಎಂದರು.

'ನಮ್ಮ ಸಿಆರ್​ಪಿಎಫ್​ ಯೋಧರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಅದರ ಸೇಡು ತೀರಿಸಿಕೊಳ್ಳಲು ನಮ್ಮ ಪ್ರಧಾನಿ ಏರ್​ಸ್ಟ್ರೈಕ್ ಮುಖಾಂತರ ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ. ನಮ್ಮ ಪ್ರಧಾನಿಯನ್ನು ಏಕೆ ಪ್ರಶಂಸಿಸಬಾರದು ಎಂದಿದ್ದಾರೆ.

2008ರಲ್ಲಿ ನಡೆದ 26/11 ಮುಂಬೈ ಭಯೋತ್ಪಾದನಾ ದಾಳಿಯ ನಂತರ ಇದೇ ರೀತಿಯ ಪ್ರತೀಕಾರ ಕ್ರಮ ಕೈಗೊಳ್ಳದೆ ಅಂದಿನ ಕಾಂಗ್ರೆಸ್​ ಪ್ರಧಾನಿ ಹಿಂದೆ ಸರಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಂದು ಪಾಕಿಸ್ತಾನದ ವಿರುದ್ಧ ಏನೂ ಮಾಡಲು ಆಗಲಿಲ್ಲ. ರಾಜಕೀಯ ಮತ್ತು ಮಿಲಿಟರಿ ಶಕ್ತಿ ಕೈಗೆತ್ತಿಕೊಂಡಾಗ ವಿಶ್ವದ ಮಿಲಿಟರಿ ಶಕ್ತಿ ಸವಾಲೊಡ್ಡಬಹುದೆಂಬ ಅಳುಕಿತ್ತು ಎಂದು ಟೀಕಿಸಿದರು.

ಪುಲ್ವಾಮಾದಲ್ಲಿ ಜೈಷ್ ಎ ಮೊಹಮ್ಮದ್ ಭಯೋತ್ಪಾದಕರ ಆತ್ಮಾಹುತಿ ದಾಳಿಯಲ್ಲಿ 49 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಬಳಿಕ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಗೆ ಮುಕ್ತ ಅವಕಾಶ ನೀಡಿದ್ದರು ಎಂದು ರಾಜನಾಥ್ ಸಿಂಗ್ ಹೇಳಿದರು.

ABOUT THE AUTHOR

...view details