ನವದೆಹಲಿ: ಕೊರೊನಾ ವೈರಸ್ ಬಗ್ಗೆ ವಾಟ್ಸ್ಆ್ಯಪ್, ಟಿಕ್ಟಾಕ್ ಮೂಲಕ ತಪ್ಪು ಮಾಹಿತಿ ಹರಿಬಿಡಲಾಗುತ್ತಿದೆ ಎಂದು ಪೊಲೀಸರು ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ.
ವಾಟ್ಸ್ಆ್ಯಪ್, ಟಿಕ್ಟಾಕ್ ವಿಡಿಯೋ ಮೂಲಕ ಕೊರೊನಾ ಕುರಿತು ತಪ್ಪು ಮಾಹಿತಿ - ಟಿಕ್ಟಾಕ್
ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ವಾಟ್ಸ್ಆ್ಯಪ್, ಟಿಕ್ಟಾಕ್ನಲ್ಲಿ ಕೊರೊನಾ ಬಗ್ಗೆ ಸುಳ್ಳು ಮಾಹಿತಿ ನೀಡುವ ವಿಡಿಯೋಗಳು ಹರಿದಾಡುತ್ತಿವೆ.
ಕಳೆದ ಐದು ದಿನಗಳಲ್ಲಿ ಬರೋಬ್ಬರಿ 30 ಸಾವಿರ ಕೊರೊನಾ ಕುರಿತು ಸುಳ್ಳು ಮಾಹಿತಿ ನೀಡುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಾದ ವಾಟ್ಸ್ಆ್ಯಪ್, ಟಿಕ್ಟಾಕ್ನಲ್ಲಿ ವೈರಲ್ ಆಗಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಇಂಥಾ ವಿಡಿಯೋಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಅಡ್ಡಿಯಾಗಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಈ ವಿಡಿಯೋಗಳ ಸತ್ಯಾಂಶ ತಿಳಿದುಕೊಳ್ಳಲು ಸೆಕ್ಯೂರಿಟಿ ರಿಸರ್ಚ್ ತಜ್ಞರನ್ನು ನೇಮಿಸಲಾಗಿದೆ. ಈಗಾಗಲೇ ಬರೋಬ್ಬರಿ 1 ಕೋಟಿ ಜನರು ಈ ರೀತಿಯ ವಿಡಿಯೋ ವೀಕ್ಷಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.