ಕರ್ನಾಟಕ

karnataka

ETV Bharat / bharat

ಕೆಲ ಗಂಟೆಗಳ ಕಾಲ ವಾಟ್ಸ್​ಆ್ಯಪ್ ಡೌನ್: ಟ್ವಿಟರ್​ನಲ್ಲಿ ಟ್ರೋಲ್​ ಮಾಡಿದ ಬಳಕೆದಾರರು

ಜಗತ್ತಿನಾದ್ಯಂತ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೇಜಿಂಗ್‌ ಆ್ಯಪ್ ವಾಟ್ಸ್​ಆ್ಯಪ್‌ ಸೇವೆಯಲ್ಲಿ ಕೆಲ ಗಂಟೆಗಳ ಕಾಲ ಸಮಸ್ಯೆ ಕಂಡುಬಂದಿದೆ.

WhatsApp down, users in India other parts of world report connection, other issues
ವಾಟ್ಸ್​ಆ್ಯಪ್

By

Published : Jul 15, 2020, 5:20 AM IST

ನವದೆಹಲಿ:ಜನಪ್ರಿಯ ಮೆಸೇಜಿಂಗ್‌ ಆ್ಯಪ್ ವಾಟ್ಸ್​ಆ್ಯಪ್‌ ಸೇವೆಯಲ್ಲಿ ಬುಧವಾರ ಭಾರತ ಸೇರಿದಂತೆ ವಿಶ್ವದಾದ್ಯಂತ ಕೆಲ ಗಂಟೆಗಳ ಕಾಲ ಕಾರ್ಯನಿರ್ವಹಣೆಯಲ್ಲಿ ಅಡಚಣೆ ಉಂಟಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸ್​ಆ್ಯಪ್‌ ಟ್ರೋಲ್​ಗೆ ಗುರಿಯಾಗಿದೆ.

ಟ್ರೋಲ್

ಬುಧವಾರ ಬೆಳಗಿನಜಾವ ಸುಮಾರು 1:32 ಗಂಟೆಯಿಂದ ಸಮಸ್ಯೆ ಆರಂಭವಾಗಿದ್ದು, ಹೆಚ್ಚಿನ ಬಳಕೆದಾರರು (ಶೇಕಡಾ 72) ಸಂದೇಶ ಕಳುಹಿಸಲು ಹಾಗೂ ಸ್ವೀಕರಿಸುವಲ್ಲಿ ಸಮಸ್ಯೆ ಎದುರಿಸಿದರು. ಅಲ್ಲದೆ ಲಾಗ್-ಇನ್ ಆಗಲೂ ಕೂಡ ಆಗುತ್ತಿರಲಿಲ್ಲ. ಸುಮಾರು 1.5 ಬಿಲಿಯನ್​ಗಿಂತ ಹೆಚ್ಚಿನ ಆಂಡ್ರಾಯ್ಡ್ ಮತ್ತು ಐಒಎಸ್​​ ಬಳಕೆದಾರರು ಆ್ಯಪ್​ಗೆ ಲಾಗ್-ಇನ್ ಆಗಲು ಪರದಾಡುವಂತಾಗಿತ್ತು.

ಟ್ರೋಲ್

ಕಾರ್ಯನಿರ್ವಹಣೆಯಲ್ಲಿ ಅಡಚಣೆಗೆ ಕಾರಣ ಏನೆಂಬುದರ ಬಗ್ಗೆ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಹೊರಬಿದ್ದಿಲ್ಲ. ಸಮಸ್ಯೆ ಕುರಿತಂತೆ ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ಗಳ​ ಮೂಲಕ ಬಳಕೆದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.

ಟ್ರೋಲ್

ABOUT THE AUTHOR

...view details