ತಿರುಪತಿ:ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನಿಗೆ ಅಮೆರಿಕದಲ್ಲಿರುವ ಇಬ್ಬರು ಎನ್ಆರ್ಐ ಭಕ್ತರು ಬರೋಬ್ಬರಿ 14 ಕೋಟಿ ರೂ ಕಾಣಿಕೆಯಾಗಿ ನೀಡಿದ್ದಾರೆಂದು ಅಲ್ಲಿನ ಆಡಳಿತ ಮಂಡಳಿ ತಿಳಿಸಿದೆ.
ತಿರುಪತಿ ತಿಮ್ಮಪ್ಪನಿಗೆ ಇಬ್ಬರು ಎನ್ಆರ್ಐ ಭಕ್ತರಿಂದ 14 ಕೋಟಿ ರೂ.ಕಾಣಿಕೆ
ತಿರುಪತಿ ತಿಮ್ಮಪ್ಪನಿಗೆ ಇಬ್ಬರು ಎನ್ಆರ್ಐ ಭಕ್ತರು 14 ಕೋಟಿ ರೂ ಕಾಣಿಕೆಯಾಗಿ ನೀಡಿದ್ದಾರೆಂದು ಟಿಡಿಪಿ ಆಡಳಿತ ಮಂಡಳಿ ತಿಳಿಸಿದೆ.
ತಿರುಪತಿ ತಿಮ್ಮಪ್ಪ/Balaji Temple
ಅಮೆರಿಕದಿಂದಲೇ ತಿರುಪತಿ ತಿಮ್ಮಪ್ಪನ ಬ್ಯಾಂಕ್ ಖಾತೆಗೆ ಹಣ ರವಾನೆ ಮಾಡಲಾಗಿದೆ ಎಂದು ತಿರುಪತಿ ದೇವಸ್ಥಾನದ(ಟಿಟಿಡಿ)ನ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಳಿದ್ದಾರೆ. ಸುಮಾರು 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನಕ್ಕೆ ಪ್ರತಿ ವರ್ಷ ಕೋಟ್ಯಂತರ ರೂ ಹರಿದು ಬರುತ್ತದೆ.
ಹಿಂದೂ ಧರ್ಮದ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಈ ಸ್ಥಳಕ್ಕೆ ದೇಶ-ವಿದೇಶಗಳಿಂದಲೂ ತಿರುಪತಿ ದರ್ಶನಕ್ಕೆ ಜನರು ಆಗಮಿಸುತ್ತಾರೆ. ಅತಿ ಶ್ರೀಮಂತ ದೇವಾಲಯ ಎಂದು ಗುರುತಿಸಿಕೊಂಡಿರುವ ಈ ದೇಗುಲದ ವಾರ್ಷಿಕ ಆದಾಯ ರೂ.600ಕೋಟಿಗೂ ಹೆಚ್ಚಿದೆ.