ಕರ್ನಾಟಕ

karnataka

By

Published : Jan 11, 2020, 8:25 AM IST

ETV Bharat / bharat

ಮೂಲ ಸವಲತ್ತಿಗಾಗಿ  ಇವರು ನಡೆಸಿದ ಸತ್ಯಾಗ್ರಹ ಎಂಥಾದ್ದು ಗೊತ್ತಾ..?

ಬಿಚ್ಲಾ ದಾನ್ಪುರ್ ಪ್ರದೇಶದ ಗ್ರಾಮಸ್ಥರು ತಮ್ಮ 11 ಅಂಶಗಳ ಬೇಡಿಕೆಯೊಂದಿಗೆ ಸತ್ಯಾಗ್ರಹ ನಡೆಸಿ ಗಮನ ಸೆಳೆದಿದ್ದಾರೆ. ಯಾಕೆಂದರೆ, 75 ಕಿ.ಮೀ. ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಕಳುಹಿಸಿಬ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ.

villagers-took-out-75-km-footmarch-to-awake-government
ಬಾಗೇಶ್ವರ: ಮೂಲ ಸೌಲಭ್ಯಗಳಿಗೆ ಆಗ್ರಹಿಸಿ ಸತ್ಯಾಗ್ರಹ ಚಳವಳಿಯ ಮಾರ್ಗದಲ್ಲಿ 75 ಕಿ.ಮೀ ಮೆರವಣಿಗೆ

ಬಾಗೇಶ್ವರ (ಉತ್ತರಾಖಂಡ್​​) :ಬಿಚ್ಲಾ ದಾನಪುರ ಪ್ರದೇಶಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ರಾಜ್ಯಸಭಾ ಸಂಸದ ಪ್ರದೀಪ್ ತಮ್ತಾ ಅವರ ನೇತೃತ್ವದಲ್ಲಿ ಸತ್ಯಾಗ್ರಹ ಚಳವಳಿ ಉತ್ತರಾಖಂಡದ ಬಾಗೇಶ್ವರದಲ್ಲಿ ನಡೆದಿದೆ. ಇದೇನು ಮಹಾ ಎಂದುಕೊಳ್ಳಬೇಡಿ. ಇಲ್ಲಿನ ಜನ ಸುಮಾರು 75 ಕಿ.ಮೀ ದೂರ ಬೃಹತ್​ ಮೆರವಣಿಗೆ ಮಾಡಿ ವಿಶೇಷ ಚಳವಳಿಯನ್ನ ಆಯೋಜಿಸಿ ಗಮನ ಸೆಳೆದಿದ್ದಾರೆ.

ಗುರುವಾರ ಶಾಮಾ ಪ್ರದೇಶದಿಂದ ಪ್ರಾರಂಭವಾದ ಪಾದಯಾತ್ರೆ 75 ಕಿ.ಮೀ ಪ್ರಯಾಣಿಸಿ ಸಂಜೆ ನಾಲ್ಕು ಗಂಟೆಗೆ ಬಾಗೇಶ್ವರ ತಲುಪಿತು. ಮೂಲ ಸೌಕರ್ಯಗಳಾದ ಸಂವಹನ, ರಸ್ತೆಗಳು, ಶಿಕ್ಷಣ ಸೇರಿದಂತೆ 11 ಅಂಶಗಳ ಬೇಡಿಕೆಗಳಿಗೆ ಸಂಬಂಧಿಸಿದಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.

ಬಾಗೇಶ್ವರ: ಮೂಲ ಸೌಲಭ್ಯಗಳಿಗೆ ಆಗ್ರಹಿಸಿ ಸತ್ಯಾಗ್ರಹ ಚಳವಳಿಯ ಮಾರ್ಗದಲ್ಲಿ 75 ಕಿ.ಮೀ ಮೆರವಣಿಗೆ

ರಾಜ್ಯಸಭಾ ಸಂಸದ ಪ್ರದೀಪ್ ತಮ್ತಾ ಮಾತನಾಡಿ, 21 ನೇ ಶತಮಾನದಲ್ಲೂ ಬಿಚ್ಲಾ ದಾನ್ಪುರ್ ಪ್ರದೇಶದ ಜನರು ಮೂಲಭೂತ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಸತ್ಯಾಗ್ರಹ ಚಳವಳಿಯ ಪ್ರಮುಖ ಉದ್ದೇಶ ಎಂದರೆ, ಬಿಚ್ಲಾ ದಾನಪುರ ಪ್ರದೇಶದ ಅಭಿವೃದ್ಧಿ.

ಬಿಚ್ಲಾ ದಾನಪುರ ಪ್ರದೇಶವನ್ನು ಡಿಜಿಟಲ್ ಇಂಡಿಯಾ ಆಗಿಸಲು 5 ಇಂಟರ್​ನೆಟ್​ ಟವರ್​ ಆಗಬೇಕು, ಶಾಲೆಗಳಲ್ಲಿ ಸೂಕ್ತ ಶಿಕ್ಷಕರು ಹಾಗೂ ಸಿಬ್ಬಂದಿಯ ನೇಮಕವಾಗಬೇಕು, ಕಟ್ಟಡಗಳ ಪುನರ್​ನಿರ್ಮಾಣವಾಗಬೇಕೆಂದರು.

ಮಹಿಳೆಯರ ಆರೋಗ್ಯ ಪರೀಕ್ಷೆಗಾಗಿ ಪ್ರತೀ 2 ಹಳ್ಳಿಗಳಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಲು, ಮಹಿಳಾ ಸ್ನಾತಕೋತ್ತರ ಕಾಲೇಜನ್ನು ಮಂಜೂರು ಮಾಡಲು, ಹದಗೆಟ್ಟ ರಸ್ತೆಗಳನ್ನು ಸರಿಪಡಿಸಲು, ಸ್ವಯಂ ಉದ್ಯೋಗವನ್ನು ಉತ್ತೇಜಿಸಲು, ಗಿಡಮೂಲಿಕೆಗಳ ಉತ್ಪಾದನೆ ಮತ್ತು ರಕ್ಷಣೆಗಾಗಿ, ಬಾಡಿಗೆದಾರರಿಗೆ ಭೂಮಿ ಲಭ್ಯವಾಗುವಂತೆ ಒತ್ತಾಯಿಸಿ ಪ್ರಧಾನಿಗೆ ಮನವಿ ಪತ್ರವನ್ನು ಕಳುಹಿಸಲಾಯಿತು.

ಇನ್ನೂ ನೂರ ಐವತ್ತಕ್ಕೂ ಹೆಚ್ಚು ಗ್ರಾಮಗಳ ಜನರು ಮೊಬೈಲ್ ಫೋನ್ ಸೇವೆಯಿಂದ ವಂಚಿತರಾಗಿದ್ದಾರೆ. ಹೀಗೆ ಮೂಲಭೂತ ಸೌಕರ್ಯದಿಂದ ವಂಚಿತರಾಗಿರುವವರಿಗೆ ಸೂಕ್ತ ಸೌಲಭ್ಯ ಒದಗಿಸುವಂತೆ ಈ ವೇಳೆ ಸರ್ಕಾರಕ್ಕೆ ಒತ್ತಾಯಿಸಲಾಯಿತು.

ABOUT THE AUTHOR

...view details