ವಾಷಿಂಗ್ಟನ್:ಅಮೆರಿಕದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆಸಿದ್ದು, ಕಳೆದ 24 ಗಂಟೆಗಳಲ್ಲಿ 1,738 ಜನರು ಸಾವನ್ನಪ್ಪಿರುವುದಾಗಿ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.
ಇನ್ನು ದೇಶದಲ್ಲಿ ಇದುವರೆಗೆ ಕೋವಿಡ್ 19ನಿಂದಾಗಿ 47,681 ಜನರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 8,49,092ಕ್ಕೆ ಏರಿಕೆಯಾಗಿದೆ.ಈ ಪೈಕಿ 84,050 ಜನರು ಗುಣ ಮುಖರಾಗಿದ್ದಾರೆ.
ಇನ್ನು ಕೊರೊನಾ ವೈರಸ್ನಿಂದಾಗಿ ಅಮೆರಿಕ ಸಾಮಾನ್ಯ ಸ್ಥಿತಿಗೆ ಬರಲು ಹೆಣಗಾಡುವಂತಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಪ್ರಪಂಚದಾದ್ಯಂತ ಚೀನಾ ಸೇರಿದಂತೆ ಎಲ್ಲಾ ದೇಶಗಳಿಗಿಂತಲೂ ಸದೃಢ ಆರ್ಥಿಕತೆಯಿಂದ ಕೂಡಿದ್ದ ಅಮೆರಿಕ, 1917ರ ಬಳಿಕ ಮೊದಲ ಬಾರಿಗೆ ಈ ರೀತಿಯ ಸಂಕಷ್ಟ ಎದುರಿಸುವಂತಾಗಿದೆ ಎಂದು ತಿಳಿಸಿದ್ದಾರೆ. ಇದು ಕೇವಲ ಒಂದು ವೈರಸ್ ಜ್ವರವಲ್ಲ ನಮ್ಮ ಮೇಲೆ "ದಾಳಿ" ಮಾಡಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.