ಕರ್ನಾಟಕ

karnataka

By

Published : Sep 28, 2020, 3:47 PM IST

ETV Bharat / bharat

ಕೃಷಿ ಮಸೂದೆಗಳಿಗೆ ವ್ಯಾಪಕ ವಿರೋಧ: ಸುಪ್ರೀಂ ಮೆಟ್ಟಿಲೇರಲು ಪಂಜಾಬ್ ಸಿಎಂ ನಿರ್ಧಾರ!

ಕೇಂದ್ರದ ಮೂರು ಕೃಷಿ ಮಸೂದೆಗಳಿಗೆ ಕರ್ನಾಟಕ, ಪಂಜಾಬ್​, ಹರಿಯಾಣದಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗುತ್ತಿದ್ದು, ಇದೇ ವಿಷಯವನ್ನಿಟ್ಟುಕೊಂಡು ಪಂಜಾಬ್​ ಸಿಎಂ ಸುಪ್ರೀಂಕೋರ್ಟ್​ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

Punjab Chief Minister
Punjab Chief Minister

ಅಮೃತಸರ್​(ಪಂಜಾಬ್​):ಕೇಂದ್ರ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿರುವ ಮೂರು ಕೃಷಿ ಮಸೂದೆಗಳಿಗೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಇದೀಗ ಪಂಜಾಬ್​ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್​​ ಸುಪ್ರೀಂಕೋರ್ಟ್​ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ಕೃಷಿ ರಾಜ್ಯದ ರೈತರಿಗೆ ಸಂಬಂಧಪಟ್ಟ ವಿಷಯವಾಗಿದೆ. ಆದರೆ, ಕೃಷಿ ಮಸೂದೆಗಳಿಗೆ ನಮ್ಮ ಅನುಮತಿ ಇಲ್ಲದೇ ಪಾಸ್​ ಮಾಡಲಾಗಿದ್ದು, ಇದೊಂದು ಅಸಂವಿದಾನಾತ್ಮಕವಾಗಿದೆ. ರೈತರ ವಿರೋಧಿಯಾಗಿರುವ ಈ ಮಸೂದೆಯನ್ನ ನಾವು ಸುಪ್ರೀಂಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ ಎಂದಿದ್ದಾರೆ.

ಕೃಷಿ ಮಸೂದೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡನೆ ಮಾಡಿದಾಗಿನಿಂದಲೂ ಇದಕ್ಕೆ ಪಂಜಾಬ್​, ಹರಿಯಾಣದಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗುತ್ತಿದ್ದು, ಸದ್ಯ ಕರ್ನಾಟಕದಲ್ಲೂ ಇದರ ಬಿಸಿ ಜೋರಾಗಿದೆ. ಈ ಮಸೂದೆಗೆ ತೀವ್ರ ಆಕ್ರೋಶ ವ್ಯಕ್ತಪಿಡಿಸಿ ಎನ್​ಡಿಎ ಮೈತ್ರಿ ಪಕ್ಷ ಶಿರೋಮಣಿ ಅಕಾಲಿದಳದ ಸಚಿವೆ ಹರ್ಸಿಮ್ರತ್​ ಕೌರ್​ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ABOUT THE AUTHOR

...view details