ಕರ್ನಾಟಕ

karnataka

ETV Bharat / bharat

ಅಯ್ಯಯ್ಯೋ.. ಶಸ್ತ್ರ ಚಿಕಿತ್ಸೆ ಬಳಿಕ ಗಾಯದೊಳಗೆ ಮೊಬೈಲ್​​ ಟಾರ್ಚ್​ಲೈಟ್​ ಇಟ್ಟ ಡಾಕ್ಟರ್.. - Firozabad

ಫಿರೋಜಾಬಾದ್​ ಜಿಲ್ಲೆಯ ಶಿಕೋಬಾದ್​ ವ್ಯಾಪ್ತಿಯ ಸರ್ಕಾರಿ ವೈದ್ಯನೋರ್ವ ರೋಗಿಗೆ ಸಶ್ತ್ರಚಿಕತ್ಸೆ ನೆರವೇರಿಸಿ ಮೊಬೈಲ್​ ಟಾರ್ಚ್​ಲೈಟ್‌ನ ಹೊಟ್ಟೆಯೊಳಗೆ ಇರಿಸಿ ಹೊಲಿಗೆ ಹಾಕಿದ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

By

Published : Sep 1, 2019, 5:42 PM IST

ಫಿರೋಜಬಾದ್​: ಉತ್ತರಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಎಡವಟ್ಟಿನಿಂದ ಚಿಕಿತ್ಸೆಗೆಂದು ದಾಖಲಾದ ರೋಗಿ ಪರದಾಡುವಂತಾಗಿದೆ.

ಫಿರೋಜಾಬಾದ್​ ಜಿಲ್ಲೆಯ ಶಿಕೋಬಾದ್​ ವ್ಯಾಪ್ತಿಯ ಸರ್ಕಾರಿ ವೈದ್ಯನೋರ್ವ ರೋಗಿಗೆ ಸಶ್ತ್ರಚಿಕತ್ಸೆ ನೆರವೇರಿಸಿ ಮೊಬೈಲ್​ ಟಾರ್ಚ್​ಲೈಟ್‌ನ ಹೊಟ್ಟೆಯೊಳಗೆ ಇರಿಸಿ ಹೊಲಿಗೆ ಹಾಕಿದ ಘಟನೆ ನಡೆದಿದೆ.ರಸ್ತೆ ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನಡೆಸುವ ವೇಳೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಮೊಬೈಲ್​ ಟಾರ್ಚ್​ಲೈಟ್​ನಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಬಳಿಕ ಅದನ್ನು ಶಸ್ತ್ರ ಚಿಕಿತ್ಸೆ ನಡಿಸಿದ ಗಾಯದೊಳಗೆ ಇರಿಸಿ ಹೊಲಿಗೆ ಹಾಕಿದ್ದಾರೆ.

ರೋಗಿಯ ಪೋಷಕರಿಗೆ ಗಾಯದೊಳಗೆ ಟಾರ್ಚ್​ಲೈಟ್​ ಇರುವುದನ್ನು ಗಮನಿಸಿ ಆಸ್ಪತ್ರೆ ಕರೆತಂದಿದ್ದಾರೆ. 'ಶಸ್ತ್ರಚಿಕಿತ್ಸೆಯ ವೇಳೆಯಲ್ಲಿ ವಿದ್ಯುತ್ ಇರಲಿಲ್ಲ. ಸಂಪೂರ್ಣ ಕತ್ತಲು ಆವರಿಸಿತ್ತು. ಮೊಬೈಲ್​ ಟಾರ್ಚ್​ಲೈಟ್​ನಲ್ಲಿ ಚಿಕಿತ್ಸೆ ನೀಡಿದ್ದಾರೆ' ಎಂದು ಪೋಷಕರು ಹೇಳಿದರು.ಕರ್ತವ್ಯ ನಿರತ ವೈದ್ಯ ಅಭಿಷೇಕ್​ ಮಾತನಾಡಿ, ರೋಗಿ ಈಗ ಅಸಾಯಕನಾಗಿದ್ದಾನೆ. ನಾವು ಸಾಧ್ಯವಾದಷ್ಟು ಚಿಕಿತ್ಸೆ ನೀಡುತ್ತೇವೆ. ಎಲೆಕ್ಟ್ರಿಕ್ ಪವರ್​ ಇರದಿದ್ದ ಕಾರಣ ಮೊಬೈಲ್ ಟಾರ್ಚ್​ಲೈಟ್​ನಲ್ಲಿ ಚಿಕಿತ್ಸೆ ನೀಡಬೇಕಾಯಿತು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details