ಕರ್ನಾಟಕ

karnataka

ETV Bharat / bharat

ಗೆಳೆಯನ ಸಹಾಯದಿಂದ ಕಿಡ್ನಾಪ್​ ನಾಟಕವಾಡಿದ ಯುವತಿ... ಮನೆಯವರ ಬಳಿ 1 ಕೋಟಿ ರೂ.ಗೆ ಬೇಡಿಕೆ! -

ಮನೆಯಲ್ಲಿದ್ದ 1 ಕೋಟಿ ರೂ. ಹಣ ಪಡೆದುಕೊಂಡು ಗೆಳೆಯನೊಂದಿಗೆ ಪರಾರಿಯಾಗುವ ಪ್ಲಾನ್​ ಹಾಕಿಕೊಂಡಿದ್ದ ಯುವತಿಯೋರ್ವಳು ಕಿಡ್ನಾಪ್​ ಆಗಿರುವ ನಾಟವಾಡಿದ್ದಾಳೆ.

Uttar Pradesh teen
Uttar Pradesh teen

By

Published : Jul 27, 2020, 3:39 PM IST

ಇಟಾ(ಉತ್ತರಪ್ರದೇಶ): ತಾನು ಪ್ರೀತಿ ಮಾಡ್ತಿದ್ದ ಗೆಳೆಯನ ಸಹಾಯದಿಂದ ಕಿಡ್ನಾಪ್​​ ನಾಟಕವಾಡಿರುವ ಯುವತಿಯೋರ್ವಳು, ಪೋಷಕರ ಬಳಿ ಬರೋಬ್ಬರಿ 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.

ಉತ್ತರಪ್ರದೇಶದ ಇಟಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 19 ವರ್ಷದ ಯುವತಿ ತನ್ನ ಬಾಯ್​ ಫ್ರೆಂಡ್​ ಸಹಾಯದಿಂದ ಈ ರೀತಿಯ ನಾಟಕವಾಡಲು ಹೋಗಿ ಇದೀಗ ಸಿಕ್ಕಿಬಿದ್ದಿದ್ದಾಳೆ.

ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವಕ-ಯುವತಿ ಪ್ರೀತಿಗೆ ಮನೆಯವರ ವಿರೋಧ ವ್ಯಕ್ತವಾಗಿತ್ತು. ಇದೀಗ ಮನೆಯಲ್ಲಿದ್ದ 1 ಕೋಟಿ ರೂ. ಪಡೆದುಕೊಂಡು ಬೇರೆ ಕಡೆ ಹೋಗಿ ಜೀವನ ನಡೆಸಲು ಪ್ಲಾನ್ ಹಾಕಿಕೊಂಡು ಈ ರೀತಿಯಾಗಿ ನಡೆದುಕೊಂಡಿದ್ದಾಗಿ ತಿಳಿಸಿದ್ದಾರೆ. ಪೋಷಕರಿಗೆ ಫೋನ್​ ಮಾಡಿರುವ ಯುವತಿ ತನ್ನನ್ನು ಕಿಡ್ನಾಪ್​ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾಳೆ. ಈ ವೇಳೆ ತಾನೇ ಕರೆ ಮಾಡಿ ಚೀರಾಡುವುದು, ಕೂಗಾಡುವುದು ಮಾಡಿದ್ದು, ಇಷ್ಟೊಂದು ಹಣ ಕೇಳುತ್ತಿದ್ದಾರೆ ಎಂದು ಹೇಳಿದ್ದಾಳೆ. ಈ ವೇಳೆ ಪೊಲೀಸರಿಗೆ ಕುಟುಂಬಸ್ಥರು ದೂರು ನೀಡಿದ್ದಾರೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ನಂಬರ್​​​ ಟ್ರೇಸ್​ ಮಾಡಿದ್ದು, ಈ ವೇಳೆ ಆಕೆ ಗೆಳೆಯನೊಂದಿಗೆ ಸಿಕ್ಕಿಹಾಕಿಕೊಂಡಿದ್ದಾಳೆ. ಹಣದಾಸೆಗೋಸ್ಕರ ಅವರು ಈ ರೀತಿಯಾಗಿ ನಡೆದುಕೊಂಡಿದ್ದಾರೆ ಎಂದು ಇಟಾ ಪೊಲೀಸ್​ ಠಾಣೆಯ ಕ್ರೈಂ ವಿಭಾಗದ ಎಸ್‍ಪಿ ರಾಹುಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details