ನವದೆಹಲಿ: ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಲೆಕೂದಲನ್ನು ಮಗನೇ ಟ್ರಿಮ್ ಮಾಡಿದ್ದಾರೆ. ದೇಶಾದ್ಯಂತ ಕಟ್ಟಿಂಗ್ ಶಾಪ್ಗಳು ತೆರೆದಿಲ್ಲ. ಹೀಗಾಗಿ ಸಾರ್ವಜನಿಕ ಬದುಕಿನಲ್ಲಿರುವವರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ತಮ್ಮ ಕುಟುಂಬ ಸದಸ್ಯರಲ್ಲಿಯೇ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ.
ಮಗನಿಂದ ತಲೆಕೂದಲು ಟ್ರಿಮ್ ಮಾಡಿಸಿಕೊಂಡ ಕೇಂದ್ರ ಸಚಿವ ಪಾಸ್ವಾನ್
ಲಾಕ್ಡೌನ್ ಕಾರಣಕ್ಕೆ ಹೇರ್ ಕಟಿಂಗ್ ಶಾಪ್ಗಳು ಬಂದ್ ಆಗಿವೆ. ಆದ್ರೆ ಬೆಳೆಯುತ್ತಿರುವ ತಲೆಕೂದಲು, ಗಡ್ಡಕ್ಕೆ ಕತ್ತರಿ ಹಾಕದಿರುವುದು ಕೆಲವರಿಗಂತೂ ಸಾಧ್ಯವಿಲ್ಲ. ಜನಸಾಮಾನ್ಯರು, ಚಿತ್ರನಟರು, ರಾಜಕಾರಣಿಗಳು ಈ ಕೆಲಸವನ್ನು ತಮ್ಮ ಕುಟುಂಬ ಸದಸ್ಯರಿಂದಲೇ ಮಾಡಿಸುತ್ತಿದ್ದಾರೆ. ಅನಿರ್ವಾಯತೆ ಮನುಷ್ಯನಿಗೆ ಹೊಸ ಹೊಸ ಪಾಠಗಳನ್ನೇ ಕಲಿಸಿಕೊಡುತ್ತಿದೆ ಅನ್ನೋದಕ್ಕೆ ಇತ್ತೀಚೆಗೆ ಸಾಕಷ್ಟು ನಿದರ್ಶನಗಳು ಸಿಗುತ್ತಾ ಹೋಗುತ್ತಿವೆ.
Union Minister Ram Vilas Paswan son grooming father
ಆಹಾರ ಮತ್ತು ಸರಬರಾಜು ಕೇಂದ್ರ ಸಚಿವ ಪಾಸ್ವಾನ್ ಮನೆಯಲ್ಲಿ ಪುತ್ರನಿಂದ ಕಟಿಂಗ್ ಮಾಡಿಸಿಕೊಂಡಿದ್ದು ಈ ಫೋಟೋವನ್ನು ಅವರು ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.