ಬಂಡಾ(ಉತ್ತರಪ್ರದೇಶ):ಕಂದಾಯ ಅಧಿಕಾರಿ ಸೇರಿ ಮೂವರು ಚಲಿಸುತ್ತಿದ್ದ ಕಾರಿನಲ್ಲೇ 18 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಬಂಡಾದಲ್ಲಿ ನಡೆದಿದೆ.
ಕಂದಾಯ ಅಧಿಕಾರಿ ಸೇರಿ ಮೂವರಿಂದ ಯುವತಿ ಮೇಲೆ ಗ್ಯಾಂಗ್ ರೇಪ್! - ಯುವತಿ ಮೇಲೆ ಅತ್ಯಾಚಾರ
18 ವರ್ಷದ ಯುವತಿ ಮೇಲೆ ಮೂವರು ಕಾಮುಕರು ಚಲಿಸುತ್ತಿದ್ದ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರಪ್ರದೇಶದ ಬಂಡಾದಲ್ಲಿ ನಡೆದಿದೆ.
ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ ಕಂದಾಯ ಅಧಿಕಾರಿ ಸುಶಿ ಪಾಟೀಲ್ ಹಾಗೂ ಇಬ್ಬರು ಆಕೆಯ ಮನೆಗೆ ತೆರಳಿ ಒತ್ತಾಯ ಪೂರ್ವಕವಾಗಿ ತನ್ನನ್ನು ಕಾರಿನಲ್ಲಿ ಹಾಕಿಕೊಂಡು ಹೋಗಿ, ಈ ಕೃತ್ಯವೆಸಗಿದ್ದಾಗಿ ತಿಳಿಸಿದ್ದಾಳೆ. ತನ್ನನ್ನು ಎಳೆದುಕೊಂಡು ಹೋಗುತ್ತಿದ್ದ ವೇಳೆ ತಾಯಿ ಪ್ರತಿರೋಧ ತೋರಿದ್ರೂ ಪ್ರಯೋಜನವಾಗಿಲ್ಲ ಎಂದು ಯುವತಿ ದೂರಿನಲ್ಲಿ ವಿವರಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಯುವತಿ ಮೇಲೆ ದುಷ್ಕೃತ್ಯವೆಸಗಿದ ಬಳಿಕ ಕಾರು ನಿಲ್ಲಿಸಿದ ವೇಳೆ ಅಲ್ಲಿಂದ ಪರಾರಿಯಾಗಿ ಬಂದು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಈಗಾಗಲೇ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿರುವುದಾಗಿ ತಿಳಿಸಿದ್ದಾರೆ.