ನವದೆಹಲಿ: ನಾಥೂರಾಮ್ ಗೋಡ್ಸೆ ಹಾಗೂ ವೀರ ಸಾವರ್ಕರ್ ನಡುವೆ 'ದೈಹಿಕ ಸಂಬಂಧ'ವಿತ್ತು ಎಂದು ಕಾಂಗ್ರೆಸ್ ಸೇವಾ ದಳದಿಂದ ರಿಲೀಸ್ ಆಗಿರುವ ಕಿರುಪುಸ್ತಕದ ವಿರುದ್ಧ ಅಖಿಲ ಭಾರತೀಯ ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ ಓರ್ವ 'ಸಲಿಂಗಕಾಮಿ' ಎಂದು ನಾವು ಕೇಳಿದ್ದೇವೆ: ಸ್ವಾಮಿ ಚಕ್ರಪಾಣಿ ತಿರುಗೇಟು
ಕಳೆದೆರಡು ದಿನಗಳ ಹಿಂದೆ ವೀರ ಸಾವರ್ಕರ್ ವಿರುದ್ಧ ಆರೋಪ ಮಾಡಿದ್ದ ಕಾಂಗ್ರೆಸ್ ಸೇವಾ ದಳದ ವಿರುದ್ಧ ಇದೀಗ ಅಖಿಲ ಭಾರತೀಯ ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ವಾಗ್ದಾಳಿ ನಡೆಸಿದ್ದಾರೆ.
ಸ್ವಾಮಿ ಚಕ್ರಪಾಣಿ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಓರ್ವ ಸಲಿಂಗಕಾಮಿ ಎಂದು ನಾವು ಕೇಳಿದ್ದೇವೆ ಎಂದು ಅವರು ಹೇಳಿಕೆ ನೀಡಿದ್ದು, ವೀರ ಸಾವರ್ಕರ್ ವಿರುದ್ಧ ಪುಸ್ತಕದಲ್ಲಿ ಕೇಳಿ ಬಂದಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಅದೊಂದು ಹಾಸ್ಯಾಸ್ಪದ ಎಂದಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಅವರು, ಕಾಂಗ್ರೆಸ್ ಕಿರುಪುಸ್ತಕದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಳೆದ ಗುರುವಾರ ಈ ಪುಸ್ತಕ ರಿಲೀಸ್ ಆಗುತ್ತಿದ್ದಂತೆ ದೇಶಾದ್ಯಂತ ತೀವ್ರ ವಿರೋಧ ಸಹ ವ್ಯಕ್ತವಾಗಿತ್ತು.