ತಾವೊಜಿಯಾ (ಚೀನಾ):ಏನ್ ಮಾಡೋದ್ರೀ ಈ ಹಾಳಾದ್ ಸರ್ಕಾರ, ಜನಪ್ರತಿನಿಧಿಗಳು ಒಂದ್ ರಸ್ತೆ ಮಾಡಿಸಲ್ಲ. ವಿದ್ಯುತ್ ಕಂಬ ಹಾಕಲ್ಲ ಅಂತಾ ಜನ ಬೈಯ್ಕೊಂಡಿರ್ತಾರೆ. ಆದರೆ, ಇಲ್ಲೊಂದು ಊರಿದೆ. ರಸ್ತೆ, ವಿದ್ಯುತ್‌ನಂತಹ ಮೂಲಸೌಕರ್ಯಗಳಿಗೆ ಸರ್ಕಾರದ ಅನುದಾನ ಕೇಳದೇ, ತಮ್ಮೂರಿನ ಅಭಿವೃದ್ಧಿಗೆ ಸರ್ಕಾರದಿಂದಲೇ ಹಣ ಸುಲಿದಿದ್ದಾರೆ.
ಹಾಳಾದ್ ಜನಪ್ರತಿನಿಧಿಗಳ ಗೊಡವೆ ಬೇಕಿಲ್ಲ:
ಚೀನಾದ ಆ ಹಳ್ಳಿಯಲ್ಲೀಗ ಒಳ್ಳೇ ರಸ್ತೆ, ಬೀದಿಬದಿ ವಿದ್ಯುತ್ ಕಂಬಗಳಿವೆ. ಊರಿಗೆ ಬೇಕಾದ ಸೌಕರ್ಯಗಳನ್ನ ಕಲ್ಪಿಸಿ ಅಂತಾ ಯಾವೊಬ್ಬ ದಪ್ಪ ಚರ್ಮದ ಜನಪ್ರತಿನಿಧಿಗಳನ್ನೂ ಜನ ಕೇಳಿಕೊಳ್ತಿಲ್ಲ. ತಮಗೆ ಏನಾಗಬೇಕು ಅದನ್ನ ತಾವೇ ಮಾಡಿಸಿಕೊಳ್ತಿದ್ದಾರೆ. ಅದ್ಹೇಗೆ ಅಂತಾ ಕೇಳಿದ್ರೇ ನೀವೂ ಒಂದಿಷ್ಟು ಅಚ್ಚರಿಗೊಳ್ತೀರಿ.
3 ಕಿ.ಮೀ ರಸ್ತೆ, 1 ಸಾವಿರ ವಿದ್ಯುತ್ ಕಂಬ ಹಾಕಿದರು:
ರಸ್ತೆ, ವಿದ್ಯುತ್ ಕಂಬಗಳ ಸಾಲು ತಾವೊಜಿಯಾ ಎಂಬ ಹಳ್ಳಿಯಲ್ಲಿ 3 ಕಿ.ಮೀಗೂ ಹೆಚ್ಚು ಒಳ್ಳೇ ರಸ್ತೆ ನಿರ್ಮಾಣವಾಗಿದೆ. 1 ಸಾವಿರಕ್ಕೂ ಅಧಿಕ ಬೀದಿಬದಿಯ ವಿದ್ಯುತ್ ಕಂಬಗಳನ್ನ ಹಾಕಲಾಗಿದೆ. ಊರಿನ ಗಡಿಗೆ 500 ಮೀಟರ್ ರಸ್ತೆ ಮತ್ತು 200 ವಿದ್ಯುತ್ ಕಂಬಗಳನ್ನ ಹಾಕುವುದು ಬಾಕಿಯಿದೆ. ರಸ್ತೆಗುಂಟ ಪ್ರತಿ 30ರಿಂದ 50 ಮೀಟರ್ ಅಂತರದಲ್ಲಿ ಬೀದಿದೀಪಗಳನ್ನ ನಿಲ್ಲಿಸಲಾಗಿದೆ. ಹಳ್ಳಿ ಜನ ಸರ್ಕಾರ ಯಾವ ಅನುದಾನವನ್ನೂ ನೆಚ್ಚಿಕೊಳ್ಳದೇ ಅಭಿವೃದ್ಧಿ ಮಾಡಿರೋ ಫೋಟೋಗಳು ಈಗ ಚೀನಾದ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿವೆ.
ಕೊಡಬೇಕಾಗಿದ್ದಕ್ಕಿಂತ ಹೆಚ್ಚು ಪರಿಹಾರ ಕಿತ್ಕೊಂಡರು:
ಕ್ಸಿಯಾನ್ ಇಂಟರ್ ನ್ಯಾಷನಲ್ ಟ್ರೇಡ್ ಅಂಡ್ ಲಾಜಿಸ್ಟಿಕ್ಸ್ ಪಾರ್ಕ್‌ನ ಬಳಿಯೇ ತಾವೊಜಿಯಾ ಹಳ್ಳಿಯಿದೆ. ಇದನ್ನ ಇನ್ನಷ್ಟು ಅಭಿವೃದ್ಧಿಪಡಿಸೋದಕ್ಕೆ ಚೀನಾ ಸರ್ಕಾರ ಮುಂದಾಗಿತ್ತು. ಅದಕ್ಕಾಗಿ ಹಳ್ಳಿಯ ಸುತ್ತಮುತ್ತಲಿನ ಬಹುತೇಕ ಭೂಮಿಯನ್ನ ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಆದರೆ, ಕೊಡಬೇಕಾಗಿದ್ದಕ್ಕಿಂತ ಹೆಚ್ಚು ಪರಿಹಾರವನ್ನ ಈ ಹಳ್ಳಿಯ ಕಿತ್ಕೊಂಡಿದ್ದಾರೆ. ತಮ್ಮ ಹಳ್ಳಿಯ ಮೂಲಸೌಕರ್ಯ ಅಭವೃದ್ಧಿಗೊಳಿಸಿ ಅಂತಾ ಸರ್ಕಾರವನ್ನ ಗೋಗರೆಯುವುದಕ್ಕಿಂತಲೂ, ಹೇಗೂ ಭೂಸ್ವಾಧೀನ ಮಾಡಲಾಗಿದೆ. ಪರಿಹಾರ ಹೆಚ್ಚು ಕೊಡಬೇಕೆಂದು ಹಳ್ಳಿ ಜನ ಪಟ್ಟು ಹಿಡಿದಿದ್ದಾರೆ. ಸರ್ಕಾರ ಬೇರೆ ದಾರಿಯಿಲ್ಲದೇ ಭೂಪರಿಹಾರವನ್ನ ಹೆಚ್ಚಿಸಿದೆ. ಹಳ್ಳಿ ಜನ ತಮ್ಮ ಕೈಯಲ್ಲಾದ ಹಣ ಸೇರಿಸಿದ್ರು. ಆದರೆ, ಅಷ್ಟೇ ಹಣದಲ್ಲ ರಸ್ತೆ ನಿರ್ಮಾಣ, ಬೀದಿದೀಪಗಳ ಅಳವಡಿಸೋಕೆ ಸಾಧ್ಯವಿರಲಿಲ್ಲ.