ನವದೆಹಲಿ: ಭಾರತೀಯ ಜನತಾ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ನಿಜವಾದ ಗಾಂಧೀಜಿ ಭಕ್ತರು, ಬೇರೆಯವರಂತೆ ಡಾಂಭಿಕ ಭಕ್ತಿ ತೋರುವ ನಕಲಿ ಭಕ್ತರಲ್ಲ ಎಂದು ಕಾಂಗ್ರೆಸ್ಗೆ ಲೋಕಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಟಿ ಬೀಸಿದ್ದಾರೆ.
ಲೋಕಸಭೆಯಲ್ಲೂ 'ಅನಂತ' ಅವಾಂತರದ ಚರ್ಚೆ: ನಾವು ಕಾಂಗ್ರೆಸ್ನಂತೆ ನಕಲಿ ಭಕ್ತರಲ್ಲ ಎಂದ ಜೋಶಿ
ಲೋಕಸಭೆ ಕಲಾಪ ಆರಂಭಗೊಂಡಿದ್ದು, ಸಂಸದ ಅನಂತ್ಕುಮಾರ್ ಹೆಗಡೆ ಹೇಳಿಕೆಯನ್ನೇ ಪ್ರಮುಖವಾದ ಅಸ್ತ್ರವಾಗಿಸಿಕೊಂಡ ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತು. ಕಾಂಗ್ರೆಸ್ ವಾಗ್ದಾಳಿಗೆ ಸಚಿವ ಪ್ರಹ್ಲಾದ್ ಜೋಶಿ ಅಷ್ಟೇ ತೀಕ್ಷ್ಣವಾಗಿ ಚಾಟಿ ಏಟು ಬೀಸಿದರು.
ಲೋಕಸಭಾ ಕಲಾಪ ಈಗಾಗಲೇ ಆರಂಭಗೊಂಡಿದ್ದು, ಸಂಸದ ಅನಂತ್ ಕುಮಾರ್ ಹೆಗಡೆ ನೀಡಿರುವ ವಿವಾದಾತ್ಮಕ ಹೇಳಿಕೆಯೇ ಸದ್ಯಕ್ಕೆ ಕಲಾಪದಲ್ಲಿ ಬಿಸಿ ಬಿಸಿ ಚರ್ಚೆಯಾಗಿದೆ. ಕಲಾಪದ ವೇಳೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಗಾಂಧೀಜಿಯನ್ನು ನಿಂದಿಸಿದವರು ಬಿಜೆಪಿಗರು, ನೀವು ರಾವಣನ ವಂಶಸ್ಥರು ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತ್ಯುತ್ತರ ನೀಡಿದ್ದು, ನಾವು ನಿಮ್ಮಂತೆ ನಕಲಿ ಭಕ್ತರಲ್ಲ ಎಂದಿದ್ದಾರೆ.
ಈ ವೇಳೆ ಮಾತನಾಡಿದ ಜೋಶಿ, ಬಿಜೆಪಿಗರು ನಿಜವಾದ ಭಕ್ತರು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಂತೆ ನಾವು ನಕಲಿ ಭಕ್ತರುಗಳಲ್ಲ ಎಂದು ಕಾಂಗ್ರೆಸ್ ವಿರುದ್ಧ ಕೆಂಡ ಕಾರಿದ್ದಾರೆ.