ಕರ್ನಾಟಕ

karnataka

ETV Bharat / bharat

ಪರೀಕ್ಷೆಯಲ್ಲಿ ಸ್ನೇಹಿತ ಹೆಚ್ಚು ಅಂಕಗಳಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ! - 10ನೇ ತರಗತಿ ಪರೀಕ್ಷೆ

ತನಗಿಂತಲೂ ಗೆಳೆಯ ಹೆಚ್ಚು ಅಂಕ ಪಡೆದುಕೊಂಡನಲ್ಲ ಎಂದು ಮಾನಸಿಕ ಖಿನ್ನತೆಗೊಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ನಡೆದಿದೆ.

Girl ends life
Girl ends life

By

Published : Jul 1, 2020, 4:37 PM IST

ಕಾನ್ಪುರ​ ​(ಉತ್ತರಪ್ರದೇಶ):ತಾನು ಗಳಿಸಿರುವ ಅಂಕಗಳಿಗಿಂತಲೂ ಗೆಳೆಯ ಹೆಚ್ಚು ಅಂಕ​​ ಪಡೆದನೆಂದು ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಯ ದಾರಿ ತುಳಿದ ಘಟನೆ ಕಾನ್ಪುರ​​ದಲ್ಲಿ ನಡೆದಿದೆ.

10ನೇ ತರಗತಿ ವಿದ್ಯಾರ್ಥಿನಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪರೀಕ್ಷೆಯಲ್ಲಿ ಈಕೆಗೆ ಶೇ.83ರಷ್ಟು ಅಂಕ ಬಂದರೆ, ಗೆಳೆಯ ಶೇ.85ರಷ್ಟು ಅಂಕ​ ಪಡೆದುಕೊಂಡಿದ್ದ.

ಬಾಲಕಿ ಸಾವಿಗೆ ಶರಣಾದ ಸ್ಥಳದಲ್ಲಿ ಮರಣ ಪತ್ರ​ ಸಿಕ್ಕಿದೆ. ಅದರಲ್ಲಿ ಮಾರ್ಕ್ಸ್​ ಕಡಿಮೆ ಬಂತೆಂಬ ಕಾರಣಕ್ಕೆ ತಾನು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ದಿನೇಶ್​ ಕುಮಾರ್​ ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಬಾಲಕಿ ತಂದೆ ಪ್ರತಿಕ್ರಿಯಿಸಿದ್ದು, ಗೆಳೆಯ ಹೆಚ್ಚು ಅಂಕ ಪಡೆದುಕೊಂಡಿದ್ದರಿಂದ ಆಕೆ ಮಾನಸಿಕವಾಗಿ ತಳಮಳಗೊಂಡಿದ್ದಳು ಎಂದು ತಿಳಿಸಿದ್ದಾರೆ.

ಉತ್ತರಪ್ರದೇಶ ಶಿಕ್ಷಣ ಇಲಾಖೆ ಇತ್ತೀಚೆಗೆ 10 ಹಾಗೂ 12ನೇ ತರಗತಿ ಬೋರ್ಡ್​​ ಪರೀಕ್ಷೆ ಫಲಿತಾಂಶ ಪ್ರಕಟಗೊಳಿಸಿತ್ತು.

ABOUT THE AUTHOR

...view details