ಎರ್ನಾಕುಲಂ (ಕೇರಳ):ಕಲ್ಲು ಕ್ವಾರಿಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕರ್ನಾಟಕದ ಓರ್ವ ಕಾರ್ಮಿಕ ಸೇರಿದಂತೆ ಇಬ್ಬರು ವಲಸೆ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಎರ್ನಾಕುಲಂ ಜಿಲ್ಲೆಯ ಮಲಯತ್ತೂರ್ನಲ್ಲಿ ನಡೆದಿದೆ.
ಮೃತಪಟ್ಟವರನ್ನು ಚಾಮರಾಜನಗರದ ನಾಗ ಡಿ. (34), ಇನ್ನೊಬ್ಬ ತಮಿಳುನಾಡಿನ ಸೇಲಂ ನಿವಾಸಿ ಪೆರಿಯಣ್ಣನ್(38) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಲಾಕ್ಡೌನ್ ನಂತರ ಕೆಲಸಕ್ಕೆ ಆಗಮಿಸಿದ್ದರು.