ಲಖನೌ: ಕೊರೊನಾ ಪರೀಕ್ಷೆಯನ್ನು 'ಬೇಡಿಕೆಯ ಆಧಾರದ ಮೇಲೆ' ಮಾಡಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೊರಡಿಸಿದ ಮಾರ್ಗಸೂಚಿಗಳನ್ನು ಉತ್ತರ ಪ್ರದೇಶ ಸರ್ಕಾರ ಅಂಗೀಕರಿಸಿದೆ.
ವೈದ್ಯರ ಸಲಹೆ ಇಲ್ಲದೆಯೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಯುಪಿ ಸರ್ಕಾರ ಅಸ್ತು - ಉತ್ತರ ಪ್ರದೇಶದ ಕೊರೊನಾ ಸುದ್ದಿ
ಕೊರೊನಾ ಪರೀಕ್ಷೆಯನ್ನು 'ಬೇಡಿಕೆಯ ಆಧಾರದ ಮೇಲೆ' ಮಾಡಲು ಐಸಿಎಂಆರ್ ಹೊರಡಿಸಿದ ಮಾರ್ಗಸೂಚಿಗಳನ್ನು ಉತ್ತರ ಪ್ರದೇಶ ಸರ್ಕಾರ ಅಂಗೀಕರಿಸಿದೆ.
ಕೋವಿಡ್-19 ಪರೀಕ್ಷೆ ಬಯಸುವ ಜನರು ಈಗ ಉತ್ತರ ಪ್ರದೇಶದಾದ್ಯಂತ ಖಾಸಗಿ ರೋಗಶಾಸ್ತ್ರ ಪ್ರಯೋಗಾಲಯಗಳಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬಹುದು. ಅವರಿಗೆ ಇನ್ನು ಮುಂದೆ ಪ್ರಿಸ್ಕ್ರಿಪ್ಷನ್ ಅಗತ್ಯವಿರುವುದಿಲ್ಲ. ಆದರೆ ಪರೀಕ್ಷೆಯ ಕಾರಣವನ್ನು ನಿರ್ದಿಷ್ಟಪಡಿಸಬೇಕಾಗುತ್ತದೆ. ಪ್ಯಾಥಾಲಜಿ ಲ್ಯಾಬ್‌ಗಳಿಗೆ ಮನೆಗಳಿಂದ ಮಾದರಿಗಳನ್ನು ಸಂಗ್ರಹಿಸಲು ಸಹ ಅನುಮತಿಸಲಾಗಿದೆ.
"ಪರೀಕ್ಷೆಗೆ ಒಳಪಡಲು ಬಯಸುವ ಎಲ್ಲಾ ವ್ಯಕ್ತಿಗಳಿಗೆ ಮತ್ತು ಇತರ ದೇಶಗಳಿಗೆ ಅಥವಾ ರಾಜ್ಯಗಳಿಗೆ ಪ್ರಯಾಣ ಕೈಗೊಳ್ಳುವ ಎಲ್ಲಾ ವ್ಯಕ್ತಿಗಳ ಬೇಡಿಕೆಗೆ ಅನುಗುಣವಾಗಿ ಪರೀಕ್ಷೆ ನಡೆಸಬೇಕು" ಎಂದು ಐಸಿಎಂಆರ್ ಮಾರ್ಗಸೂಚಿಯಲ್ಲಿ ಹೇಳಿದೆ. ಆರೋಗ್ಯ ಅಧಿಕಾರಿಗಳ ಸಮಿತಿ ಈ ವಿಷಯದಲ್ಲಿ ಇನ್ನೂ ಔಪಚಾರಿಕ ಸರ್ಕಾರಿ ಆದೇಶ ಹೊರಡಿಸಲಾಗಿಲ್ಲವಾದರೂ 'ಶಿಫಾರಸು ಸ್ವೀಕರಿಸುವಲ್ಲಿ ಯಾವುದೇ ತೊಂದರೆ ಇಲ್ಲ' ಎಂದು ಈ ಸೂಚಿಗಳನ್ನು ಅಂಗೀಕರಿಸಿದೆ.