ತಿರುವನಂತಪುರಂ: ದೇವರ ಸ್ವಂತ ನಾಡು ಕೇರಳಕ್ಕೆ ಆಗಸ್ಟ್ 8ರ ಶುಕ್ರವಾರ ಕರಾಳ ದಿನವಾಗಿದೆ. ಬೆಳಗ್ಗೆ ಸಂಭವಿಸಿದ ಪ್ರವಾಹದಿಂದ ಭೂಕುಸಿತದ ದುಷ್ಪರಿಣಾಮ ಮಾಸುವ ಮುನ್ನವೇ ಸಂಜೆ ವೇಳೆ ವಿಮಾನ ಅಪಘಾತಕ್ಕೀಡಾಗಿ ಒಂದೇ ದಿನದಲ್ಲಿ ಎರಡು ದುರಂತಗಳನ್ನು ಸಹಿಸಿಕೊಂಡಿದೆ.
ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ಬಳಿಯ ರಾಜಮಲೈನ ಪೆಟ್ಟಿಮುಡಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಹದಿನೈದು ಜನ ಸಾವನ್ನಪ್ಪಿದ್ದರು. ಮೃತರಲ್ಲಿ 12 ವರ್ಷದ ಬಾಲಕ ಮತ್ತು 13 ವರ್ಷದ ಬಾಲಕಿಯಲ್ಲದೆ ಎಂಟು ಪುರುಷರು ಮತ್ತು ಐದು ಮಹಿಳೆಯರು ಸೇರಿದ್ದರು. ಸುಮಾರು 50 ಮಂದಿ ಅವಶೇಷಗಳಲ್ಲಿ ಅಡಿ ಸಿಲುಕಿದ್ದರು.
ಕಳೆದ ತಿಂಗಳು ನೈಋತ್ಯ ಮಾನ್ಸೂನ್ ಪ್ರಾರಂಭ ಆದಾಗಿನಿಂದ ಕಳೆದ ಎರಡು ವರ್ಷಗಳಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದ ಉಂಟಾದ ವಿನಾಶದ ನೆನಪುಗಳನ್ನು ಈ ಮಳೆ ಮತ್ತೆ ನೆನಪಿಸಿದೆ. ಮಳೆ ಸಂಬಂಧಿತ ಅವಘಡದಲ್ಲಿ ಕಾಣೆಯಾದ ಜನರನ್ನು ಪತ್ತೆ ಹಚ್ಚುವ ಕಾರ್ಯ ಮಳೆಯೂ ಮುಂದುವರೆದಿದೆ.
ಈ ಕಹಿಘಟನೆಯ ಮಧ್ಯೆ ಶುಕ್ರವಾರ ಸಂಜೆ, ಕೋಯಿಕೋಡ್ (ಕ್ಯಾಲಿಕಟ್) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ನ ವಿಮಾನ ರನ್‌ವೇಯಿಂದ ಜಾರಿದೆ. ವಿಮಾನ ಎರಡು ಭಾಗವಾಗಿ, ಈ ದುರ್ಘಟನೆಯಲ್ಲಿ ಇಬ್ಬರು ಪೈಲಟ್ ಸೇರಿ ಇದುವರೆಗೂ 19 ಪ್ರಯಾಣಿಕರು ಮೃತಪಟ್ಟಿದ್ದಾರೆ. ನೂರಾರು ಪ್ರಯಾಣಿಕರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೊದಲ ಪ್ರವಾಹ, ಭೂಕುಸಿತ ಮತ್ತು ವಿಮಾನ ಅಪಘಾತ. ಕೇರಳವು ಒಂದು ದಿನದಲ್ಲಿ ಎರಡು ದುರಂತಗಳನ್ನು ಅನುಭವಿಸಿದ್ದು, ಇದುವರೆಗೆ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.