ಅಹಮದಾಬಾದ್: ಇಲ್ಲಿನ ಪುರಸಭೆ ಇ-ರಿಕ್ಷಾಗಳ ಮೂಲಕ ತರಕಾರಿಗಳನ್ನು ಮನೆ ಮನೆಗೆ ತೆರಳಿ ವಿತರಿಸುವ ಕೆಲಸ ಮಾಡುತ್ತಿದೆ.
ದೇಶಾದ್ಯಂತ 21 ದಿನಗಳ ಕಾಲ ಲಾಕ್ಡೌನ್ ಇರುವ ಹಿನ್ನೆಲೆ ಯಾರೂ ಸಾಮಾಜಿಕವಾಗಿ ಹತ್ತಿರ ಸುಳಿಯುವ ಹಾಗಿಲ್ಲ. ಈ ಹಿನ್ನೆಲೆ ಜನರು ತರಕಾರಿಗಳನ್ನು ಖರೀದಿಸಲು ಹೊರಗಡೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಮುನ್ಸಿಪಲ್ ಕಾರ್ಪೋರೇಷನ್ ಈ ಕೆಲಸ ಮಾಡುತ್ತಿದೆ.
ಮನೆ ಮನೆಗೆ ತೆರಳಿ ತರಕಾರಿ ವಿತರಣೆ ಯುಸಿಡಿ ವಿಭಾಗದ ನೌಕರರು ಸ್ಮಾರ್ಟ್ ರಿಕ್ಷಾಗಳ ಮೂಲಕ ಮನೆಗಳಿಗೆ ತೆರಳಿ ಅಗತ್ಯ ತರಕಾರಿಗಳನ್ನು ನೀಡುತ್ತಿದ್ದಾರೆ. ಇನ್ನು ನಗರದ 48 ವಾರ್ಡ್ಗಳಿಗೆ 48 ಇ-ರಿಕ್ಷಾಗಳನ್ನು ನಿಯೋಜಿಸಲಾಗಿದೆ.
ಈ ಸೌಲಭ್ಯವನ್ನು ಪಡೆಯಲು ಮನೆಯ ವಿಳಾಸ , ಕುಟುಂಬ ಸದಸ್ಯರ ಸಂಖ್ಯೆ ಮತ್ತು ಹೆಸರು ಹಾಗೂ ಕುಟುಂಬದ ಓರ್ವನ ಹೆಸರು ಮತ್ತು ಆತನ ಮೊಬೈಲ್ ಸಂಖ್ಯೆಯನ್ನು ನೀಡಲಾಗುವ ಫಾರ್ಮ್ನಲ್ಲಿ ಭರ್ತಿ ಮಾಡಿ ನೀಡಬೇಕು. ಹೀಗೆ ಮಾಡಿದರೆ ಪುರಭೆಯವರು ಮನೆಗೆ ಬಂದು ತರಕಾರಿ ನೀಡಿ ಹೋಗುತ್ತಾರೆ.