ಜಾನ್ಪುರ್(ಉತ್ತರಪ್ರದೇಶ):ಜೂಜಾಟದ ಚಟದಲ್ಲಿ ವ್ಯಕ್ತಿಯೊಬ್ಬ ಕಟ್ಟಿಕೊಂಡ ಪತ್ನಿಯನ್ನೇ ಪಣಕ್ಕಿಟ್ಟು ಸೋತಿರುವ ಘಟನೆ ಉತ್ತರಪ್ರದೇಶದ ಜಾನ್ಪುರ್ದಲ್ಲಿ ನಡೆದಿದ್ದು, ಸಂತ್ರಸ್ತ ಮಹಿಳೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಜೂಜಾಟದಲ್ಲಿ ಹೆಂಡ್ತಿ ಪಣಕ್ಕಿಟ್ಟ ಪಾಪಿ ಗಂಡ! ಗೆದ್ದವರಿಂದ ಗ್ಯಾಂಗ್ರೇಪ್!
ಜೂಜಾಟದಲ್ಲಿ ಹೆಂಡ್ತಿ ಪಣಕ್ಕಿಟ್ಟು ಗಂಡ ಸೋತಿದ್ದು, ಗೆದ್ದವರಿಂದ ಗ್ಯಾಂಗ್ರೇಪ್ ನಡೆದಿರುವ ಅಮಾನವೀಯ ಘಟನೆ ಉತ್ತರಪ್ರದೇಶದಲ್ಲಿ ನಡದಿದೆ.
ಜೂಜಾಟದ ಚಟಕ್ಕೆ ಒಳಗಾಗಿದ್ದ ವ್ಯಕ್ತಿಯೋರ್ವ ಕಂಠಪೂರ್ತಿ ಕುಡಿದು ಗೆಳೆಯರೊಂದಿಗೆ ಸೇರಿ ಆಟವಾಡಲು ಶುರು ಮಾಡಿದ್ದಾನೆ. ಈ ವೇಳೆ ತನ್ನ ಬಳಿ ಇರುವ ಹಣವೆಲ್ಲ ಕಳೆದುಕೊಂಡಿದ್ದು, ತದನಂತರ ಹೆಂಡತಿಯನ್ನು ಜೂಜಾಟಕ್ಕಿಟ್ಟು ಆಕೆಯನ್ನು ಕಳೆದುಕೊಂಡಿದ್ದಾನೆ. ಗೆದ್ದ ಸ್ನೇಹಿತರೆಲ್ಲರೂ ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದ ವೇಳೆ ಪ್ರಕರಣ ದಾಖಲು ಮಾಡಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ. ತದ ನಂತರ ಆಕೆ ಕೋರ್ಟ್ ಮೊರೆ ಹೋಗಿದ್ದಾಳೆ. ಕೋರ್ಟ್ ಸೂಚನೆ ನೀಡಿದ ಬಳಿಕ ಜಾನ್ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆ ಮನೆಗೆ ಪ್ರತಿದಿನ ಗಂಡನ ಗೆಳೆಯರಾದ ಅರುಣ್ ಹಾಗೂ ಅನಿಲ್ ಕಂಠ ಪೂರ್ತಿ ಮದ್ಯ ಸೇವಿಸಿ ಬರುತ್ತಿದ್ದರಂತೆ. ನಿನ್ನೆ ಜೂಜಾಟದಲ್ಲಿ ಆಕೆಯನ್ನು ಸೋತಿದ್ದು, ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ಮಾಹಿತಿ ನೀಡಿದ್ದಾಳೆ.