ವಿಲ್ಲುಪುರಂ(ತಮಿಳುನಾಡು):ಕೊರೊನಾ ಭೀತಿಯಿಂದ ವೈದ್ಯನೊಬ್ಬ ಸುಮಾರು ಐದು ಮೀಟರ್ ದೂರದಿಂದ ರೋಗಿಗೆ ಚಿಕಿತ್ಸೆ ನೀಡಿ ಎತ್ತಂಗಡಿಯಾದ ಘಟನೆ ವಿಲ್ಲುಪುರಂ ಜಿಲ್ಲೆಯ ಕಂದಮಂಗಳಂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಕೊರೊನಾ ಭೀತಿ: ಐದು ಮೀಟರ್ ಅಂತರದಿಂದ ''ಚಿಕಿತ್ಸೆ'' ನೀಡಿದ್ದ ವೈದ್ಯ ಎತ್ತಂಗಡಿ - doctor transferred
ಸುಮಾರು ಐದು ಮೀಟರ್ ಅಂತರದಿಂದ ರೋಗಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಎತ್ತಂಗಡಿಯಾದ ಘಟನೆ ತಮಿಳುನಾಡಿನ ವಿಲ್ಲುಪುರಂ ಎಂಬಲ್ಲಿ ನಡೆದಿದೆ.
ವಿಲ್ಲುಪುರಂ ವೈದ್ಯ
ಜೂನ್ 9ರಂದು ರೋಗಿಯೊಬ್ಬ ಗಂಟಲು ನೋವಿನ ಹಿನ್ನೆಲೆ ವೈದ್ಯರ ಬಳಿ ಬಂದಿದ್ದನು. ಈ ವೇಳೆ ವೈದ್ಯ 5 ಮೀಟರ್ ದೂರದಿಂದಲೇ ಟಾರ್ಚ್ ಹಾಯಿಸಿ ರೋಗಿಯ ಗಂಟಲು ತಪಾಸಣೆ ನಡೆಸಿದ್ದರು.
ಈ ಸನ್ನಿವೇಶವನ್ನು ಮತ್ತೊಬ್ಬ ರೋಗಿ ತನ್ನ ಮೊಬೈಲ್ ಫೋನ್ನಿಂದ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ವಿಲ್ಲುಪುರಂ ಆರೋಗ್ಯ ಇಲಾಖೆಯ ಗಮನಕ್ಕೆ ಬಂದಿದ್ದು, ವೈದ್ಯನಿಗೆ ನೋಟಿಸ್ ನೀಡಿ, ಬೇರೆ ಆಸ್ಪತ್ರೆಗೆ ಎತ್ತಂಗಡಿ ಮಾಡಿದೆ.