ಕರ್ನಾಟಕ

karnataka

ETV Bharat / bharat

ಉಗ್ರರ ದಮನಕ್ಕೆ ಮತ್ತಷ್ಟು ಏರ್​ ಸ್ಟ್ರೈಕ್ ಮಾಡಲು ಬಲ ಬಂದಿದೆ​... ಏರ್​ ಚೀಫ್​ ಮಾರ್ಷಲ್​ ಹೀಗೆ ಹೇಳಿದ್ದು ಯಾಕೆ?

ಭಾರತೀಯ ವಾಯಸೇನಾ ದಿನ ನಿಮಿತ್ತ ಐಎಎಫ್​ನ ನೂತನ ಮುಖ್ಯಸ್ಥ ಏರ್​​ ಚೀಫ್​ ಮಾರ್ಷಲ್​​ ರಾಕೇಶ್​ ಕುಮಾರ್​ ಭದೌರಿಯಾ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ಸೈನಿಕರ ಸೇವೆಯನ್ನು ಸ್ಮರಿಸಿದರು. ಭಯೋತ್ಪಾದನೆ ಮೆಟ್ಟಿ ನಿಲ್ಲಲು ರಾಜಕೀಯ ನಾಯಕತ್ವದಿಂದಲೇ ನಮಗೆ ಸಂಪೂರ್ಣ ಬೆಂಬಲ ಸಿಕ್ಕಿದೆ. ಗಡಿ ಮತ್ತು ಗಡಿ ಆಚೆಗಿನ ಭಯೋತ್ಪಾದನೆ ಮಟ್ಟ ಹಾಕಲು ಈಚೆಗೆ ನಡೆಸಿದ ಏರ್​ ಸ್ಟ್ರೈಕ್​ಗಳು ಬಲ ನೀಡಿವೆ ಎಂದರು.

ರಾಕೇಶ್​ ಕುಮಾರ್​ ಭದೌರಿಯಾ

By

Published : Oct 8, 2019, 9:25 AM IST

Updated : Oct 8, 2019, 9:48 AM IST

ನವದೆಹಲಿ: ಇಂದು ಭಾರತೀಯ ವಾಯಸೇನಾ ದಿನ. ಈ ನಿಮಿತ್ತ ವಾಯುಸೇನಾ ನೂತನ ಮುಖ್ಯಸ್ಥ ಏರ್​​ ಚೀಫ್​ ಮಾರ್ಷಲ್​​ ರಾಕೇಶ್​ ಕುಮಾರ್​ ಭದೌರಿಯಾ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಸೈನಿಕರಿಗೆ ನಮನ ಸಲ್ಲಿಕೆ ಮಾಡಿದರು.

ಬಳಿಕ ಮಾತನಾಡಿದ ಅವರು, ದೇಶ ಇಂದು ನೆರೆಯ ರಾಷ್ಟ್ರದಿಂದ ಯುದ್ಧ ಭೀತಿ ಹಾಗೂ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ದೇಶದ ರಕ್ಷಣಾ ವ್ಯವಸ್ಥೆ ಪುಲ್ವಾಮ ದಾಳಿಯಂತಹ ಪ್ರಕರಣಗಳು ನಿರಂತರ ಬೆದರಿಕೆ ಒಡ್ಡುತ್ತಿವೆ. ಇವುಗಳನ್ನ ಮೆಟ್ಟಿ ನಿಲ್ಲುವ ಸವಾಲುಗಳು ನಮ್ಮದೆರಿಗೆ ಇವೆ ಎಂದರು.

ಭಯೋತ್ಪಾದಕ ದಾಳಿಗಳನ್ನ ಮೆಟ್ಟಿ ನಿಲ್ಲಲು ನಾವು ಸಮರ್ಥರಾಗಿದ್ದು, ಇದಕ್ಕೆ ರಾಜಕೀಯ ನಾಯಕತ್ವದಿಂದಲೇ ನಮಗೆ ಸಂಪೂರ್ಣ ಬೆಂಬಲ ಸಿಕ್ಕಿದೆ. ಇದು ಉಗ್ರರ ದಮನಕ್ಕೆ ಮತ್ತಷ್ಟು ಏರ್​ ಸ್ಟ್ರೈಕ್​ಗಳನ್ನ ಮಾಡಲು ಬಲ ನೀಡಿದೆ ಎಂದು ನೂತನ ವಾಯುಸೇನಾ ಮುಖ್ಯಸ್ಥ ರಾಕೇಶ್​ ಹೇಳಿದರು.

ಇದೇ ವೇಳೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೂಸೇನಾ ಮುಖ್ಯಸ್ಥ ಬಿಪಿನ್​ ರಾವತ್​, ನೌಕಾ ಪಡೆ ಮುಖ್ಯಸ್ಥ ಕರಮ್​ಬೀರ್​​ ಸಿಂಗ್​​ ಸಹ ನಮನ ಸಲ್ಲಿಸಿದರು.

Last Updated : Oct 8, 2019, 9:48 AM IST

ABOUT THE AUTHOR

...view details