ತಿರುಪತಿ ತಿಮ್ಮಪ್ಪನ ಸ್ಥಿರಾಸ್ತಿ ಹರಾಜಿಗೆ ಟಿಟಿಡಿ ಆದೇಶ - ಆಂದ್ರಪ್ರದೇಶ್ ಸುದ್ದಿ
ತಿರುಪತಿ ತಿಮ್ಮಪ್ಪ
15:28 May 23
ತಿಮ್ಮಪ್ಪನ ಸ್ಥಿರಾಸ್ತಿ ಹರಾಜಿಗೆ ಟಿಟಿಡಿ ನಿರ್ಧಾರ
ಆಂಧ್ರಪ್ರದೇಶ: ತಮಿಳುನಾಡಿನಲ್ಲಿರುವ ಟಿಟಿಡಿ ದೇವಸ್ಥಾನದ 23 ಆಸ್ತಿಗಳನ್ನು ಬಹಿರಂಗ ಹರಾಜಿಗೆ ಆದೇಶ ಜಾರಿಯಾಗಿದೆ. ಫೆ. 29 ರಂದು ನಡೆದ ಧರ್ಮಕರ್ತ ಮಂಡಳಿ ಸಮಾವೇಶದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ತಮಿಳುನಾಡಿನಲ್ಲಿರುವ 23 ಪ್ರಾಂತ್ಯಗಳಲ್ಲಿನ ಸ್ಥಿರಾಸ್ತಿಯ ಹರಾಜಿನ ಪ್ರಕ್ರಿಯೆಗಾಗಿ 2 ತಂಡಗಳಲ್ಲಿ ಎಂಟು ಮಂದಿ ಅಧಿಕಾರಿಗಳನ್ನು ಟಿಟಿಡಿ ನೇಮಿಸಿದೆ. ದೇವಸ್ಥಾನದ ಸ್ವತ್ತುಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ನಿಯಮಗಳನ್ನು ಅಂತಿಮಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
Last Updated : May 23, 2020, 5:02 PM IST