ಉತ್ತರ ಪ್ರದೇಶ: ಇಲ್ಲಿನ ಶಹಜಹಾನ್ಪುರ್ನಲ್ಲಿ ರಸ್ತೆ ಬದಿಯ ಆಹಾರ ಸೇವಿಸಿ 28 ಮಕ್ಕಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಅಸ್ವಸ್ಥರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಉತ್ತರಪ್ರದೇಶ: ರಸ್ತೆ ಬದಿಯ ಫುಡ್ ಸೇವಿಸಿ 28 ಮಕ್ಕಳು ಅಸ್ವಸ್ಥ, ಮೂವರ ಸ್ಥಿತಿ ಗಂಭೀರ!
ರಸ್ತೆ ಬದಿಯ ಗಾಡಿಯಲ್ಲಿ ಮಾರುತ್ತಿದ್ದ ಚಾಟ್ ಮಸಾಲ ಆಹಾರ ಸೇವಿಸಿ 28 ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿರುವ ಘಟನೆ ಇಲ್ಲಿನ ಶಹಜಹಾನ್ಪುರ್ನಲ್ಲಿ ನಡೆದಿದೆ. ಸದ್ಯ ವೈದ್ಯಕೀಯ ತಂಡ ಗ್ರಾಮಕ್ಕೆ ಆಗಮಿಸಿ ಚಿಕಿತ್ಸೆ ನೀಡುತ್ತಿದ್ದು, ವಿಷಪೂರಿತ ಆಹಾರ ಸೇವನೆಯಿಂದ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶ: ರಸ್ತೆ ಬದಿಯ ಫುಡ್ ಸೇವಿಸಿ 28 ಮಕ್ಕಳು ಅಸ್ವಸ್ಥ, ಮೂವರ ಸ್ಥಿತಿ ಗಂಭೀರ
ರಸ್ತೆ ಬದಿಯ ಗಾಡಿಯಲ್ಲಿ ಮಾರಾಲಾಗುತ್ತಿದ್ದ ಆಹಾರ ಸೇವಿಸಿದ ಬಳಿಕ ಮಕ್ಕಳಲ್ಲಿ ವಾಂತಿ ಹಾಗೂ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಘಟನೆ ನಡೆದ ತಕ್ಷಣವೇ ವೈದ್ಯರು ಹಳ್ಳಿಗೆ ದೌಡಾಯಿಸಿದ್ದು, ಎಲ್ಲರಿಗೂ ಚಿಕಿತ್ಸೆ ನೀಡುತ್ತಿದ್ದಾರೆ.
ಇನ್ನು ಪ್ರಾಥಮಿಕ ಚಿಕಿತ್ಸೆಯ ಬಳಿಕ ವೈದ್ಯರು ಹೇಳಿದಂತೆ, ವಿಷಪೂರಿತ ಆಹಾರ ಸೇವನೆಯಿಂದ ಈ ರೀತಿಯಾಗಿದೆ ಎಂದಿದ್ದಾರೆ. ಪ್ರಸ್ತುತ ಆಹಾರ ಸುರಕ್ಷತಾ ಇಲಾಖೆಯೂ ಆಹಾರದ ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಂಡಿದ್ದಾರೆ.