ಕರ್ನಾಟಕ

karnataka

ನಿದ್ರಾವಸ್ಥೆಯಲ್ಲಿದ್ದ ಬಿಜೆಪಿಯ ನಿದ್ರಾಭಂಗ ಮಾಡಿದ ದಿಲ್ಲಿ 'ಕೇಜ್ರಿ'ಸ್ಟಾರ್‌..!

By

Published : Feb 10, 2020, 11:11 PM IST

ದೆಹಲಿ ಚುನಾವಣೆಯ ಕಣಕ್ಕೆ ಬಿಜೆಪಿ ದೊಡ್ಡ ಮಟ್ಟದಲ್ಲಿ ಇಳಿಯುವುದಕ್ಕೂ ಮುನ್ನವೇ ಎಎಪಿ ಅನಾಯಾಸವಾಗಿ ಗೆಲ್ಲಲಿದೆ ಎಂಬುದು ಸ್ಪಷ್ಟವಾಗಿತ್ತು. ಕೇಜ್ರಿವಾಲ್ ಸೈದ್ಧಾಂತಿಕವಾಗಿಯೇ ನರೇಂದ್ರ ಮೋದಿ ಬೆಂಬಲಿಗರನ್ನು ಮೆಚ್ಚಿಸಿದ್ದರೆ, ಇನ್ನೊಂದೆಡೆ ರಾಜಧಾನಿಯನ್ನು ಅಭಿವೃದ್ಧಿಗೊಳಿಸುವುದಾಗಿ ಬಿಜೆಪಿ ಹೇಳಿತ್ತು. ಕಳೆದ ಐದು ವರ್ಷಗಳಲ್ಲಿ ಅಧಿಕಾರ ನಡೆಸಿದ ಕೇಜ್ರಿವಾಲ್‌, ಕೆಲ ಪ್ರಮುಖ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭ್ರಷ್ಟಾಚಾರ ಕಡಿಮೆ ಮಾಡುವುದು, ವಿದ್ಯುತ್ ಮತ್ತು ನೀರನ್ನು ದೆಹಲಿ ಜನರಿಗೆ ಉಚಿತವಾಗಿ ನೀಡುವ ಭರವಸೆಗಳನ್ನ ಅವರು ಈಡೇರಿಸಿದ್ದಾರೆ.

which-party-will-win-in-the-delhi-election
ದೆಹಲಿ ವಿಧಾನಸಭಾ ಚುನಾವಣೆ

ಈ ಬಾರಿಯ ದೆಹಲಿ ಚುನಾವಣೆಯಲ್ಲಿ ದೆಹಲಿ ಮತದಾರರು ಹಾಕಿದ ಮತಗಳು ಹಲವು ವಿಷಯಗಳನ್ನು ನಿರ್ಧರಿಸುತ್ತವೆ. ಒಂದು ವೇಳೆ ಚುನಾವಣೋತ್ತರ ಸಮೀಕ್ಷೆಯಲ್ಲಿ ನಿರೀಕ್ಷಿಸಿದ ಹಾಗೆ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಗೆಲುವು ಮತ್ತು ಅದು ಯಾವ ಅಂತರದಿಂದ ಗೆಲ್ಲುತ್ತದೆ ಎಂಬುದು ಬಿಜೆಪಿ ಹಲವು ವಿಷಯಗಳಲ್ಲಿ ತನ್ನ ನಿಲುವನ್ನು ಬದಲಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕುತ್ತದೆ. ಅದರಲ್ಲೂ ವಿಶೇಷವಾಗಿ ದೇಶಾದ್ಯಂತ ತೀವ್ರ ಪ್ರತಿಭಟನೆ ಮತ್ತು ವಿವಾದಕ್ಕೆ ಕಾರಣವಾದ ಪೌರತ್ವ ಕಾಯ್ದೆಯ ಬಗ್ಗೆ ತನ್ನ ನಿಲುವನ್ನು ಬಿಜೆಪಿ ಬದಲಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕುತ್ತದೆ.

ದೆಹಲಿ ಚುನಾವಣೆಯ ಕಣಕ್ಕೆ ಬಿಜೆಪಿ ದೊಡ್ಡ ಮಟ್ಟದಲ್ಲಿ ಇಳಿಯುವುದಕ್ಕೂ ಮುನ್ನವೇ ಎಎಪಿ ಅನಾಯಾಸವಾಗಿ ಗೆಲ್ಲಲಿದೆ ಎಂಬುದು ಸ್ಪಷ್ಟವಾಗಿತ್ತು. ಕೇಜ್ರಿವಾಲ್ ಸೈದ್ಧಾಂತಿಕವಾಗಿಯೇ ನರೇಂದ್ರ ಮೋದಿ ಬೆಂಬಲಿಗರನ್ನು ಮೆಚ್ಚಿಸಿದ್ದರೆ, ಇನ್ನೊಂದೆಡೆ ರಾಜಧಾನಿಯನ್ನು ಅಭಿವೃದ್ಧಿಗೊಳಿಸುವುದಾಗಿ ಬಿಜೆಪಿ ಹೇಳಿಕೊಂಡಿತ್ತು. ಕಳೆದ ಐದು ವರ್ಷಗಳಲ್ಲಿ ಅಧಿಕಾರ ನಡೆಸಿದ ಕೇಜ್ರಿವಾಲ್‌, ಕೆಲವು ಪ್ರಮುಖ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭ್ರಷ್ಟಾಚಾರ ಕಡಿಮೆ ಮಾಡುವುದು, ವಿದ್ಯುತ್ ಮತ್ತು ನೀರನ್ನು ದೆಹಲಿ ಜನರಿಗೆ ಉಚಿತವಾಗಿ ನೀಡುವ ಭರವಸೆಗಳನ್ನು ಅವರು ಈಡೇರಿಸಿದ್ದಾರೆ.

ಅವರು ಮೊಹಲ್ಲಾ ಕ್ಲಿನಿಕ್‌ಗಳನ್ನೂ ಸ್ಥಾಪಿಸಿದ್ದು, ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಿ, ಉಚಿತ ಚಿಕಿತ್ಸೆ ನೀಡುವ ಅನಿವಾರ್ಯತೆಗೆ ದೂಡಿದ್ದಾರೆ. ರಾಜಧಾನಿಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗಳು ಕೂಡ ಜನರಿಗೆ ಉಚಿತವಾಗಿ ದೊರಕುತ್ತಿದೆ.ಬಿಜೆಪಿ ಆರಂಭದಲ್ಲಿ ದೆಹಲಿಯಲ್ಲಿ ನಿದ್ರಾವಸ್ಥೆಯಲ್ಲೇ ಇತ್ತು. ಆದರೆ ಕೊನೆಯ ಹದಿನೈದು ದಿನಗಳಲ್ಲಿ ಎಚ್ಚೆತ್ತುಕೊಂಡ ಬಿಜೆಪಿ, ಕೇಂದ್ರದ ಗೃಹ ಸಚಿವ ಹಾಗೂ ಪಕ್ಷದ ಮಾಜಿ ಅಧ್ಯಕ್ಷ ಅಮಿತ್‌ ಷಾರನ್ನು ಪ್ರಚಾರದ ಕಣಕ್ಕಿಳಿಸಿತು. ಬಹುಶಃ ಇತ್ತೀಚಿನ ಚುನಾವಣೆಗಳ ಪೈಕಿ ಇದು ಅತ್ಯಂತ ದ್ವೇಷಯುತ ಹೇಳಿಕೆಗಳನ್ನು ಒಳಗೊಂಡ ಪ್ರಚಾರ ಕ್ಯಾಂಪೇನ್‌ ಆಗಿತ್ತು ಎಂದೇ ಹೇಳಬಹುದು. ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಶಹೀನ್‌ ಬಾಘ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಕ್ಯಾಂಪೇನ್‌ನಲ್ಲಿ ಪ್ರಸ್ತಾಪಿಸಿದ ಅಮಿತ್‌ ಷಾ, ಶಹೀನ್‌ ಬಾಘ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರಿಗೂ ಕೇಳುವಷ್ಟು ಗಟ್ಟಿಯಾಗಿ ಜನರು ವೋಟಿಂಗ್‌ ಮಶಿನ್‌ನಲ್ಲಿನ ಬಟನ್ ಒತ್ತಬೇಕು ಎಂದು ಕರೆ ನೀಡಿದರು.

ಶಹೀನ್‌ ಬಾಘ್‌ನ ಸುತ್ತಮುತ್ತ ವಾಸಿಸುತ್ತಿರುವ ಜನರಿಗೆ ಕಿರಿಕಿರಿ ಉಂಟು ಮಾಡುವಷ್ಟರ ಮಟ್ಟಿಗೆ ಪ್ರತಿಭಟನೆ ನಡೆಸುತ್ತಿರುವವರ ಬಗ್ಗೆ ವ್ಯಗ್ರ ಹೇಳಿಕೆಯನ್ನು ಅಮಿತ್‌ ಷಾ ನೀಡಿದ ನಂತರ ಇದಕ್ಕಿಂತ ಪ್ರಚೋದನಕಾರಿ ಹೇಳಿಕೆಗಳು ಕೇಳಿಬಂದವು. ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿ ಪ್ರತಿಭಟನಾಕಾರರು ದೇಶದ್ರೋಹಿಗಳು, ಅವರನ್ನು ಶೂಟ್ ಮಾಡಬೇಕು ಎಂದೂ ಕರೆ ನೀಡಿದರು. ಇನ್ನೊಬ್ಬ ಬಿಜೆಪಿ ಸಂಸದ ಪರ್ವೇಶ್‌ ವರ್ಮಾ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಈ ಪ್ರತಿಭಟನಾಕಾರರು ಹಿಂದುಗಳ ಮನೆಗೆ ಬಂದು, ಅತ್ಯಾಚಾರ ಮಾಡುತ್ತಾರೆ ಎಂದೂ ಹೇಳಿದರು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಹುತೇಕರು ಮಹಿಳೆಯರು ಎಂಬುದನ್ನೂ ಅವರು ಈ ಸಮಯದಲ್ಲಿ ಮರೆತಿದ್ದರು. ಈ ಪ್ರಚೋದನಕಾರಿ ಹೇಳಿಕೆಗಳಿಂದ ಪ್ರೋತ್ಸಾಹಿತರಾದ ಇಬ್ಬರು ಯುವಕರು ಶಹೀನ್‌ ಬಾಘ್‌ ಮತ್ತು ಜಾಮಿಯಾ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಬಳಿಗೆ ಹೋಗಿ ಗುಂಡು ಹಾರಿಸಿದ ಘಟನೆಯೂ ನಡೆಯಿತು. ಅದೃಷ್ಟವಶಾತ್‌ ಈ ಘಟನೆಯಲ್ಲಿ ಯಾರೂ ಸಾವನ್ನಪ್ಪಲಿಲ್ಲ.

ಈ ಪ್ರಚೋದನಕಾರಿ ಹೇಳಿಕೆಯ ಉದ್ದೇಶವೇ ಮತದಾರರಲ್ಲಿ ಕೋಮು ಭಾವನೆಯನ್ನು ಕೆರಳಿಸುವುದಕ್ಕಾಗಿತ್ತು. ಹಲವು ಸಂದರ್ಭಗಳಲ್ಲಿ ಇಂತಹ ಕೃತ್ಯಗಳು ಬಿಜೆಪಿಗೆ ನೆರವಾಗಿವೆ ಮತ್ತು ಇದನ್ನು ತಡೆಯುವುದಕ್ಕೆ ಬಿಜೆಪಿ ನಾಯಕತ್ವ ಮತ್ತು ಕಾರ್ಯತಂತ್ರ ರೂಪಿಸುವವರು ಮುಂದಾಗುವುದೇ ಇಲ್ಲ. ಅಷ್ಟಕ್ಕೂ ರಸ್ತೆಗಳನ್ನೆಲ್ಲ ನಿರ್ಬಂಧಿಸಿ ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಜನರಲ್ಲಿ ಅದಾಗಲೇ ಅಸಮಾಧಾನ ಮೂಡಿತ್ತು. ಇದನ್ನೇ ಬೆಂಬಲವಾಗಿಟ್ಟುಕೊಂಡ ಬಿಜೆಪಿ ತನ್ನ ಬೆಂಬಲಿಗರನ್ನು ಬಳಸಿಕೊಂಡಿತು. ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳಾ ಪ್ರತಿಭಟನಾಕಾರರನ್ನು ಓಡಿಸುವ ಬೆದರಿಕೆ ಹಾಕುವ ಪ್ರಯತ್ನ ನಡೆಸಿತು.
ಶಹೀನ್‌ ಬಾಘ್‌ ವಿಚಾರವನ್ನು ಬದಿಗಿಟ್ಟರೆ, ಎಎಪಿ ತಾನು ದೆಹಲಿಯಲ್ಲಿ ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದನ್ನು ಅಲ್ಲಗಳೆಯಲು ಬಿಜೆಪಿ ಯತ್ನಿಸಿತು. ಎಎಪಿಯನ್ನು ಅರಾಜಕತೆ ಸೃಷ್ಟಿಸುವ ಸರ್ಕಾರ ಎಂದೂ, ಆಡಳಿತದ ವಿಚಾರದಲ್ಲಿ ಇವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಾರದು ಎಂದೂ ಆರೋಪಿಸಲಾಯಿತು.

2019 ರ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ ಕಾಂಗ್ರೆಸ್‌ 7 ರ ಪೈಕಿ ಬಹುತೇಕ ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಗಳಿಸಿತ್ತು. ಇದು ಕೂಡ ರಾಜಧಾನಿಯಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎಂಬ ಎಎಪಿ ಹೇಳಿಕೆಗಳನ್ನು ತಳ್ಳಿಹಾಕಿತು. ಈ ಹಿಂದೆ ಶೀಲಾ ದೀಕ್ಷಿತ್ ಸರ್ಕಾರ ಮಾಡಿದ ಸಾಧನೆಗಳನ್ನು ಕಾಂಗ್ರೆಸ್‌ ಜನರಿಗೆ ತಿಳಿಸುವ ಪ್ರ್ಯತ್ನ ಮಾಡಿತು. ಬಿಜೆಪಿಯ ಎದುರು ನಿಲ್ಲುವ ಸ್ಥಿತಿಯಲ್ಲಿ ಕಾಂಗ್ರೆಸ್‌ ಇಲ್ಲದಿದ್ದರೂ, ರಾಷ್ಟ್ರೀಯತೆ ಮತ್ತು ಸ್ಥಳೀಯ ಎಂಬ ಎರಡೇ ವಿಷಯಗಳ ಮೇಲೆ ನಡೆದ ಇಡೀ ಚುನಾವಣೆಯಲ್ಲಿ ನಿಧಾನವಾಗಿ ಹೊರಗೇ ಉಳಿದುಕೊಂಡಿತು.

ಬಹುತೇಕ ಚುನಾವಣಾ ಸಮೀಕ್ಷೆಗಳ ಪ್ರಕಾರ ಎಎಪಿ ದೊಡ್ಡ ಅಂತರದಿಂದ ಗೆಲುವು ಸಾಧಿಸಲಿದೆ. ಆದರೆ ಬಿಜೆಪಿ ಕೆಲವೇ ಸೀಟುಗಳನ್ನು ತನ್ನದಾಗಿಸಿಕೊಳ್ಳಲಿದೆ. ಕಾಂಗ್ರೆಸ್‌ ಬಹುತೇಕ ಕೊನೆಯ ಸ್ಥಾನದಲ್ಲಿ ಇರಲಿದೆ. ಬಿಜೆಪಿ ಈ ಸಮೀಕ್ಷೆಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನಾವು 48 ಸೀಟುಗಳನ್ನು ಪಡೆಯುತ್ತೇವೆ ಎಂದು ಅದು ಹೇಳಿಕೊಂಡಿದೆ. ಅಷ್ಟೇ ಅಲ್ಲ, 70 ಸದಸ್ಯತ್ವ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚಿಸುವವರು ನಾವೇ ಎಂದು ಬೀಗುತ್ತಿದೆ.
ಬಿಜೆಪಿಯ ಈ ಹೇಳಿಕೆಯನ್ನು ಮೊದಲು ಯಾರೂ ಗಂಭೀರವಾಗಿ ತೆಗೆದುಕೊಳ್ಳದಿದ್ದರೂ, ಚುನಾವಣಾ ಆಯೋಗವು ಮತದಾನದ ಶೇಕಡಾವಾರನ್ನು ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದ್ದಂತೆ ಜನರು ಆಕ್ಷೇಪ ವ್ಯಕ್ತಪಡಿಸಲು ಆರಂಭಿಸಿದರು. ಫೆಬ್ರವರಿ 8 ರಂದು ಮತದಾನ ನಡೆದ ಸಂದರ್ಭದಲ್ಲಿ ಸಂಜೆಯ ಹೊತ್ತಿಗೆ ಮತದಾನದ ಶೇಕಡಾವಾರು ಕೇವಲ ಶೇ. 57 ಎಂದು ಹೇಳಲಾಗಿತ್ತು.

ಮರುದಿನ ಸಂಜೆಯಾದರೂ ಚುನಾವಣಾ ಆಯೋಗವು ಮತದಾನದ ಶೇಕಡಾವಾರು ಬಿಡುಗಡೆ ಮಾಡದೇ ಇದ್ದಾಗ ಎಎಪಿ ಮತ್ತು ಇತರ ಪಕ್ಷಗಳು ಆರೋಪ ಆರಂಭಿಸಿದ್ದವು. ಕೊನೆಗೆ ಅದೇ ದಿನ ಸಂಜೆ ಚುನಾವಣಾ ಆಯೋಗವು ಶೇ. 62 ರಷ್ಟು ಮತದಾನವಾಗಿದೆ ಎಂದು ಅಧಿಕೃತವಾಗಿ ಘೋಷಿಸಿತು. ಇದು 2015 ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಶೇ. 5 ರಷ್ಟು ಕಡಿಮೆ ಆಗಿತ್ತು. ಸಂಜೆ 5 ಗಂಟೆಯ ಹೊತ್ತಿಗೆ ಶೇ. 50 ರಷ್ಟಿದ್ದ ಶೇಕಡಾವಾರನ್ನು ಸಂಜೆ 6 ಗಂಟೆಯ ಹೊತ್ತಿಗೆ ಶೇ. 62 ಕ್ಕೆ ಚುನಾವಣಾ ಆಯೋಗ ಏರಿಕೆ ಮಾಡಿದೆ ಎಂದು ವಿಪಕ್ಷದ ನಾಯಕರು ಗಂಭೀರ ಆರೋಪ ಮಾಡಿದರು. ಕೊನೆಯ ಎರಡು ಗಂಟೆಗಳಲ್ಲಿ ಇವಿಎಂನಲ್ಲಿ ಭಾರಿ ಅವ್ಯವಹಾರ ಮಾಡಲಾಗಿದೆ ಎಂದು ವಿಪಕ್ಷಗಳು ನಂಬಿವೆ ಹಾಗೂ ಅದೇ ರೀತಿ ತೀವ್ರ ಟೀಕೆಯನ್ನೂ ಮಾಡಿವೆ.

ಒಂದು ವೇಳೆ ಬಿಜೆಪಿ ನಿರೀಕ್ಷೆಗಿಂತ ಉತ್ತಮ ಸಾಧನೆಯನ್ನೇನಾದರೂ ಮಾಡಿದರೆ ತಮ್ಮ ಸೋಲನ್ನು ಎಎಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಇವಿಎಂ ಮೇಲೆ ಹೊರಿಸುತ್ತವೆ. ರಾಜಧಾನಿಯಲ್ಲಿ ಭಾರಿ ಪ್ರತಿಭಟನೆಗೂ ಇದು ಕಾರಣವಾಗಬಹುದು. ಒಂದು ವೇಳೆ ಬಿಜೆಪಿ ಕೆಲವೇ ಸೀಟುಗಳಲ್ಲಿ ಗೆಲುವು ಸಾಧಿಸಿದರೆ, ಇವಿಎಂ ಕುರಿತಾದ ಆರೋಪಗಳು ಅಲ್ಲೇ ದನಿಗುಂದಲಿವೆ.

ಒಂದು ವೇಳೆ ದೆಹಲಿಯಲ್ಲಿ ಬಿಜೆಪಿ ಸೋತರೂ ಸುಮ್ಮನೆ ಕೂರುವುದಿಲ್ಲ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಒಂದು ವೇಳೆ ಬಿಜೆಪಿ ಸೋತರೂ ಕೂಡ ಸಿಎಎ ಮತ್ತು ಎನ್‌ಆರ್‌ಸಿ ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ದೆಹಲಿಯಲ್ಲಿ ಪೊಲೀಸರು ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಪ್ರತಿಭಟನಾಕಾರರನ್ನು ಬಂಧಿಸಿಡಲು ಸ್ಟೇಡಿಯಂ ಅನ್ನು ಕೊಡಬೇಕು ಎಂದು ಕೇಳಿದೆ. ಹೀಗಾಗಿ ವಿಪಕ್ಷಗಳು ಮತ್ತು ಸಿಎಎ ಪ್ರತಿಭಟನಾಕಾರರ ಜೊತೆಗಿನ ಬಿಜೆಪಿಯ ಸಂಘರ್ಷ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ಈ ಚುನಾವಣೆಯು ಹಲವು ವಿಷಯಗಳ ಮೇಲೆ ಪರಿಣಾಮ ಬೀರಲಿದೆ.

ABOUT THE AUTHOR

...view details